ನಮಸ್ತೆ ಸ್ನೇಹಿತರೆ, ಈಗಿನ ಪ್ರಪಂಚದಲ್ಲಿ ಕಾಲ ತುಂಬಾನೇ ಬದಲಾವಣೆಯಾಗಿದೆ, ಯಾಕೆಂದರೆ ಕಳ್ಳತನ ಆಸ್ತಿ ಹಣಕ್ಕಾಗಿ ಒಬ್ಬರಿಗೊಬ್ಬರು ಹೊಡೆದಾಡುವ ಪರಿಸ್ಥಿತಿ ಈಗಿನ ಕಾಲದಲ್ಲಿ ಹೆಚ್ಚಾಗಿ ನೋಡಿದ್ದೇವೆ.. ಅಲ್ಲದೆ ರಸ್ತೆಯಗಳಲ್ಲಿ ಕೇವಲ ಐವತ್ತು ನೂರು ರೂಪಾಯಿಗೆ ಕೊಲೆ ಮಾಡಿರುವುದನ್ನ ಕೇಳಿರುತ್ತೇವೆ.. ಅದರೆ ತರಕಾರಿ ಮಾರಾಟ ಮಾಡುತ್ತಿದ್ದ ಮಣಿಕಂಠ ಎನ್ನುವ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೇ‌ ಆಶ್ಚರ್ಯ ಪಡ್ತೀರಾ.. ಹೌದು ಸ್ನೇಹಿತರೆ ಮಣಿಕಂಠ ಎನ್ನುವ ವ್ಯಕ್ತಿ ಚೆನ್ನೈನ ಮಾರ್ಕೆಟ್ ನಲ್ಲಿ ರಸ್ತೆಯ ಪಕ್ಕ ಹಲವು ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದ.. ಇನ್ನೂ ಮಣಿಕಂಠಂಗೆ‌ 40‌ವರ್ಷ ವಯಸ್ಸಾಗಿತ್ತು, ಮಣಿಕಂಠಂ ಅಂಗಡಿಗೆ ನೂರಾರು ಜನರು ತರಕಾರಿ ಖರೀದಿ ಮಾಡಲು ಬರುತ್ತಿದ್ದರು.. ಇದೇರೀತಿ ಒಂದು ದಿನ ರುಕ್ಮಿಣಿ‌ ಎನ್ನುವ ಮಹಿಳೆ ಮಣಿಕಂಠಂ ಅಂಗಡಿಯಲ್ಲಿ ತರಕಾರಿ ಖರೀದಿ ಮಾಡಲು ಬಂದಿದ್ದರು.. ಆಗ ರುಕ್ಮಿಣಿ ಮಣಿಕಂಠಂ ಅಂಗಡಿಯಲ್ಲಿ ನಾಲ್ಕೈದು ರೀತಿಯ ತರಕಾರಿಯನ್ನು ಖರೀದಿ ಮಾಡಿ ತನ್ನ ಮನೆಗೆ ತೆಗೆದುಕೊಂಡು ಹೋದಳು.. ಸಂಜೆ ಆಗಿದ್ದರಿಂದ‌ ರುಕ್ಮಿಣಿ ತರಕಾರಿಗಳನ್ನು ಅಡುಗೆ ಮನೆಯಲ್ಲಿ ಇಟ್ಟು ಸ್ವಲ್ಪ ಊಟ ಮಾಡಿ ಮಲಗಿಕೊಂಡಳು..

Store

ಮರುದಿನ ಬೆಳಗ್ಗೆ ಎದ್ದ ರುಕ್ಮಿಣಿಗೆ ನಾನು ಮಾರುಕಟ್ಟೆಗೆ ಹೋದಾಗ ತೆಗೆದು ಕೊಂಡು ಹೋಗಿದ್ದ ಪರ್ಸ್ ಅನ್ನು ಅಲ್ಲಿಯೇ ಎಲ್ಲೋ ಬಿಟ್ಟು ಬಂದಿರೋದು ನೆನಪಾಯಿತ್ತು.. ಆಗ ರುಕ್ಮಿಣಿ‌ ನನ್ನ ಪರ್ಸ್ ಮಾರುಕಟ್ಟೆಯಲ್ಲಿ ಕಳೆದುಹೋಯಿತು ನನ್ನ ಪರ್ಸ್ ನಲ್ಲಿ 20 ಸಾವಿರ ಬೆಲೆಯ ಮೊಬೈಲ್ ಫೋನ್ 25 ಸಾವಿರ ಹಣವನ್ನು ಇಟ್ಟಿದೆ ಎಂದು ತಿಳಿದು ನಂತರ ಎಲ್ಲವೂ ಕಳೆದು ಹೋಯಿತು ಎಂದು ಆಳಲು ಶುರುಮಾಡಿದಳು.. ಅನಂತರ ಮಾರುಕಟ್ಟೆಯಿಂದ ತರಕಾರಿ ತಂದಿದ್ದ ಬ್ಯಾಗ್ ನಲ್ಲಿ ಕೂಡ ಹುಡುಕಲು‌ ಶುರುಮಾಡಿದಳು ಆದರೆ ಎಷ್ಟೇ ಹುಡುಕಿದರು ಪರ್ಸ್ ಸಿಗಲಿಲ್ಲ.. ಮಾರ್ಕೆಟ್ ನಲ್ಲಿ ಪರ್ಸ್ ಕಳೆದುಕೊಂಡಿರುವ ವಿಷಯವನ್ನು ಪಕ್ಕದ ಮನೆಯ ತನ್ನ ಸ್ನೇಹಿತೆಯ ಬಳಿ ಹೇಳಿಕೊಂಡಳು.. ನಂತರ ಅವರಿಬ್ಬರು ಸೇರಿ ಕಳೆದು ಹೋದ ರುಕ್ಮಿಣಿಯ ಮೊಬೈಲ್ ನಂಬರ್‌ ಗೆ ಕರೆ ಮಾಡಿದ್ದರು.. ಆದರೆ‌ ಎಷ್ಟು ಬಾರಿ ರುಕ್ಮಿಣಿ ಮೊಬೈಲ್ ಗೆ ಕರೆ ಮಾಡಿದ್ದರು ಆಗ ಯಾರು ಕೂಡ ಪೋನ್ ರೀಸಿವ್ ಮಾಡಲಿಲ್ಲ.

ಆಗ ರುಕ್ಮಿಣಿ ನನ್ನ ಪರ್ಸ್ ಮೊಬೈಲ್ 25 ಸಾವಿರ ಹಣ ಕೂಡ ಹೋಯಿತು ಎಂದು ತಿಳಿದು ಕೆಲವು ದಿನಗಳ ಕಾಲ ಕಣ್ಣಿರಿಟ್ಟು, ನಂತರ ರುಕ್ಮಿಣಿ ತನ್ನ ಪರ್ಸ್ ಬಗ್ಗೆ ಮರೆತು ಬೇರೆ ಕೆಲಸದ ಕಡೆಗೆ ಗಮನ ಹರಿಸಿದಳು.. ಒಂದು ತಿಂಗಳುಗಳ ಕಾಲ ಹೊರಗೆ ಎಲ್ಲಿಯೂ ಹೋಗದ‌ ರುಕ್ಮಿಣಿ, ಒಂದು ತಿಂಗಳು ‌ಕಳೆದ ನಂತರ ಪೂನಾ ತನ್ನ ಮನೆಗೆ ತರಕಾರಿ ತರಲು ತನ್ನ ಪರ್ಸ್ ಕಳೆದು ಕೊಂಡಿದ್ದ ಮಾರ್ಕೆಟ್ ಗೆ ಬಂದಳು.. ಮೊದಲು ತರಕಾರಿ ತೆಗೆದುಕೊಂಡ ಹೋಗಿದ್ದ ಮಣಿಕಂಠಂ ಅಂಗಡಿಗೆ ಪುನಾ ರುಕ್ಮಿಣಿ ಬಂದಳು.. ಆದರೆ ರುಕ್ಮಿಣಿ ಕಳೆದು ಹೋದ ಪರ್ಸ್ ಬಗ್ಗೆ ಪೂರ್ತಿಯಾಗಿ ಮರೆತು ಹೋಗಿದ್ದಳು.. ಇನ್ನೂ ಮಣಿಕಂಠಂ ತನ್ನ ಅಂಗಡಿಗೆ

Store ಪೂನಾ ರುಕ್ಮಿಣಿ ಬಂದಿದ್ದನ್ನು ನೋಡಿ ಅವರನ್ನು ಗುರುತು ಹಿಡಿದ ಮಣಿಕಂಠಂ ಆಗ ಮೇಡಂ ನೀವು ಒಂದು ತಿಂಗಳ ಹಿಂದೆ ನಮ್ಮ ಅಂಗಡಿಯಲ್ಲಿ ತರಕಾರಿ ಖರೀದಿ ಮಾಡಲು ಬಂದಾಗ ನಿಮ್ಮ ಪರ್ಸ್ ಅನ್ನು ಇಲ್ಲಿಯೇ ಬಿಟ್ಟು ಹೋಗಿದ್ದೀರಾ, ನಿಮ್ಮ ಪರ್ಸ್ ಅನ್ನು ನಿಮಗೆ ವಾಪಸ್ ಕೊಡಲು ತಿಂಗಳಿನಿಂದ ನಿಮಗಾಗಿ ಕಾಯುತ್ತಿದೆ ಎಂದು ಹೇಳಿ ರುಕ್ಮಿಣಿ ಕಳೆದುಕೊಂಡ ಪರ್ಸ್ ಅನ್ನು‌ ಪುನಾ ವಾಪಸ್ ಅವರಿಗೆ ನೀಡಿದ..

ಆಗ ರುಕ್ಮಿಣಿ ಸಂತೋಷದಿಂದ ತನ್ನ. ಪರ್ಸ್ ಅನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿ ಹಣ ಮತ್ತು ಪೋನ್ ಆಗೆಯೇ ಇತ್ತು.. ಆಗ ರುಕ್ಮಿಣಿ ನಾನು ಈ ಮೊಬೈಲ್ ಗೆ ಎಷ್ಟು ಬಾರಿ ಕಾಲ್ ಮಾಡಿದರು ಪೋನ್ ರೀಸಿವ್ ಮಾಡಿ ನಿಮ್ಮ ಪರ್ಸ್ ಸಿಕ್ಕಿದೆ ಎಂದು ಯಾಕೆ ಹೇಳಲಿಲ್ಲ ಎಂದು ಕೇಳಿದಳು.. ಮಣಿಕಂಠಂ ಬೇರೆಯವರ ವಸ್ತು ನಮಗೆ ಬೇಡ ಮೇಡಂ ನಾನು ನನ್ನ ಕೈಯಲ್ಲಿ ಸಹಾ ಬೇರೆಯವರಿಗೆ ಸೇರಿದ ವಸ್ತುಗಳು ಮುಟ್ಟುವುದಿಲ್ಲ, ಒಂದುವೇಳೆ ನಿಮ್ಮ ಪೋನ್ ರೀಸಿವ್ ಮಾಡಲು ನಾನು ಪರ್ಸ್ ಓಪನ್ ಮಾಡಿದ್ರೇ ಅದು ತಪ್ಪಾಗಿ ಬಿಡುತ್ತಿತ್ತು ಅದಕ್ಕಾಗಿ ನಾನು ಪೋನ್ ಎಷ್ಟು ಬಾರಿ ರಿಂಗ್ ಆದರೂ ನಾನು ಅದಯ ರೀಸಿವ್ ಮಾಡಲಿಲ್ಲ ಎಂದು ಹೇಳಿದನು.. ನಂತರ ರುಕ್ಮಿಣಿಗೆ ನೀವು ಪರ್ಸ್ ನಲ್ಲಿ ಇಟ್ಟಿದ ವಸ್ತುಗಳು ಸರಿಯಾಗಿ ಇದೀಯಾ ನೋಡಿಕೊಳ್ಳಿ ಎಂದು ಹೇಳಿದ.. ಆಗ ರುಕ್ಮಿಣಿ‌ ಇಂತಹ ಮೋಸದ ಪ್ರಪಂಚದಲ್ಲಿ ಮಣಿಕಂಠಂ ನಂತಹ ವ್ಯಕ್ತಿಗಳು ಇನ್ನೂ‌ ಇದ್ದಾರ ಎಂದು ಆಶ್ಚರ್ಯ ಪಟ್ಟಳು.. ತನ್ನ ಪರ್ಸ್ ವಾಪಸ್ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದರು.. ಸ್ನೇಹಿತರೆ ಮಣಿಕಂಠಂ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •