sonu-gowda-bindu-gowda

ಬಿಗ್ ಬಾಸ್ ಸೀಸನ್ ನಲ್ಲಿ ಡ್ರೋನ್ ಪ್ರತಾಪ್,ಸೋನು ಗೌಡ,ಬಿಂದು ಗೌಡ ಫಿಕ್ಸ್! ಬೇರೆ ಯಾರು ನೋಡಿ

Cinema/ಸಿನಿಮಾ Home Kannada News/ಸುದ್ದಿಗಳು

ಕನ್ನಡ ಕಿರುತೆರೆ ಪ್ರಪಂಚದಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಕಾರ್ಯಕ್ರಮಗಳಲ್ಲಿ ಒಂದು ಬಿಗ್ ಬಾಸ್ ಕನ್ನಡ. ಈ ಕಾರ್ಯಕ್ರಮ ಭಾರತದಲ್ಲಿ ಮೊದಲಿಗೆ ಹಿಂದಿ ಭಾಷೆಯಲ್ಲಿ ಆರಂಭವಾಯಿತು. ಇಷ್ಟು ವರ್ಷ ಬಿಗ್ ಬಾಸ್ ಕಾರ್ಯಕ್ರಮ ಸರಾಗವಾಗಿ ಸಾಗಿತ್ತು, ಆದರೆ ಈ ವರ್ಷ ಕರೊನಾ ಇಂದಾಗಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುವುದು ಖಚಿತವಿರಲಿಲ್ಲ. ಆದರೆ ಕರೊನಾ ನಡುವೆಯೇ ತೆಲುಗು ಮತ್ತು ಹಿಂದಿಯಲ್ಲಿ ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿದೆ. ಕನ್ನಡದಲ್ಲಿ ಯಾವಾಗ ಶುರುವಾಗಲಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಇತ್ತು. ಇದೀಗ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಕನ್ನಡ ಸೀಸನ್ 8, 2021 ಜನವರಿ ತಿಂಗಳ ಮೂರನೇ ವಾರದಿಂದ ಆರಂಭವಾಗಲಿದೆ. ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ ಎಂದು ಕಲರ್ಸ್ ಕನ್ನಡ ಚಾನೆಲ್ ನ ಕ್ರಿಯೇಟಿವ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ. ಕಾರ್ಯಕ್ರಮ ಆರಂಭವಾಗುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಈ ಸೀಸನ್ ನಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಗೊತ್ತಾ… ತಿಳಿಯಲು ತಪ್ಪದೆ ಸ್ಕ್ರೋಲ್ ಡೌನ್ ಮಾಡಿ, ಮುಂದೆ ಓದಿ..

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ನಯನ ಬಿಗ್ ಮನೆಗೆ ಎಂಟ್ರಿ ಕೊಡುವ ಸಾಧ್ಯತೆಗಳು ಹೆಚ್ಚಿವೆ. ಕನ್ನಡ ಚಿತ್ರರಂಗದ ಚಾಕೊಲೇಟ್ ಬಾಯ್ ಎಂದೇ ಖ್ಯಾತಿಯಾಗಿದ್ದ ನಟ ಸುನೀಲ್ ರಾವ್ ಕೂಡ ಈ ಸೀಸನ್ ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಸುನೀಲ್ ಅವರು ನಟ ಜೊತೆಗೆ ಉತ್ತಮ ಗಾಯಕ ಹಾಗೂ ಮಿಮಿಕ್ರಿ ಕೂಡ ಮಾಡುತ್ತಾರೆ. ಟಿಕ್ ಟಾಕ್ ಇಂದ ಫೇಮಸ್ ಆಗಿದ್ದ ಬಿಂದು ಗೌಡ ಹಾಗೂ ಧನುಶ್ರೀ ಇಬ್ಬರಲ್ಲಿ ಒಬ್ಬರು ಬಿಗ್ ಮನೆಗೆ ಎಂಟ್ರಿ ಕೊಡುವ ಸಂಭವ ಇದೆ. ಎಂದು ಕೆಲವು ಮೂಲಗಳಿಂದ ಕೇಳಿಬಂದಿದೆ! ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಯಾರ್ ಇದ್ದಾರೆ ಗೊತ್ತಾ! ತಿಳಿಯಲು ಮುಂದೆ ಓದಿರಿ.

sonu-gowda-bindu-gowda

ಹಾಗೂ ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ರವಿಶಂಕರ್ ಗೌಡ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಕಾ-ಲಿಡುವ ಸಾಧ್ಯತೆ ಇದೆ. ಮತ್ತು ಲವ್ ಗುರು ಎಂದೇ ಖ್ಯಾತಿಯಾಗಿರುವ ಆರ್.ಜೆ. ರಾಜೇಶ್, ಹಾಗೂ ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಗೌಡ ಬಿಗ್ ಬಾಸ್ ಸ್ಪರ್ಧಿಗಳಾಗಬಹುದು. ಕಮಲಿ ಅಮೂಲ್ಯಗೆ ಕಾಂಪಿಟೇಶನ್ ಕೊಡುವ ಸಲುವಾಗಿ ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ಬಿಗ್ ಬಾಸ್ ನಲ್ಲಿ ಭಾಗವಹಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಇದೇ ಕಾರಣಕ್ಕೆ ನಟಿ ಶುಭ ಪುಂಜ ಅವರು ಡಿಸೆಂಬರ್ ನಂತರ ಯಾವುದೇ ಸಿನಿಮಾಗಳಲ್ಲಿ ಒಪ್ಪಿಕೊಂಡಿಲ್ಲ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಇನ್ನು ಸ್ವಲ್ಪ ಖಾರವಾಗಿ ಮಾತನಾಡುವ ವ್ಯಕ್ತಿತ್ವ ಇರುವವರು ಒಬ್ಬರು ಇರಬೇಕು ಎಂಬ ಕಾರಣಕ್ಕೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಲಕ್ಷಣಗಳಿವೆ. ಜೊತೆಗೆ ಕರ್ನಾಟಕದ ಕ್ರ-ಶ್ ಆಶಿಕಾ ರಂಗನಾಥ್ ಅವರ ಅಕ್ಕ ಅನುಷಾ ರಂಗನಾಥ್ ಸಕ್ಸಸ್ ಗೋಸ್ಕರ ಬಿಗ್ ಬಾಸ್ ಮನೆಗೆ ಕಾಲಿಡುವ ಸಾಧ್ಯತೆಗಳಿವೆ. ಜೊತೆಗೆ, ಭಾನುವಾರದ ಬಾಡೂಟ ಕಾರ್ಯಕ್ರಮದ ರಾಜೇಶ್ ಗೌಡ್ರು ಈ ಬಾರಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಬಹುದು ಎನ್ನಲಾಗಿದೆ. ಇನ್ನೂ ಸ ರೇ ಗ ಮ ಪ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಹನುಮಂತ ಕೂಡ ಬಿಗ್ ಬಾಸ್ ಮನೆಗೆ ಹೋಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ ಡ್ರೋನ್ ಪ್ರತಾಪ್ ಅವರು ಕೂಡ ಈ ಬಾರಿ ಬಿಗ್ ಬಾಸ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗೂ ನೇರ ನುಡಿಯಿಂದ ಫೇಮಸ್ ಆಗಿರುವ ವಿನಯ್ ಗುರೂಜಿ, ನಟ ನಿರ್ದೇಶಕ ಹಾಗೂ ಇತ್ತೀಚೆಗೆ ಮೀ ಟು ಆರೋಪದಿಂದ ಸುದ್ದಿಯಾಗಿದ್ದ ರವಿ ಶ್ರೀವತ್ಸ ಹಾಗೂ ನಾ-ಗಿಣಿ ಧಾರಾವಾಹಿ ಖ್ಯಾತಿಯ ನಟ ದೀಕ್ಷಿತ್ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರು, ಈ ಬಾರಿ ಕರೊನಾ ಇಂದಾಗಿ ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ನಿಮ್ಮ ಪ್ರಕಾರ ಇವರನ್ನು ಬಿಟ್ಟು ಇನ್ನು ಯಾರು ಸ್ಪರ್ದಿಯಾಗಿ ಬಿಗ್ ಬಾಸ್ ಮನೆಗೆ ಬರಬೇಕು ಎಂದು ಕಾಮೆಂಟ್ ಮೂಲಕ ತಿಳಿಸಿರಿ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿರಿ. ಬಿಗ್ ಬಾಸ್ ಕನ್ನಡದ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...