ಒಳ್ಳೆಯ ವಿದ್ಯಾಭ್ಯಾಸವೆ ಒಳ್ಳೆಯ ಭವಿಷ್ಯವನ್ನು ರೂಪಿಸುತ್ತದೆಆದರೆ ವಿದ್ಯಾರ್ಥಿಗಳು ಸರಿಯಾದ ದಾರಿಯನ್ನು ಬಿಟ್ಟು ಕೆಟ್ಟ ದಾರಿಯನ್ನು ಹಿಡಿದರೆ ಅಂಥವರ ಜೀವನ ಕೆಟ್ಟ ಆಲೋಚನೆಗಳಿಂದ ಮುಂದುವರಿಯುತ್ತದೆ.ಆದರೆ ಯಾವುದೇ ಕಾರಣಕ್ಕೂ ಈ 7 ವಿಷಯಗಳಿಂದ ದೂರ ಇರಬೇಕು ಅಂತ ಆಚಾರ್ಯ ಚಾಣಕ್ಯ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.ಆ 7ವಿಷಯಗಳು ಯಾವುವು ಎಂದು ತಿಳಿಯೋಣ ಬನ್ನಿ.

1)ಶೃಂಗಾರದ ಮೇಲೆ ಆಸಕ್ತಿ:ವಿದ್ಯಾರ್ಥಿಗಳು ಇದರ ಮೇಲೆ ಇರುವ ಮೋಹದಿಂದ ದೂರ ಇರಬೇಕು.ಯಾವ ವಿದ್ಯಾರ್ಥಿಯು ಇದರ ಮೇಲೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಾನೋ ಆ ವಿದ್ಯಾರ್ಥಿಗೆ ಓದಿನ ಮೇಲೆ ಗಮನ ಇರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಕಾಮ ಕ್ರೀಡೆಗಳಿಂದ ದೂರ ಇರುವುದೇ ಉತ್ತಮ.

2 )ಕೋಪ:ಕೋಪ ಎನ್ನುವುದು ಪ್ರತಿ ಮನುಷ್ಯನಿಗೂ ದೊಡ್ಡ ಶತ್ರುವಾಗುತ್ತದೆ.ಕೋಪ ಬಂದ ಕೂಡಲೇ ಪ್ರತಿ ವ್ಯಕ್ತಿಯಲ್ಲಿ ಆಲೋಚನೆಯ ಶಕ್ತಿ ಅರ್ಥಮಾಡಿಕೊಳ್ಳುವ ಶಕ್ತಿ ಕುಗ್ಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಕೋಪದಿಂದ ದೂರ ಇದ್ರೆ ತುಂಬಾ ಒಳ್ಳೆಯದು.

3)ದುರಾಸೆ:ದುರಾಸೆ ಎನ್ನುವುದು ಓದಿಕೊಳ್ಳುವ ಭಾಗದಲ್ಲಿ ದೊಡ್ಡ ಸಮಸ್ಯೆ.ಅದಕ್ಕೆ ದೊಡ್ಡವರು ಹೇಳ್ತಾರೆ ದುರಾಸೆ ಎನ್ನುವುದು ದುಃಖಕ್ಕೆ ದಾರಿ ಎಂದು ಆದ್ದರಿಂದ ವಿದ್ಯಾರ್ಥಿಗಳು ದುರಾಸೆ ಎನ್ನುವುದನ್ನು ಬಿಡುವುದು ತುಂಬಾ ಒಳ್ಳೆಯದು.

4)ರುಚಿ:ಸಾಧಾರಣ ವಿದ್ಯಾರ್ಥಿಗಳ ಜೀವನವನ್ನು 1 ತಪಸ್ಸಿನ ರೀತಿ ಭಾವಿಸಲಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ರುಚಿಕರವಾದ ಊಟದ ಬಗ್ಗೆ ಆಲೋಚಿಸುವುದನ್ನು ಬಿಡಬೇಕು.ಉಪ್ಪು ಖಾರ ಇಲ್ಲದಂತಹ ಆಹಾರ ಪದಾರ್ಥಗಳನ್ನು ತೆಗೆದುಕೊಂಡರೆ ತುಂಬಾ ಒಳ್ಳೆಯದು.

5)ಅಲಂಕಾರ;ವಿದ್ಯಾರ್ಥಿಗಳ ಜೀವನದಲ್ಲಿ ಯಾವಾಗಲೂ ಸಾಧಾರಣ ಜೀವನವನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮವಾದ ಮಾರ್ಗ.ಹೆಚ್ಚಾಗಿ ಅಲಂಕಾರ ಮಾಡಿಕೊಳ್ಳುವ ವಿದ್ಯಾರ್ಥಿಗಳ ಮನಸ್ಸು ಓದಿನ ಕಡೆ ಇರುವುದಿಲ್ಲ.ಹಾಗಾಗಿ ಹೆಚ್ಚಿನ ಅಲಂಕಾರವನ್ನು ಬಿಟ್ಟು ಒಂದೇ ರೀತಿಯ ಉಡುಪುಗಳ ಮೇಲೆ ಗಮನ ಇಡುವುದು ತುಂಬಾ ಒಳ್ಳೆಯದು.

6)ವಿನೋದ;ಆಟಗಳಲ್ಲಿ ತುಂಬಾ ಸಮಯ ವಿನೋದವನ್ನು ಪಡೆಯುವುದು ಕಷ್ಟಕ್ಕೆ ದಾರಿ ತೋರಿಸುವ ಸೂಚನೆಯಾಗಿರುತ್ತದೆ.ಆದ್ದರಿಂದ ಸ್ಪೋರ್ಟ್ಸ್ ,ಮೊಬೈಲ್ ,ಟಿವಿಯಿಂದ ಸ್ವಲ್ಪ ಮಟ್ಟಿಗೆ ದೂರ ಇರುವುದು ತುಂಬಾ ಒಳ್ಳೆಯದು.

7)ನಿದ್ರೆ:ಆರೋಗ್ಯಕರವಾದ ದೇಹಕ್ಕೆ ನಿದ್ದೆ ತುಂಬಾ ಮುಖ್ಯಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಓದಿನ ಮೇಲೆ ಶ್ರದ್ಧೆ ಜಾಸ್ತಿ ಆಗುತ್ತದೆ.ಹಾಗೆ ಜಾಸ್ತಿ ಸಮಯ ನಿದ್ರಿಸುವ ವಿದ್ಯಾರ್ಥಿಗಳಿಗೆ ಸಮಯ ಭಾವನೆ ಟೈಂ ಸೆನ್ಸ್ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •