ಸೃಜನ್ ಲೋಕೇಶ್ ಖ್ಯಾತ ನಟ ಲೋಕೇಶ್ ಮತ್ತು ನಟಿ ಗಿರಿಜಾ ಲೋಕೇಶ್ ಅವರ ಪುತ್ರ. ಇನ್ನು ಇವರ ತಾತ ಸುಬ್ಬಯ್ಯ ನಾಯ್ಡು ಅವರು ಕೂಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಟ ಸೃಜನ್ ಲೋಕೇಶ್ ಅವರು ಸಹ ಕುಟುಂಬದ ಪರಂಪರೆಯಾಗಿ ಚಿತ್ರರಂಗವನ್ನೇ ಆರಿಸಿಕೊಂಡು ಸಕ್ಸಸ್ ಕಂಡವರು. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಸೃಜನ್ ಲೋಕೇಶ್ ಅವರ ಅಭಿನಯಕ್ಕೆ ಸಾಕಷ್ಟು ಪ್ರಶಂಸೆಗಳು ಸಿಕ್ಕಿವೆ.

Sreejan-Lokesh

ಇನ್ನು ಸೃಜನ್ ಲೋಕೇಶ್ ಅವರು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು ಹಿರಿತೆರೆಗಿಂತ ಕಿರಿ ತೆರೆಯಲ್ಲಿ. ಹೌದು ಕಿರುತೆರೆ ಸೃಜನ್ ಲೋಕೇಶ್ ಅವರ ಜೀವನಕ್ಕೆ ದೊಡ್ಡದೊಂದು ತಿರುವು ನೀಡಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅವರ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ್ದಾರೆ.

ಹೌದು ಸೃಜನ್ ಲೋಕೇಶ್ ಎಂದ ಕೂಡಲೇ ಸದ್ಯ ಎಲ್ಲರ ತಲೆಗೆ ಬರುವುದು ಮಜಾ ಟಾಕೀಸ್ ಕಾರ್ಯಕ್ರಮ ಅಷ್ಟರ ಮಟ್ಟಿಗೆ ಸೃಜನ್ ಅವರಿಗೆ ನೇಮ್ ಅಂಡ್ ಫೇಮ್ ಅನ್ನು ಈ ಕಾರ್ಯಕ್ರಮ ತಂದುಕೊಟ್ಟಿದೆ. ಇನ್ನು ಸೃಜನ್ ಅವರ ಧರ್ಮಪತ್ನಿ ಗ್ರೀಷ್ಮಾ ಅವರು ಸಹ ಕಲಾವಿದೆ. ಸೃಜನ್ ಲೋಕೇಶ್ ಮತ್ತು ಗ್ರೀಷ್ಮಾ ಅವರು 2010 ರಲ್ಲಿ ಮದುವೆಯಾದರು. ಆದರೆ ಇದಕ್ಕೂ ಮೊದಲು ಸೃಜನ್ ಲೋಕೇಶ್ ಅವರು ಕನ್ನಡದ ಖ್ಯಾತ ನಟಿ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Sreejan-Lokesh

2006 ರಲ್ಲಿ ಕನ್ನಡದ ಖ್ಯಾತ ನಟಿ ವಿಜಯಲಕ್ಷ್ಮಿ ಅವರ ಜೊತೆ ಸೃಜನ್ ಲೋಕೇಶ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕಾರಣಾಂತರಗಳಿಂದ 2008 ರಲ್ಲಿ ಇವರ ಮದುವೆ ಆಗುವ ನಿರ್ಧಾರ ಮುರಿದು ಬಿದ್ದಿತ್ತು. ನಾಗಮಂಡಲ , ಸೂರ್ಯವಂಶ , ಜೋಡಿ ಹಕ್ಕಿ ಸೇರಿದಂತೆ ಇನ್ನೂ ಮುಂತಾದ ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಸ್ಟಾರ್ ನಟಿ ಎಂದು ಕರೆಸಿಕೊಂಡಿದ್ದ ವಿಜಯಲಕ್ಷ್ಮಿ & ಸೃಜನ್ ಅವರ ನಡುವಿನ ಮದುವೆ ಯಾಕೆ ಮುರಿದು ಬಿತ್ತು ಎಂಬುದು ಇನ್ನೂ ಸಹ ತಿಳಿದು ಬಂದಿಲ್ಲ.

……………
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •