ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟರಲ್ಲಿ ಒಬ್ಬರು ಟೆನ್ನಿಸ್ ಕೃಷ್ಣ. ಇವರು ನಟಿಸಿದ ಪಾತ್ರಗಳು ಹಲವಾರು. ಕನ್ನಡದಲ್ಲಿ 600ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ, ರೆಕಾರ್ಡ್ ಸೃಷ್ಟಿಸಿದ ಕೀರ್ತಿ ಟೆನ್ನಿಸ್ ಕೃಷ್ಣ ಅವರದ್ದು. ದೊಡ್ಡಣ್ಣ ಹಾಗೂ ಟೆನ್ನಿಸ್ ಕೃಷ್ಣ ಕಾಂಬಿನೇಷನ್ ಇರುವ ಹಾಸ್ಯದೃಶ್ಯಗಳನ್ನು ಕನ್ನಡ ಸಿನಿಪ್ರಿಯರು ಮರೆಯುವ ಹಾಗಿಲ್ಲ. ಟೆನ್ನಿಸ್ ಕೃಷ್ಣ ಅವರು ಗ’ಡಿಬಿಡಿ ಗಂಡ ಸಿನಿಮಾದಲ್ಲಿ ಹೇಳಿದ ಮಾರಮ್ಮನ ಡಿ-ಸ್ಕೊ ಡೈಲಾಗ್ ಬಹಳ ಫೇಮಸ್. ತಮ್ಮ ಹಾಸ್ಯಪ್ರಜ್ಞೆಯಿಂದ ಎಲ್ಲರನ್ನು ನಗಿಸಿದ ಟೆನ್ನಿಸ್ ಕೃಷ್ಣ ಅವರು ನಿಜ ಜೀವನದಲ್ಲಿ ಸ್ವಂತದವರಿಂದಲೇ ಮೋ-ಸ ಹೋಗಿದ್ದಾರೆ. ಇವರ ಜೀವನದಲ್ಲಿ ನಡೆದಿದ್ದೇನು ಗೊತ್ತಾ? ತಿಳಿಯಲು ಮುಂದೆ ಓದಿ..


ಮೂರು ದಶಕಗಳಿಗೂ ಹೆಚ್ಚಿನ ಸಮಯದಿಂದ ಕನ್ನಡ ಸಿನಿಪ್ರಿಯರನ್ನು ರಂಜಿಸುತ್ತಾ ಬಂದಿದ್ದಾರೆ ನಟ ಟೆನ್ನಿಸ್ ಕೃಷ್ಣ. ಟೆನ್ನಿಸ್ ಕೃಷ್ಣ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು ಸಹಾಯಕ ನಿರ್ದೇಶಕನಾಗಿ. ಇವರು 1961 ರ ಜೂನ್ ತಿಂಗಳಿನಲ್ಲಿ, ಶಾಮಣ್ಣ ಮತ್ತು ಲಕ್ಷ್ಮಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಎರಡನೇ ಮಗನಾಗಿ ಜನಿಸಿದರು. ಇವರದ್ದು ಸಾಮಾನ್ಯ ಮಧ್ಯಮವರ್ಗದ ಕುಟುಂಬ ಆಗಿತ್ತು. ಕೃಷ್ಣ ಅವರು ಪ್ರಾಥಮಿಕ ಶಿಕ್ಷಣ ಪಡೆಯುವಾಗ ಅವರು ಇದ್ದಿದ್ದು ಶಂಕರ ಪುರಂನಲ್ಲಿ. ಶಂಕರ ಪುರಂ, ಹನುಮಂತ ನಗರ, ಮೆಜೆಸ್ಟಿಕ್, ಬಸವನಗುಡಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ವಿದ್ಯಾರ್ಥಿ ಜೀವನ ಕಳೆದರು.

ಕೃಷ್ಣ ಅವರು ಮಿಡ್ಲ್ ಸ್ಕೂಲ್ ನಲ್ಲಿ ಓದುತ್ತಿದ್ದಾಗ, ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ದಾರಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯನಟ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಸಂಸ್ಥೆ ಇತ್ತು. ಅಲ್ಲಿ ನಾಟಕ ಕಲಾವಿದರು ತೊಡುತ್ತಿದ್ದ ವೇಷ ಭೂಷಣ, ಸಂಭಾಷಣೆ, ನಾಟಕದ ಸಂಗೀತದ ಸದ್ದು ಈ ಎಲ್ಲವನ್ನು ಟೆನ್ನಿಸ್ ಕೃಷ್ಣ ಕೇಳಿಸಿಕೊಳ್ಳುತ್ತಿದ್ದರು. ಆಗಿನಿಂದಲೇ ಅವರಿಗೆ ಬ-ಣ್ಣದ ಲೋಕದ ಮೇಲೆ ಆಸಕ್ತಿ ಮೂಡಿತು. ಹೈಸ್ಕೂಲ್ ಓದುತ್ತಿದ್ದಾಗ ಕಷ್ಟಪಟ್ಟು ತಂದೆಯನ್ನು ಒಪ್ಪಿಸಿ ಹಿರಣ್ಣಯ್ಯ ಅವರ ಗರಡಿಗೆ ಪ್ರವೇಶ ಪಡೆದರು ಟೆನ್ನಿಸ್ ಕೃಷ್ಣ. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಹಿರಣ್ಣಯ್ಯ ಅವರು ಆದಷ್ಟು ಬೇಗ ಪ್ರಧಾನ ಪಾತ್ರಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಟೆನ್ನಿಸ್ ಕೃಷ್ಣ ಅವರಿಗೆ ನಟನೆ ಕಲಿಸಿದ್ದು ಮಾಸ್ಟರ್ ಹಿರಣ್ಣಯ್ಯ ಅವರು. ಪಿಯುಸಿ ದಿನಗಳಲ್ಲಿ ಹಲವಾರು ನಾಟಕ ಮತ್ತು ಸ್ಕಿಟ್ ಗಳಲ್ಲಿ ಟೆನ್ನಿಸ್ ಕೃಷ್ಣ ನಟಿಸಿದರು.

ನಂತರ 1987-88 ರ ಸಮಯದಲ್ಲಿ ಮೊದಲ ಬಾರಿಗೆ ಹಿರಿತೆರೆ ಪ್ರವೇಶ ಮಾಡಿದರು. ಇವರು ಮೊದಲಿಗೆ ಅಪರೂಪದ ಕಥೆ ಎನ್ನುವ ಸಣ್ಣ ಬಜೆಟ್ ನ ಸಿನಿಮಾದಲ್ಲಿ ಒಂದು ಪುಟ್ಟ ಪಾತ್ರ ನಿರ್ವಹಿಸುವ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಈ ಸಿನಿಮಾದ ನಿರ್ಮಾಪಕ ಕೃಷ್ಣ ಅವರ ತಂದೆಗೆ ಆಪ್ತರಾಗಿದ್ದ ಕಾರಣ ಮತ್ತು ಹಿರಣ್ಣಯ್ಯ ಅವರ ಸೂಚನೆ ಮೇರೆಗೆ ಕೃಷ್ಣ ಅವರಿಗೆ ನಟನೆಯ ಅವಕಾಶ ಸಿಕ್ಕಿತು. ಅಪರೂಪದ ಕಥೆ ಸಿನಿಮಾಗೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು ಟೆನ್ನಿಸ್ ಕೃಷ್ಣ, ನಂತರ ಕನ್ನಡದ ಖ್ಯಾತ ಬರಹಗಾರ ಆರ್.ಎನ್. ಜಯಗೋಪಾಲ್ ಅವರು ನಿರ್ದೇಶಿಸಿದ ಹೃದಯ ಪಲ್ಲವಿ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶಿಸಿದ ತರ್ಕ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಟೆನ್ನಿಸ್ ಕೃಷ್ಣ ಅವರಿಗೆ ದೊಡ್ಡ ಬ್ರೇ-ಕ್ ಸಿಕ್ಕಿದ್ದು ತ್ರಿ-ನೇತ್ರ ಸಿನಿಮಾ ಮೂಲಕ.

ರಾಜ್ ಕಿಶೋರ್ ಅವರು ನಿರ್ದೇಶನ ಮಾಡಿದ್ದ ತ್ರಿ-ನೇತ್ರ ಸಿನಿಮಾದ ಪ್ರಮುಖ ಹಾಸ್ಯನಟನ ಪಾತ್ರಕ್ಕೆ ಮೊದಲು ಖ್ಯಾತನಟ ಏನ್. ಎಸ್.ರಾವ್ ಅವರು ಆಯ್ಕೆಯಾಗಿದ್ದರು. ಆದರೆ ಎನ್. ಎಸ್.ರಾವ್ ಅವರ ದಿಢೀರ್ ನಿಧನದ ನಂತರ ಈ ಪಾತ್ರಕ್ಕೆ ಟೆನ್ನಿಸ್ ಕೃಷ್ಣ ಆಯ್ಕೆಯಾದರು. ಈ ಸಿನಿಮಾದಲ್ಲಿ ಇವರದ್ದು ಪ್ರಮುಖ ಪಾತ್ರ ಆಗಿದ್ದರಿಂದ, ಆ ಸಮಯಕ್ಕಾಗಲೇ ಕನ್ನಡ ಚಿತ್ರರಂಗದಲ್ಲಿ ಹೊನ್ನವಳ್ಳಿ ಕೃಷ್ಣ ಇದ್ದರು, ಕೃಷ್ಣ ಹೆಸರಿನಲ್ಲಿ ಯೂನಿಟ್ ಹುಡುಗರು ಕೂಡ ಇದ್ದರು ಎನ್ನುವ ಕಾರಣದಿಂದ ಕೃಷ್ಣ ಹೆಸರಿನ ಜೊತೆ ಏನಾದರೂ ಕ್ಯಾಚಿ ಆಗಿ ಇರಬೇಕು ಎಂದು ರಾಜ್ ಕಿಶೋರ್ ಅವರು ಹೇಳಿದಾಗ ಕೃಷ್ಣ ಅವರು ಒಂದಷ್ಟು ಹೆಸರುಗಳನ್ನು ಬರೆದುಕೊಂಡು ಬಂದಿದ್ದರು. ಅದರಲ್ಲಿ ಟೆನ್ನಿಸ್ ಕೃಷ್ಣ ಎನ್ನುವುದು ಒಂದಾಗಿತ್ತು. ಟೆನ್ನಿಸ್ ಎನ್ನುವ ಪದ ಜೊತೆಸೇರಲು ಕಾರಣ, ಕೃಷ್ಣ ಅವರ ತಂದೆ ಟೆನ್ನಿಸ್ ಕೋಚ್ ಆಗಿದ್ದರು. ವೀರೇಂದ್ರ ಹೆಗ್ಡೆ ಮತ್ತು ಇನ್ನಿತರ ವ್ಯಕ್ತಿಗಳಿಗೆ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡಿದ್ದರು.

ಹಾಗಾಗಿ ತಂದೆಯ ಆಟದ ಹೆಸರನ್ನು ತನ್ಮ ಹೆಸರಿನ ಜೊತೆ ಸೇರಿಸಿಕೊಂಡರು ಕೃಷ್ಣ. ತ್ರಿನೇತ್ರ ಸಿನಿಮಾ ಮೂಲಕ ಇವರ ಹೆಸರು ಟೆನ್ನಿಸ್ ಕೃಷ್ಣ ಆಯಿತು. 1994 ರಲ್ಲಿ ಅಪ್ಪ ನo-ಜಪ್ಪ ಮಗ ಗುo-ಜಪ್ಪ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಾಯಕನಾದರು ಟೆನ್ನಿಸ್ ಕೃಷ್ಣ. ಈ ಸಿನಿಮಾ ಯೆಶಸ್ವಿ ಆದರೂ ನಂತರ ಟೆನ್ನಿಸ್ ಕೃಷ್ಣ ಅವರಿಗೆ ಹೀರೋ ಆಗಿ ಅವಕಾಶ ಸಿಗಲಿಲ್ಲ. ಆದರೆ, 1994ರ ನಂತರ ಟೆನ್ನಿಸ್ ಕೃಷ್ಣ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಹಾಸ್ಯನಟನಾಗಿ ನಟಿಸಿದರು ಕೃಷ್ಣ. ಟೆನ್ನಿಸ್ ಕೃಷ್ಣ ಮತ್ತು ದೊಡ್ಡಣ್ಣ ಅವರ ಕಾಂಬಿನೇಷನ್ ನ ಹಾಸ್ಯದೃಶ್ಯಗಳು ಕನ್ನಡ ಸಿನಿಪ್ರಿಯರಿಗೆ ಬಹಳ ಮನರಂಜನೆ ನೀಡುತ್ತಿದ್ದವು. ನೈಜವಾಗಿ ಗo-ಭೀರ ಸ್ವಭಾವ ಹೊಂದಿರುವ ಟೆನ್ನಿಸ್ ಕೃಷ್ಣ ಅವರು ತೆರೆಮೇಲೆ ಅದಕ್ಕೆ ತದ್ವಿರುದ್ಧವಾಗಿ ಹಾಸ್ಯ ಮಾಡುತ್ತಿದ್ದರು. ಇಲ್ಲಿಯವರೆಗು ಸುಮಾರು 600ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2000 ಇಸವಿಯ ನಂತರ ಹೊಸ ಕಲಾವಿದರು ಬಂದ ಕಾರಣ ಟೆನ್ನಿಸ್ ಕೃಷ್ಣ ಅವರಿಗೆ ಬೇಡಿಕೆ ಕಡಿಮೆಯಾಯಿತು.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಬರುತ್ತಿದ್ದ ಅವಕಾಶಗಳು ಸಂಪೂರ್ಣವಾಗಿ ಕಡಿಮೆ ಆಗಿ ಹೋಯಿತು. ಹಲವಾರು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದ ಟೆನ್ನಿಸ್ ಕೃಷ್ಣ ಅವರು ನಿಜ ಜೀವನದಲ್ಲಿ ಬಹಳ ನೋ-ವನ್ನು ಕಂಡಿದ್ದಾರೆ. ಸ್ವಂತದವರಿಂದಲೇ ಮೋ-ಸ ಹೋಗಿದ್ದಾರೆ. ತಮ್ಮ ಜೀವನದ ನೋ-ವನ್ನು ಮರೆತು ನಮ್ಮೆಲ್ಲರನ್ನು ನಗಿಸಿದ ಈ ಕಲಾವಿದ ಇಂದು ಸ್ವಂತ ಮನೆ ಕೂಡ ಇಲ್ಲದೆ ಬಹಳ ಕಷ್ಟಪಡುತ್ತಿದ್ದಾರೆ. ಇದಲ್ಲದೆ ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ಅವಕಾಶ ಇಲ್ಲದೆ, ಎಲ್ಲರ ಬಳಿ ಹೋಗಿ ನನಗೆ ಒಂದು ಚಾನ್ಸ್ ಕೊಡಿ ಎಂದು ಕೇಳುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •