ಕ್ರಿಕೆಟ್ ಜಗತ್ತು ಕಂಡ ಅದ್ಭುತ ಆಟಗಾರ ಮಹೇಂದ್ರ ಸಿಂಗ್ ಧೋನಿ. ಜಗತ್ತಿನ ಅತೀ ಶ್ರೇಷ್ಟ ಕ್ರಿಕೆಟ್ ಕ್ಯಾಪ್ಟನ್ ಗಳಲ್ಲಿ ಒಬ್ಬರು. ಕಳೆದ ವರ್ಷ ತಾನೇ ಅಂತರಾಷ್ತ್ರೀಯ ಕ್ರಿಕೆಟ್ ಗೆ ವಿಧಾಯ ಘೋಷಿಸಿದ ಧೋನಿ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಹೇಂದ್ರ ಸಿಂಗ್ ಧೋನಿಯವರ ಹೊಸ ಅವತಾರದ ಫೋಟೋವೊಂದು ಅಭಿಮಾನಿಗಳಿಗೆ ಅಚ್ಚರಿಯಾಗುವಂತೆ ಮಾಡಿದೆ. ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿರುವ ಧೋನಿಯ ಈ ಫೋಟೋಗೆ ಒಬ್ಬಬ್ಬರು ಒಂದೊಂದು ರೀತಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಹೌದು, ಬೌದ್ಧ ಭಿಕ್ಷುವಿನಂತೆ ಈ ಫೋಟೋದಲ್ಲಿ ೩೯ ವರ್ಷ ವಯಸ್ಸಿನ ಧೋನಿ ಕಾಣಿಸಿಕೊಂಡಿದ್ದಾರೆ.

Storm

ಇನ್ನು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನೆಡೆಸುತ್ತಿರುವ ಧೋನಿಯ ಈ ಫೋಟೋವನ್ನ ದಕ್ಷಿಣ ಭಾರತದಲ್ಲಿ ಶೂಟ್ ಮಾಡಲಾಗಿದೆ ಎಂದು ಕೆಲ ಅಭಿಮಾನಿಗಳ ಅಭಿಪ್ರಾಯವಾಗಿದೆ. ಇದುವರೆಗಿನ ಬೇರೆಲ್ಲಾ ಫೋಟೋ ಲುಕ್ ಗಳಿಗಿಂತ ಈ ಫೋಟೋ ವಿಭಿನ್ನವಾಗಿದ್ದ, ಅದ್ಭುತವಾಗಿ ಮೂಡಿಬಂದಿರುವ ಈ ಫೋಟೋ ನೋಡಿ, ಅವರ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಹೊಸ ಅವತಾರ ಕಂಡು ಅಚ್ಚರಿಗೊಳಗಾಗಿದ್ದಾರೆ. ಆದರೆ ಸದ್ಯಕ್ಕೆ ಈ ಫೋಟೋವನ್ನ ಏತಕ್ಕಾಗಿ ಶೂಟ್ ಮಾಡಲಾಗಿದೆ ಎಂಬುದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಇದು ದಕ್ಷಿಣ ಭಾರತದ ಯಾವುದೊ ಒಂದರ ಪ್ರಾಜೆಕ್ಟ್ ಗಾಗಿ ಧೋನಿ ಈ ರೀತಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರಬಹುದು ಎನ್ನಲಾಗುತ್ತಿದೆ.

Storm

ಯು’ದ್ಧ ಕಲೆಗಳನ್ನ ಕಲಿಸುವ ಭಾರತದ ಯಾವುದೊ ತರಭೇತಿ ಶಿಬಿರದಲ್ಲಿ ಈ ಫೋಟೋ ಶೂಟ್ ಮಾಡಲಾಗಿದೆ ಅನ್ನೋ ಮಾಹಿತಿ ಕೂಡ ಇದೆ. ತುಂಬಾ ರಹಸ್ಯವಾಗಿ ಈ ಪ್ರಾಜೆಕ್ಟ್ ನಡೀತಿದೆ ಎನ್ನಲಾಗುತ್ತಿದ್ದು ಮಾಧ್ಯಮಗಳಲ್ಲೂ ಕೂಡ ಈ ಫೋಟೋದು ಕುರಿತು ಮಾಹಿತಿ ಸೋರಿಕೆಯಾಗಿಲ್ಲ ಎಂಬುವುದೇ ಅಚ್ಚರಿಯಾಗಿದೆ. ಒಟ್ಟಿನಲ್ಲಿ ಆಗಾಗ ತಮ್ಮ ವಿಭಿನ್ನ ಲುಕ್ ಗಳಿಂದ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ನ್ಯೂ ಗೆಟಪ್ ನ ಫೋಟೋದ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಎಲ್ಲರನ್ನು ಕುತೂಹಲಕ್ಕೆ ತಳ್ಳುವಂತೆ ಮಾಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •