ನರ್ಸ್ ಒಬ್ಬರು ವೈದ್ಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಉತ್ತರ ಪ್ರದೇಶದ ರಾಮ್ ಪುರದಲ್ಲಿ ನಡೆದಿದೆ. ಇದರ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಾಮ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಪತ್ರದ ವಿಷಯವಾಗಿ ನರ್ಸ್ ಹಾಗೂ ವೈದ್ಯರ ನಡುವೆ ವಾಗ್ವಾದ ನಡೆಯಿತು. ಇದರ ಪರಿಣಾಮವಾಗಿ ನರ್ಸ್ ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ವೀಡಿಯೋದಲ್ಲಿ ಅದಾಗಲೇ ರೋಗಿಗಳಿಂದ ತುಂಬಿದ್ದ ವೈದ್ಯರಿದ್ದ ಕೋಠಡಿಗೆ ಬಂದ ನರ್ಸ್, ಮೃತರೋರ್ವರ ಮರಣ ಪ್ರಮಾಣಪತ್ರಕ್ಕೆ ಸಹಿ ಹಾಕಲು ಸೂಚಿಸಿದ್ದರು.

ವೈದ್ಯರು ನಾನು ಪರೀಕ್ಷೆ ಮಾಡುವವರೆಗೂ ಸಹಿ ಮಾಡಲಾಗದು ಎಂದು ವಾದ ಮಾಡಿದ್ದಾರೆ. ಅದಾಗಲೇ ಒತ್ತಡದಲ್ಲಿದ್ದ ನರ್ಸ್ ತಮ್ಮ ಸುತ್ತ ಇದ್ದ ಜನರನ್ನೂ ಗಮನಿಸದೇ, ವೈದ್ಯರ ಕಪಾಳಕ್ಕೆ ಹೊಡೆದಿದ್ದಾರೆ. ತಕ್ಷಣವೇ, ವೈದ್ಯರೂ ನರ್ಸ್ ಗೆ ಹೊಡೆದಿದ್ದಾರೆ. ಈ ಘಟನಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗತೊಡಗಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಅತಿಯಾದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ರೀತಿಯ ಘಟನೆ ನಡೆದಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರದಂದು ಈ ಘಟನೆ ನಡೆದರೂ ಇನ್ನೂ ರಾಮ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಆದರೂ ಜಿಲ್ಲಾ ನ್ಯಾಯಾಧಿಕಾರಿಗಳಾದ ರವೀಂದ್ರ ಕುಮಾರ್ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •