strange-people

ಇಂತಹ ವಿಚಿತ್ರ ಜನರನ್ನ ನಿಮ್ಮ ಜೀವನದಲ್ಲಿ ನೋಡಿರಲ್ಲ!

Home Kannada News/ಸುದ್ದಿಗಳು

ನಮ್ಮ ಪ್ರಪಂಚದಲ್ಲಿ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ನೋಡಿದ್ರೆ ಈ ರೀತಿ ಕೂಡ ನಡೆಯುತ್ತಾ ಅನ್ಸುತ್ತೆ. ಇದು ಅವರ ಕರ್ಮ ಅಂತ ಕೆಲವರು,ಇನ್ನು ಕೆಲವರು ದೇವರ ಶಾಪ ಅಂತ ಮಾತಾಡಿಕೊಳ್ಳುತ್ತಾರೆ. ನಾವೀಗ ನಿಮಗೆ ಅಧಿಕ ಅಂಗದಿಂದ ಹುಟ್ಟಿ ಆ ಕಿರುಕುಳವನ್ನು ತಾಳಲಾರದೆ ಸಾವನ್ನಪ್ಪಿದವರ ಬಗ್ಗೆ ಹಾಗೂ ಅಧಿಕ ಅಂಗಗಳಿಂದ ಹುಟ್ಟಿ ಅದರಿಂದ ಫೇಮಸ್ ಆಗಿ ಸಾವನ್ನಪ್ಪಿದವರ ಬಗ್ಗೆ ಹಾಗೂ ಫೇಮಸ್ ಆಗೋದಕ್ಕೆ ಕೃತಕ ಅಂಗಗಳನ್ನು ಮಾಡಿಸಿಕೊಂಡು ಜೀವನವನ್ನು ಮಾಡುತ್ತಿರುವವರ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ ಎಡ್ವರ್ಡ್ ಮಾರ್ಡ್ರಾಕ್ ಇವರಿಗೆ ಒಂದೇ ತಲೆಗೆ ಎರಡು ಮುಖಗಳಿವೆ.ಒಂದು ಮುಂದೆ, ಒಂದು ಹಿಂದೆ. ಮುಂದೆ ಇರುವ ಮುಖದಲ್ಲಿ ಎಲ್ಲರ ಹಾಗೆ ಮಾತನಾಡುತ್ತಾ,ಊಟ ಮಾಡುತ್ತಾ ಇರುತ್ತಾರೆ. ಆದ್ರೆ ಹಿಂದೆ ಇರುವ ಮುಖದಲ್ಲಿ ಕೆಲವು ಫೀಲಿಂಗ್ಸ್ ,ಸ್ಮೈಲ್ ಅನ್ನು ಮಾತ್ರ ಕೊಡಲಾಗುತ್ತೆ. ತುಂಬಾ ವಿಚಿತ್ರವಾಗಿದೆಯಲ್ಲ. ಆದ್ರೆ ರಾತ್ರಿ ಮಲಗುವ ಸಮಯದಲ್ಲಿ ಎರಡನೇ ಮುಖ ತುಂಬಾ ವಿಚಿತ್ರವಾದ ಸೌಂಡ್ ಗಳನ್ನ ಮಾಡುತ್ತವೆ ಅಂತೆ. ಆದರೆ ಈ ಶಬ್ದ ಅವರಿಗೆ ಮಾತ್ರ ಕೇಳಿಸುತ್ತದೆ. ಇದನ್ನು ತಾಳಲಾರದೆ ಅವರು ಆತ್ಮಹತ್ಯೆಯನ್ನು ಮಾಡಿಕೊಂಡು ಸಾವನ್ನಪ್ಪುತ್ತಾರೆ.

strange-people

ಎರಡನೆಯದಾದ ಟೈಸನ್ ಸ್ಮಿತ್ ಇವರಿಗೆ ಒಂದು ಸಾರಿ ಹೃದಯಾಘಾತ ಬಂದು ಹಾಸ್ಪಿಟಲ್ ಗೆ ಹೋಗುತ್ತಾರೆ. ಡಾಕ್ಟರ್ ಎಲ್ಲರ ಹಾಗೆ ಚಿಕಿತ್ಸೆ ಮಾಡಿ ಮನೆಗೆ ಕಲಿಸುತ್ತಾರೆ. ಮನೆಗೆ ಹೋದ ನಂತರ ಮತ್ತೆ ಹೃದಯಾಘಾತವಾಗುತ್ತೆ. ಮತ್ತೆ ಹಾಸ್ಪಿಟಲ್ಗೆ ಕರೆದುಕೊಂಡು ಬರುತ್ತಾರೆ. ಈ ಬಾರಿ ಡಾಕ್ಟರ್ ಸ್ಕ್ಯಾನ್ ಮಾಡಿ ಪರೀಕ್ಷೆ ಮಾಡುತ್ತಾರೆ. ಈ ಬಾರಿ ಎರಡನೇ ಹೃದಯವಿದೆ ಅಂತ ಗೊತ್ತಾಗುತ್ತೆ. ಡಾಕ್ಟರ್ ತುಂಬಾ ಕಷ್ಟಪಟ್ಟು ಚಿಕಿತ್ಸೆ ಮಾಡಿ ಮನೆಗೆ ಕಲಿಸುತ್ತಾರೆ. ಇನ್ನೂ ಇವರು ಆರೋಗ್ಯವಾಗಿ ಜೀವಂತವಾಗಿದ್ದಾರೆ.

ಮೂರನೆಯದಾದ ರೆಬೇಕಃ ಮಾರ್ಟಿನೆಸ್ ಈ ಮಗು ಎರಡು ತಲೆಗಳಿಂದ ಹುಟ್ಟುತ್ತಾಳೆ. ಆದರೆ ಈ ಎರಡು ತಲೆಗಳಲ್ಲಿ ಒಂದೇ ತಲೆಯಲ್ಲಿ ಮಾತ್ರ ಮೆದುಳು ಇರುತ್ತದೆ ಇನ್ನೊಂದರಲ್ಲಿ ಇರುವುದಿಲ್ಲ. ಈ ತಲೆಗಳನ್ನು ಬೇರೆ ಮಾಡಬೇಕಂತ ಡಾಕ್ಟರ್ ತುಂಬಾ ಕಷ್ಟಪಟ್ಟು 11 ಗಂಟೆಗಳ ಕಾಲ ಆಪರೇಷನ್ ಮಾಡುತ್ತಾರೆ. ಆದರೆ ತುಂಬಾ ರಕ್ತಸ್ರಾವದಿಂದ ಮಗೂ ಸಾವನ್ನಪ್ಪುತ್ತಾಳೆ. ನಾಲ್ಕನೆಯದಾದ ಜಾಸ್ಮಿನ್ ಟ್ರೇ ದೇವಿಲ್ ಅನ್ನೋ ಮಹಿಳೆ ಮೂರನೇ ಬ್ರೆಸ್ಟ್ ನಿಂದ ಕಾಲಕಳೆಯುತ್ತಿದ್ದಾರೆ. ಇವರು ಬೇಕಂತನೆ ಮೂರನೇ ಕೃತಕ ಬ್ರೆಸ್ಟ್ ಅನ್ನು ಮಾಡಿಕೊಳ್ಳುತ್ತಾರೆ. ಕಾರಣ ಏನು ಅಂತ ಕೇಳಿದರೆ ತನ್ನ ಹತ್ತಿರ ಬರುವ ಪುರುಷರಿಗೆ ತಾನು ಆಕರ್ಷಕವಾಗಿ ಕಾಣಲು ಅಂತ ಹೇಳುತ್ತಾರೆ.

ಮೂರನೇ ಕೃತಕ ಬ್ರೆಸ್ಟ್ ಮಾಡುವುದಕ್ಕೆ 15ಜನ ಸರ್ಜನ್ ಭೇಟಿಯಾಗುತ್ತಾರೆ. ಆದರೆ ಎಲ್ಲರೂ ತಿರಸ್ಕರಿಸುತ್ತಾರೆ. ಕೊನೆಗೆ ಒಬ್ಬರನ್ನು ಇಂಪ್ರೆಸ್ ಮಾಡಿ ಮೂರನೇ ಕೃತಕ ಬ್ರೆಸ್ಟ್ ಅನ್ನು ಮಾಡಿಸಿಕೊಳ್ಳುತ್ತಾರೆ. ಐದನೆಯದಾದ ದೀಪಕ್ ಪಸ್ವನ್ ಈತ ನಮ್ಮ ದೇಶದ ಹುಡುಗ. ಈತ ಅಧಿಕ ಅಂಗಗಳಿಂದ ಹುಟ್ಟುತ್ತಾನೆ.ಅದರಲ್ಲಿ ಕಾಲು ಕೈಗಳು ಕೂಡ ಇದೆ. ಇವನನ್ನು ಆಪರೇಷನ್ ಮಾಡಿ ತೆಗೆಯಬೇಕು ಅಂತ ಸುಮಾರು ನಲವತ್ತನಾಲ್ಕು ಲಕ್ಷ ರೂಪಾಯಿ ಖರ್ಚಾಗುತ್ತದೆ . ಆದರೆ ಅವರ ತಂದೆ-ತಾಯಿ ಬಡವರಾಗಿರುವುದರಿಂದ ಆಪರೇಷನ್ ಮಾಡಿಸುವುದಕ್ಕೆ ಆಗುವುದಿಲ್ಲ. ಊರಿನ ಜನ ಹುಡುಗನನ್ನು ವಿಷ್ಣುಮೂರ್ತಿಯ ಅವತಾರ ಎಂದು ಪೂಜೆ ಮಾಡುತ್ತಾರೆ. 

ಆದರೆ ಅದು ತಂದೆ-ತಾಯಿಗೆ ಇಷ್ಟ ಇರುವುದಿಲ್ಲ. ಹೀಗೆ ಇರಬೇಕಾದರೆ ಕೆಲವು ಸೇವಾ ಸಂಸ್ಥೆಗಳಿಗೆ ವಿಷಯ ಗೊತ್ತಾಗುತ್ತದೆ. ಆಗ ಅವರು ಚಿಕಿತ್ಸೆ ಮಾಡಿಸಿ ಅವುಗಳನ್ನು ತೆಗೆಯುತ್ತಾರೆ. ಈಗ ಈ ಹುಡುಗ ಎಲ್ಲರ ಹಾಗೆ ಇದ್ದಾನೆ.ಆರನೆಯದಾದ ಜೋಸೆಫೀನ್ ಮಾರ್ಟೆಲ್ ಕಾರ್ಬಿನ್ ಈ ಮಹಿಳೆ 1868 ರಲ್ಲಿ ಅಮೆರಿಕದಲ್ಲಿ ಹುಟ್ಟಿದ್ದಾರೆ. ಇವರಿಗೆ ನಾಲ್ಕು ಕಾಲುಗಳಿವೆ. ಇವರು ಸರ್ಕಸ್’ನಲ್ಲಿ ಆಗಿನ ಕಾಲದಲ್ಲಿ ತುಂಬಾನೇ ಫೇಮಸ್ ಆಗುತ್ತಾರೆ. ಇದ್ದರೂ ಇವರಿಗೆ ಐದು ಜನ ಹೆಣ್ಣು ಮಕ್ಕಳು ಕೂಡ ಇರುತ್ತಾರೆ. ಇವರು 1928 ರಲ್ಲಿ ಸಾವನ್ನಪ್ಪುತ್ತಾರೆ. 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...