ಕಳೆದ 10 ವರ್ಷಕ್ಕಿಂತಲು ಹೆಚ್ಚಿನ ಸಮಯದಿಂದ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿರುವ ನಟಿ ನಿಧಿ ಸುಬ್ಬಯ್ಯ. ಸ್ಯಾಂಡಲ್ ವುಡ್ ಗೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟು, ನಂತರ ಬಾಲಿವುಡ್ ನಲ್ಲಿ ಕೂಡ ಮಿಂಚಿದ ನಟಿ ನಿಧಿ ಸುಬ್ಬಯ್ಯ. ಹಿಂದಿ ಚಿತ್ರರಂಗದ ಹೆಸರಾಂತ ನಟ ಅಕ್ಷಯ್ ಕುಮಾರ್ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ. ನಿಧಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ. ನಿಜ ಜೀವನದಲ್ಲಿ ನಿಧಿ ಅವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ, ನಿಧಿ ಸುಬ್ಬಯ್ಯ ಅವರ ಪತಿ ಯಾರು ಗೊತ್ತಾ, ಇವರ ಕುಟುಂಬ ಹೇಗಿದೆ ಗೊತ್ತಾ! ತಿಳಿಯಲು ಮುಂದೆ ಓದಿ..
ನಿಧಿ ಸುಬ್ಬಯ್ಯ ಅವರ ನಿಕ್ ನೇಮ್ ನಿಧಿ. ನಿಧಿ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯಲ್ಲಾದರು ಇವರು ಓದಿದ್ದು ಬೆಳೆದಿದ್ದು ಎಲ್ಲವೂ ಮೈಸೂರಿನಲ್ಲಿ. ನಿಧಿ ಅವರು ಹುಟ್ಟಿದ್ದು 1986 ಫೆಬ್ರವರಿ 16 ರಂದು. ಈಗ ನಿಧಿ ಅವರಿಗೆ 36 ವರ್ಷ ವಯಸ್ಸಾಗಿದೆ. ನಿಧಿ ಅವರ ಇಡೀ ಕುಟುಂಬ ನೆಲೆಸಿರುವುದು ಮೈಸೂರಿನಲ್ಲಿ ಹಾಗಾಗಿ ನಿಧಿ ಅವರು ಹೆಚ್ಚಾಗಿ ಮೈಸೂರಿನಲ್ಲೇ ಇರುತ್ತಾರೆ.
ನಿಧಿ ಅವರು ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು ಇವರು ಓದಿದ್ದು ಮೈಸೂರಿನ ಎಸ್.ಜೆ.ಸಿ.ಇ ಕಾಲೇಜಿನಲ್ಲಿ. ನಿಧಿ ಅವರ ಹೈಟ್ 5.5 ಅಡಿ, ಇವರ ತೂಕ 69ಕೆಜಿ. ನಿಧಿ ಸುಬ್ಬಯ್ಯ ಅವರ ಪತಿಯ ಜೊತೆಗಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು.
ಇವರ ಇಷ್ಟದ ಜಾಗ ಗೋವಾ. ನಿಧಿ ಅವರ ಇಷ್ಟದ ಊಟ ಚಿ-ಕನ್ ಚಾ-ಪ್ಸ್ ಮತ್ತು ಬಿ-ರಿಯಾನಿ. ನಿಧಿ ಅವರು ಬಿಡುವಿನ ಸಮಯದಲ್ಲಿ ಹೆಚ್ಚಾಗಿ ಪುಸ್ತಕ ಓದುತ್ತಾರೆ ಮತ್ತು ಅಡುಗೆ ಮಾಡುತ್ತಾರೆ. ಕಾಲೇಜು ದಿನಗಳಲ್ಲಿ ಸ್ಪೋರ್ಟ್ಸ್ ಮತ್ತು ಎನ್. ಸಿ.ಸಿ ಯಲ್ಲಿ ಬಹಳ ಸಕ್ರಿಯರಾಗಿದ್ದರು ನಿಧಿ. ಅದರಿಂದ ಹಲವಾರು ಸರ್ಟಿಫಿಕೇಟ್ ಪಡೆದಿದ್ದಾರೆ. ನಿಧಿ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಆಸಕ್ತಿ ಹೊಂದಿದರು. ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದರು. ನಿಧಿ ಸುಬ್ಬಯ್ಯ ಪತಿಯ ಹೆಸರು ಲವೇಶ್ ಖೈರಾಜನಿ, ಇವರು ಕೂಡ ಸಿನ್ಮಾ ಫೀಲ್ಡ್ ನಲ್ಲಿ ಹಾಗು ಸ್ವಂತ ಬಿಸಿನೆಸ್ ಹೊಂದಿದ್ದಾರೆ. ನಿಧಿ ಸುಬ್ಬಯ್ಯ ಅವರ ಪತಿಯ ಜೊತೆಗಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು.
ನಂತರ ಸ್ಯಾಂಡಲ್ ವುಡ್ ನಲ್ಲಿ ಹೀರೋಯಿನ್ ಆಗುವ ಅವಕಾಶ ಸಿಕ್ಕಿತು. ಅಭಿಮಾನಿ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು ನಿಧಿ. ಅಭಿಮಾನಿ ನಂತರ ಪಂಚರಂಗಿ, ಅಣ್ಣಾ ಬಾo-ಡ್, ಕೃಷ್ಣನ್ ಮ್ಯಾರೇಜ್ ಸ್ಟೋರಿ ಅಂತಹ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದರು. ಜೊತೆಗೆ ಬಾಲಿವುಡ್ ನಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದರು. ನಿಧಿ ಅವರು ಇತ್ತೀಚೆಗೆ ಹ್ಯಾಟ್ರಿಕ್ ಹೀರೊ ಶಿವ ರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾದಲ್ಲಿ ನಟಿಸಿದರು. ಈಗ ಬಿಗ್ ಬಾಸ್ ಮನೆಯೊಳಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಆಟ ಆಡುತ್ತಾರೆ, ಎಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿರಲಿದ್ದಾರೆ ಎಂದು ನೋಡಬೇಕು.
ಸದ್ಯ ನಟಿ ನಿಧಿ ಸುಬ್ಬಯ್ಯ ಅವರು ಬಿಗ್ ಬಾಸ್ ಕನ್ನಡದ ಸ್ಪರ್ದಿಯಾಗಿದ್ದು ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಲವಾರು ಅಭಿಮಾನಿಗಳು ಇದ್ದಾರೆ. ನಿಧಿ ಹಾಗು ಅವರ ಕುಟುಂಬದ ಸುಂದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಬಿಗ್ ಬಾಸ್ ಕನ್ನಡ, ಕನ್ನಡ ನಟ ನಟಿಯರ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.