ಸಾಮಾನ್ಯವಾಗಿ ಕೆಲವರಿಗೆ ದೇಹದ ತೂಕ ಹೆಚ್ಚಾಗಿ ಇವುದಿಲ್ಲ ಆದರೆ ಹೊಟ್ಟೆ ಭಾಗದಲ್ಲಿ ಮಾತ್ರ ಕೊಬ್ಬು ಶೇಖರಣೆಯಾಗುತ್ತದೆ‌. ದೇಹದ ಇತರ ಭಾಗಗಳು ಸಮನಾಗಿರುತ್ತದೆ ಆದರೆ ಹೊಟ್ಟೆಯ ಮುಂಭಾಗದಲ್ಲಿ ಮಾತ್ರ ಹೆಚ್ಚು ಬೊಜ್ಜು ಶೇಖರಣೆಯಾಗುತ್ತದೆ. ಹಾಗಾಗಿ ಇಂದು ಕೇವಲ ಹೊಟ್ಟೆಯ ಬೊಜ್ಜನ್ನು ಮಾತ್ರ ಕರಗಿಸುವಂತಹ ಅದ್ಭುತವಾದ ಮನೆಮದ್ದನ್ನು ತಿಳಿಸುತ್ತೇವೆ. ಈ ಒಂದು ಮನೆಮದ್ದನ್ನು ರಾತ್ರಿಯ ಸಮಯ ಒಂದು ಗ್ಲಾಸ್ ಸೇವಿಸಿ ಮಲಗಿದರೆ ನಿಮಗೆ ರಾತ್ರಿಪೂರ್ತಿ ಇದರ ಒಂದು ಪರಿಣಾಮ ನಿಮ್ಮ ದೇಹದ ಮೇಲೆ ಬೀರುತ್ತದೆ. ಇನ್ನೂ ಈ ಒಂದು ಮನೆಮದ್ದಿಗೆ ಬೇಕಾಗುವ ಪದಾರ್ಥಗಳು ನಿಂಬೆಹಣ್ಣು, ಗ್ರೀನ್ ಟೀ, ಆಪಲ್ ಸೈಡರ್ ವಿನಿಗರ್, ಚಕ್ಕೆ ಪೌಡರ್ ಇದಿಷ್ಟು ಪದಾರ್ಥಗಳು ಇದ್ದಾರೆ ಈ ಮನೆ ಮದ್ದನ್ನು ಸುಲಭವಾಗಿ ತಯಾರಿಸಬಹುದಾಗಿದೆ‌.

ಮೊದಲಿಗೆ ಒಂದು ಗ್ಲಾಸ್ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಕ್ಕ ಗ್ರೀನ್ ಟೀ ಬ್ಯಾಗ್ ಹಾಕಿ, ನಂತರ ಅರ್ಧ ನಿಂಬೆಹಣ್ಣಿನ ರಸ ಹಾಗೂ ಕಾಲು ಟೇಬಲ್ ಸ್ಪೂನ್ ಚಕ್ಕೆ ಪೌಡರ್ ಹಾಗೂ ಒಂದು ಟೇಬಲ್ ಸ್ಪೂನ್ ಆಪಲ್ ಸೈಡರ್ ವಿನಿಗರ್ ಹಾಕಿ ಚೆನ್ನಾಗಿ ಎಲ್ಲವನ್ನೂ ಕೂಡ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಮಿಕ್ಸ್ ಮಾಡಿಕೊಂಡಿರುವ ಈ ಮಿಶ್ರಣವನ್ನು ಒಂದು ನಿಮಿಷ ಹಾಗೇಯೆ ಬಿಡಬೇಕು ಬಿಸಿ ನೀರಿನಲ್ಲಿ ನಾವು ಹಾಕಿದಂತಹ ಎಲ್ಲಾ ಪದಾರ್ಥಗಳ ಸಂಪೂರ್ಣ ಸಾರಾಂಶ ಬಿಡುವ ತನಕ ನಾವು ಕಾಯಬೇಕು. ನಂತರ ಈ ಒಂದು ನೀರನ್ನು ಉಗುರು ಬೆಚ್ಚಗಿರುವಾಗ ರಾತ್ರಿಯ ಸಮಯ ಕುಡಿಯಬೇಕು ಹೀಗೆ ಕುಡಿಯುವುದರಿಂದ ಅನಗತ್ಯವಾದ ಬೊಜ್ಜು ಕರಗುತ್ತದೆ ಅದರಲ್ಲೂ ಹೊಟ್ಟೆಯ ಬೊಜ್ಜು ಕರಗಿಸಲು ಅದ್ಭುತವಾದಂತಹ ರಾಮಬಾಣ ಅಂತಾನೆ ಹೇಳಬಹುದು.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •