ನಮಸ್ತೆ ಸ್ನೇಹಿತರೆ, ನಿಧಿ ಸುಬ್ಬಯ್ಯನವರು ಬಿಗ್ ಬಾಸ್ ನಲ್ಲಿ ತುಂಬಾ ಅದ್ಬುತವಾಗಿ ಆಟ ಆಡುತ್ತಿದ್ದಾರೆ.. ಸತತ ಮೂರು ವಾರಗಳ ಕಾಲ ನಾಮಿನೇಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ಸೇಫ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಎಲ್ಲಾ ಕಂಟೆಸ್ಟಂಟ್ ಗಳ ಹಿಂದೆ ಒಂದು ನೋವಿನ ಕಥೆ ಇರುತ್ತದೆ.. ಅದರಂತೆ ನಿಧಿ ಸುಬ್ಬಯ್ಯನವರ ಹಿಂದೆ ಕೂಡ ಒಂದು ನೋವಿನ ಕಥೆ ಇದೆ. ಅದು ಅವರ ದಾಂಪತ್ಯ ಜೀವನದ ಕಥೆ. ನಿಧಿ ಸುಬ್ಬಯ್ಯನವರು ಮದುವೆಯಾದ ಹುಡುಗನ ಹೆಸರು ಲಾವೇಶ್.. ನಿಧಿ ಸುಬ್ಬಯ್ಯನವರು ಲಾವೇಶ್ ಅವರನ್ನು ಮೊದಲು ಕಾಮನ್ ಪ್ರೇಂಡ್ ಮೂಲಕ ಬೇಟಿಯಾದರು.

Subbaiah

ಲಾವೇಶ್ ಅವರು ದೊಡ್ಡ ಉದ್ಯಮಿ ಹಾಗು ಶ್ರೀಮಂತ ವ್ಯಕ್ತಿ.. ಸ್ವಲ್ಪ ದಿನಗಳ ಕಾಲ ನಿಧಿ ಸುಬ್ಬಯ್ಯನವರು ಮತ್ತು ಲಾವೇಶ್ ಡೇಟ್ ಮಾಡುತ್ತಾರೆ. ನಂತರ 2017 ರಲ್ಲಿ ನಿಧಿ ಸುಬ್ಬಯ್ಯ ಹಾಗು ಲಾವೇಶ್ ನವರು ಕೊಡವ ಸಂಪ್ರದಾಯದ ಪ್ರಕಾರ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಮದುವೆಯಾದ ಸ್ವಲ್ಪ ದಿನಗಳ ಕಾಲ ನಿಧಿ ಸುಬ್ಬಯ್ಯ ಮತ್ತು ಲಾವೇಶ್ ಅವರು ತುಂಬಾ ಅದ್ಬುತವಾಗಿ ಜೀವನ ಮಾಡುತ್ತಾರೆ.. ಆದರೆ ತಿಂಗಳು ಕಳೆದಂತೆ ನಿಧಿ ಸುಬ್ಬಯ್ಯ ಹಾಗು ಲಾವೇಶ್ ಅವರ ಮಧ್ಯೆ ಮನಸ್ಥಾಪ ಬರಲು ಶುರುವಾಗುತ್ತದೆ. ಅದು ಸಣ್ಣಪುಟ್ಟ ಜಗಳಕ್ಕೂ ಕೂಡ ಕಾರಣವಾಗುತ್ತದೆ..

Subbaiah

ಈ ಎಲ್ಲಾ ಕಾರಣಗಳಿಂದ ನಿಧಿ ಸುಬ್ಬಯ್ಯನವರು ಹಾಗು ಲಾವೇಶ್ ಅವರು 2019 ರಲ್ಲಿ ದೂರವಾಗುತ್ತಾರೆ. ಕೇವಲ ಎರಡು ವರ್ಷಗಳ ಕಾಲ ಇವರಿಬ್ಬರೂ ದಂಪತಿಗಳಾಗಿ ಜೀವನ ಮಾಡಿರುತ್ತಾರೆ.. ಈಗ ಲಾವೇಶ್ ಅವರು ಇನ್ನೊಂದು ಹುಡುಗಿಯ ಸಂಬಂಧದಲ್ಲಿ ಇದ್ದು ಇದರ ಬಗ್ಗೆ ನಿಧಿ ಸುಬ್ಬಯ್ಯ ಅವರು ಯಾವುದೇ ಒಂದು ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗು ಬಿಗ್ ಬಾಸ್ ಮನೆಯಲ್ಲಿ ಕೂಡ ಇದರ ಬಗ್ಗೆ ನಿಧಿ ಸುಬ್ಬಯ್ಯ ಅವರು ಚರ್ಚೆ ಕೂಡ ಮಾಡಿಲ್ಲ.. ಯಾವುದೇ ಒಂದು ಮಹಿಳೆಗೆ ಮದುವೆಯಾದ ಎರಡು ವರ್ಷಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಎಂದರೆ ಅದೊಂದು ದೊಡ್ಡ ಸವಾಲು. ಇದನ್ನು ನಿಧಿ ಸುಬ್ಬಯ್ಯ ಅವರು ಧೈರ್ಯದಿಂದ ಎದುರಿಸುತ್ತಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •