ಸೋನು ಶ್ರೀನಿವಾಸ್ ಗೌಡ.. ಹಾಟ್ ಹಾಟ್ ಬೆಡಗಿ. ತನ್ನ ಸಖತ್ ಸ್ಟೈಲಿಶ್ ಲುಕ್ನಿಂದಲೇ, ಸೋಶಿಯಲ್ ಮೀಡಿಯಾ ಮಂದಿಯ ಗಮನ ಸೆಳೆದ ಬೋಲ್ಡ್ ನಟಿ. ಜೊತೆಗೆ ಡಿಫರೆಂಟ್ ಮ್ಯಾನರಿಸಂ, ಆ್ಯಕ್ಟಿಂಗ್ನಿಂದಲೇ ಸೈ ಎನ್ನಿಸಿಕೊಂಡ ಚೆಲುವೆ. ಸೋನುಗೆ ಟಿಕ್ಟಾಕ್ನಲ್ಲಿ ಯಾವ ಗಂಧ-ಗಾಳಿಯಿಲ್ಲದೆ ಎಂಟ್ರಿ ಕೊಟ್ಟು,
ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡಿ ಮೊದಲಿಗೆ ಕೆಲವೇ ಕೆಲವು ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ರು. ಅಲ್ಲಿಂದ ಶುರುವಾಯ್ತು ನೋಡಿ, ಸೋನು ಹವಾ. 15 ಸೆಕೆಂಡ್ಗಳ ಅವಧಿಯಲ್ಲೇ ತಮ್ಮ ಪ್ರತಿಭೆ ತೋರಿಸಿ, ಲಕ್ಷ-ಲಕ್ಷ ಫಾಲೋವರ್ಗಳನ್ನು ಸೃಷ್ಟಿಸಿಕೊಂಡಿದ್ದರು.
ಸದ್ಯ ಕೇಂದ್ರ ಸರ್ಕಾರ ಆ ಆ್ಯಪ್ನ ಬ್ಯಾನ್ ಮಾಡಿದೆ. ಇದೀಗ ಅದೇ ಮಾದರಿಯ ಆ್ಯಪ್ಗಳು ಬಂದಿವೆ. ಅದ್ರಲ್ಲೂ ಸೋನು ಹವಾ ಶುರುವಾಗಿದೆ. ಅಂದಹಾಗೆ, ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಚಿಕ್ಕ ಡೈಲಾಗ್ ಮತ್ತು 30 ಸೆಕೆಂಡ್ ಡ್ಯಾನ್ಸ್ ನಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಸೋನು ನೇರ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಅವ್ರ ಮೊದಲ ಸಿನಿಮಾದ ಅನುಭವವನ್ನೂ ಹಂಚಿಕೊಂಡಿದ್ದಾರೆ.
ಯಸ್ ಸೋನು ಈಗ ‘ಕ್ಯಾಡ್ಬರೀಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ, ಅದ್ವಿತಿ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಸೋನು ಅವರದೊಂದು ತುಂಬ ಮಹತ್ವದ ಪಾತ್ರ ಇದೆಯಂತೆ. ನನ್ನ ಟಿಕ್ಟಾಕ್ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದನ್ನು ನೋಡಿ, ನನಗೆ ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ನಾನು ಯಾವುದೇ ಆಡಿಷನ್ ನೀಡಿಲ್ಲ. ನೇರವಾಗಿ ಆಯ್ಕೆಯಾದೆ ಅಂತ ಸೋನು ಹೇಳಿದ್ದಾರೆ.
ಸೋನು ಅವ್ರು ‘ಕ್ಯಾಡ್ಬರೀಸ್’ ಚಿತ್ರದಲ್ಲಿ ಸಖತ್ ಗ್ಲಾಮರಸ್ ಆಗಿ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ತುಂಬಾ ಸಿನಿಮಾಗಳು ಸೋನುರನ್ನ ಹುಡುಕಿಕೊಂಡು ಬರುತ್ತಿದ್ದು, ಅದರಲ್ಲಿ ಬಹುತೇಕ ಬೋಲ್ಡ್ ಪಾತ್ರಗಳೇ ಹೆಚ್ಚು. ಆರಂಭದಲ್ಲಿ ಬರೀ ಅಂಥ ಪಾತ್ರಗಳನ್ನು ಮಾಡುವುದು ಬೇಡ ಅಂತ ಸೋನು ಅಂದುಕೊಂಡಿದ್ದಾರೆ. ಈಗ ಮಾಡಿದರೆ, ಮುಂದೆ ಹೆಚ್ಚೆಚ್ಚು ಅಂಥ ಪಾತ್ರಗಳೇ ಸಿಗುತ್ತವೆ. ಅದಕ್ಕೋಸ್ಕರ ಒಳ್ಳೆಯ ಅವಕಾಶಗಳಿಗಾಗಿ ಕಾಯುತ್ತಿದ್ದೇನೆ ಅಂತ ಸೋನು ಹೇಳಿದ್ದಾರೆ
ಸೋಶಿಯಲ್ ಮೀಡಿಯಾದಿಂದ ಸಾಕಷ್ಟು ಜನ ಲೈಮ್ಲೈಟ್ಗೆ ಬರ್ತಿದ್ದಾರೆ. ಅವರ ಸಾಲಿಗೆ ಈಗ ಸೋನು ಶ್ರೀನಿವಾಸ್ ಗೌಡ ಸೇರಿಕೊಂಡಿದ್ದಾರೆ. ಬೆಳ್ಳಿ ತೆರೆಯಲ್ಲಿ ಮಿಂಚಲು ಸಾಕಷ್ಟು ತಯಾರಿ ನಡೆಸುತ್ತಿರೋ ಸೋನು, ಮುಂದಿನ ದಿನಗಳಲ್ಲಿ ಟಾಪ್ ನಟಿಯರ ಲಿಸ್ಟ್ನ ಮೊದಲ ಸ್ಥಾನದಲ್ಲಿ ಕಮಾಲ್ ಮಾಡೋ ಸುಳಿವು ಸಿಕ್ತಿದೆ. ಎನಿವೇ ನಮ್ಮ್ ಕಡೆಯಿಂದ ಸೋನು ಶ್ರೀನಿವಾಸ್ ಗೌಡ ಬಣ್ಣದ ಲೋಕದ ಜರ್ನಿಗೆ ಅಲ್ ದಿ ಬೆಸ್ಟ್. ಅವರ ನಿರಂತರ ಪ್ರಯತ್ನದಿಂದ ಸಕ್ಸಸ್ ಹಾದಿಯಲ್ಲಿ ಸಾಗಲಿ ಅನ್ನೋದೆ ನಮ್ಮ ಆಶಯ.
………….