ನಮಸ್ತೆ ಸ್ನೇಹಿತರೆ, ಹೈನುಗಾರಿಕೆ ಅನ್ನೋದು ನಿರುದ್ಯೋಗಿ ಯುವಕರ ಕಡಿಮೆ ಜಾಮೀನು ಹೊಂದಿರುವ, ಸಣ್ಣ ರೈತರ ಪಾಲಿಗೆ ಸಂಜೀವಿನಿ ಇದ್ದ ಹಾಗೆ.. ಒಂದು ಚಿಕ್ಕದಾಗಿ ಡೈರಿ ಮಾಡಿಕೊಂಡು ಈ ಹೈನುಗಾರಿಕಯಿಂದ‌ ಉನ್ನತ ಮಟ್ಟಕ್ಕೆ ಬೆಳೆದಿರುವಂತ ಅನೇಕರನ್ನು ನಾವು ನೋಡಿದ್ದೇವೆ.. ಅದರೆ ನಿಮಗಿದು ಗೊತ್ತಿರಬೇಕು, ಯಾಕೆಂದರೆ ಹೈನುಗಾರಿಕೆಯಲ್ಲಿ‌ ಯಶಸ್ವಿಯಾದ ವ್ಯಕ್ತಿಗಳಿಗಿಂತ, ಈ ಕೆಲಸದಲ್ಲಿ ಫೇಲಾದವರೆ ತುಂಬಾ ಜನ ಇದ್ದಾರೆ.. ಅದಕ್ಕೆ ಮುಖ್ಯ ಕಾರಣ‌ ಏನೆಂದರೆ, ಹಿಡಿದ ಕೆಲಸವನ್ನು ಸರಿಯಾಗಿ ಮಾಡದೆ, ಬೇಕಾ ಬಿಟ್ಟಿಯಾಗಿ ಹಣವನ್ನು ಖರ್ಚು ಮಾಡುವುದು,‌ ಈ ರೀತಿ ಮಾಡಿದರೆ ಹೈನುಗಾರಿಕೆಯಲ್ಲಿ ಯಶಸ್ವಿಯಾಗಲ್ಲ,

Software-Engineer

ಹೈನುಗಾರಿಕೆ ಅಷ್ಟೇ ಅಲ್ಲ ಯಾವ ಉದ್ಯೋಗವು ಕೂಡ ಯಶಸ್ವಿಯಾಗಲ್ಲ.. ಹೌದು ಯುವಕರು ಮಾಡುವಂತಹ ಈ ಹೈನುಗಾರಿಕಯನ್ನು ಚಿಕ್ಕದಾಗಿ ಮಹಿಳೆಯರು ಕೂಡ ಮಾಡುತ್ತಾರೆ.. ಆದರೆ ಸ್ನೇಹಿತರೆ ಗುಜರಾತ್‌ ರಾಜ್ಯದ ಒಂದು ಸಣ್ಣ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಶ್ರಮ, ಶ್ರದ್ಧೆಯಿಂದ, ಅಧಿಕವಾದ ಹಾಲು ಉತ್ಪಾದನೆ ಮಾಡುತ್ತಿದ್ದಾರೆ..‌ ಇನ್ನು ಇವರ ವಯಸ್ಸು 64 ವರ್ಷ ಇಷ್ಟು ವಯಸ್ಸಾಗಿದರು ಕೂಡ ಹೈನುಗಾರಿಕೆ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಿರುವ, ಇವರು ದುಡಿಯುತ್ತಿರುವ ರೀತಿ ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ..

ಹೌದು ಈ ಮಹಿಳೆ ಹೆಸರು ನಾವಲ್ ಬನ್ ದಲ್ ಸಂಘಬಾಯಿ ಚೈದರಿ ಎಂದು, ಇವರು ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ನಾಗ್ ನಾಗರ್ ಊರಿನವರು.. ಸಾಮಾನ್ಯವಾಗಿ 60 ವರ್ಷವಾದ ನಂತರ ಎಲ್ಲರೂ ಕೂಡ ನಿವೃತ್ತಿ ಪಡೆಯುತ್ತಾರೆ, ಆದರೆ ಇವರು ಸುಮ್ಮನೆ ಕೂರಲಿಲ್ಲ.. ಇವರು ಇತ್ತಿಚೆಗೆ ಅಷ್ಟೇ ಅಂದರೆ‌ 2019 ರಲ್ಲಿ ಹೈನುಗಾರಿಕಯನ್ನು ಆರಂಭಿಸಿ‌ ತುಂಬಾ ಕಡಿಮೆ ಸಮಯದಲ್ಲಿ ಕೆಲಸ ಮಾಡಿ ಸಕ್ಸಸ್ ಕಂಡಿದ್ದಾರೆ.. ಇನ್ನು ಯುವಕರು ನಾಚುವಂತೆ ಬೆಳಗಿನ ಜಾವ ಎಂದು ಧನ ಕಾರುಗಳಿಗೆ ಹುಲ್ಲು ಹಾಕುವ ಮೂಲಕ ತನ್ನ ಕೆಲಸ ಆರಂಭಿಸುವ ಈ ಮಹಿಳೆಯ ತನ್ನ ಡೈರಿಯಲ್ಲಿ 15 ಜನರಿಗೆ ಉದ್ಯೋಗವನ್ನು ನೀಡಿದ್ದಾರೆ..

Software-Engineer

ಸದ್ಯ ಅವರ ಡೈರಿಯಲ್ಲಿ 80 ಎಮ್ಮೆಗಳು 40 ಹಸುಗಳು ಇವೆ, ಇನ್ನು ಇವರ ಆದಾಯದ ಬಗ್ಗೆ ಕೇಳಿದರೆ ಆಶ್ಚರ್ಯ ವಾಗುತ್ತದೆ, ಹೌದು ಇವರು 2019 ರಲ್ಲಿ‌ 88 ಲಕ್ಷ ರೂಪಾಯನ್ನು ಹೈನುಗಾರಿಕೆಯಿಂದ ಸಂಪಾದನೆ ಮಾಡಿದ್ದಾರೆ.. ನಂತರ 2020 ಬರೋಬ್ಬರಿ 1 ಕೋಟಿ 20 ಲಕ್ಷ ಆದಾಯವನ್ನು ಗಳಿಸುವ ಮೂಲಕ‌ ಹೈನುಗಾರಿಕೆಯಲ್ಲಿ ಮತ್ತೊಬ್ಬರಿಗೆ ಸ್ಪೂರ್ತಿಯಾಗಿದ್ದರೆ, ಇನ್ನು ಇದರಲ್ಲಿ ಮುಖ್ಯವಾದ ವಿಚಾರ ಎನೆಂದರೆ ಈ ಮಹಿಳೆಯ‌ ನಾಲ್ಕು ಜನ ಗಂಡು ಮಕ್ಕಳ ಒಟ್ಟು ಆದಾಯ ಸೇರಿಸಿದರು ಇವರು ಮಾಡುವ ಆದಾಯದಲ್ಲಿ ಅರ್ಧ ಕೂಡ ಆಗುವುದಿಲ್ಲ.. ಸ್ನೇಹಿತರೆ ಈ ವಯಸ್ಸಿನಲ್ಲಿ ಕೂಡ ಕಷ್ಟಪಟ್ಟು ದುಡಿಯುತ್ತಿರುವ ಈ ಮಹಿಳೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •