ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಮಹಿಳೆಯರಿಗೆ ಮಾತ್ರ ಫ್ರೀಡಂ ಸಿಕ್ಕಿಲ್ಲ. ಹೆಣ್ಣು ಮಕ್ಕಳು ತಮ್ಮ ಸ್ವಾತಂತ್ರ್ಯಕ್ಕಾಗಿ ನಿತ್ಯ ಹೋರಾಟ ನಡೆಸುತ್ತಲೇ ಇದ್ದಾರೆ. ಆದರೂ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಮಾತ್ರ ಸಿಕ್ಕಿಲ್ಲ. ನಿಜಕ್ಕೂ ರಾತ್ರಿ ಹೊತ್ತು ಓಡಾಡುವ ಮಹಿಳೆಯರಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲ. ಪೊಲೀಸರು ಯಾವ ರೀತಿಯ ಸೆಕ್ಯೂರಿಟಿಯನ್ನೂ ಕೊಡುತ್ತಿಲ್ಲ. ಇದರ ಬಗ್ಗೆ ಜನಸಾಮಾನ್ಯರಲ್ಲಿ ಸಿಕ್ಕಾಬಟ್ಟೆ ಅಸಮಾಧಾನ ವ್ಯಕ್ತ ಪಡಿಸುತ್ತಲೇ ಇದ್ದಾರೆ.
ಇನ್ನು ಮಹಿಳೆಯರ ಸುರಕ್ಷಿತದ ಬಗ್ಗೆ ಪರೀಕ್ಷೆ ಮಾಡಲು ಕೇರಳದ ಡಿಸಿಪಿ ಮೇರಿ ಜೋಸೆಫ್ ಮುಂದಾದರು. ಒಮ್ಮೆ ಪ್ರಯತ್ನಿಸಿದಾಗ ಅವರಿಗೆ ಆದ ಅನುಭವ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ..

ಆವತ್ತೊಂದು ದಿನ ಡಿಸಿಪಿ ಮೇರಿ ಜೋಸೆಫ್ ಸಾಮಾನ್ಯ ಹೆಣ್ಣು ಮಕ್ಕಳ ಬಟ್ಟೆ ಧರಿಸಿ ರಾತ್ರಿ ಓಡಾಡುತ್ತಿದ್ದರು. ಬಸ್ ಸ್ಟ್ಯಾಂಡ್, ನಗರದ ಪ್ರಮುಖ ಸ್ಥಳಗಳಲ್ಲಿ ಓಡಾಡುತ್ತಿದ್ದರು. ಹಗಲು ಹೊತ್ತಿನಲ್ಲಿ ಸದಾ ಗಿಜುಗುಡುತ್ತಿದ್ದ ಜಾಗಗಳಿಗೂ ತೆರಳಿದರು. ಆದರೆ ಅವರಿಗೆ ಆದ ಅನುಭವ ತೀರಾ ಕೆಟ್ಟದಾಗಿತ್ತು. ಯಾರೊಬ್ಬರು ಒಂಟಿ ಮಹಿಳೆ ಹೀಗೆ ಏಕೆ ಓಡಾಡುತ್ತಿದ್ದಾಳೆ. ಅವಳಿಗೆ ಏನಾದರೂ ಸಹಾಯ ಬೇಕಾ ಎಂದೂ ಕೂಡ ಯಾರೊಬ್ಬರೂ ವಿಚಾರಿಸಲಿಲ್ಲ.

ಕೆಲ ಪುಂಡರು ಆಕೆಯನ್ನು ನೋಡಿ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿದ್ದರು. ಕೆಕ್ಕರಿಸಿಕೊಂಡು ನೋಡುತ್ತಿದ್ದರು. ಅಲ್ಲಿ ಯಾವ ಮಹಿಳೆಯೂ ನಿಲ್ಲದಂತೆ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಬರ್ತೀಯಾ ಅಂತಲೂ ಕೇಲಿದರಂತೆ. ಹೆಣ್ಣು ಮಕ್ಕಳು ಇಂತಹ ಹೀನಾಯ ಪರೀಸ್ಥಿತಿಯಲ್ಲಿ ಓಡಾಡಬೇಕಲ್ಲ ಎಂದು ಡಿಸಿಪಿ ಮೇರಿ ಜೋಸೆಫ್ ಬೇಸರಿಸಿಕೊಂಡರಂತೆ. ಮರುದಿನ ಡಿಸಿಪಿ ಅಲ್ಲಿ ಪೊಲಿಸರನ್ನು ನಿಯೋಜಿಸಿದರಂತೆ.

ನೋಡಿದ್ರಲ್ಲಾ ಒಬ್ಬ ಪೊಲೀಸ್ ಮಹಿಳೆಗೆ ಎಂತಹ ಕೆಟ್ಟ ಅನುಭವವಾಯಿತು ಅಂತ. ಇನ್ನು ಸಾಮಾನ್ಯ ಮಹಿಳೆಯರು ಎಷ್ಟು ಕಷ್ಟ ಅನುಭವಿಸಬಹುದಲ್ಲವೇ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •