ಹಿರಿಯ ನಟಿ ಚಂದ್ರಕಲಾ ಮೋಹನ್​ ಅವರು ಬಿಗ್ ಬಾಸ್ ನಲ್ಲಿ ಇತ್ತೀಚಿಗೆ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನ ಬಿಚ್ಚಿಟ್ಟರು. ಅವರ ಅಪ್ಪನ ಬಗ್ಗೆ ಕೆಲ ವಿಚಾರ ಹೇಳಿ ಎಲ್ಲಾ ಮಾತನಾಡಿದ ಬಳಿಕ, ಚಂದ್ರಕಲಾ ಇಂಥ ತಂದೆ ಯಾರಿಗೂ ಇರಬಾರದು ಹೇಳುತ್ತ ಕಣ್ಣೀರು ಸಹ ಹಾಕಿದರು..

ಬಿಗ್​ ಬಾಸ್​ ಮನೆ ಒಳಗೆ ಕೇವಲ ಟಾಸ್ಕ್​ ಮಾಡುವುದು ಮಾತ್ರ ಅಲ್ಲದೆ, ಅಲ್ಲಿ ಭಾವನೆಗಳಿಗೂ ಸಹ ಹೆಚ್ಚು ಬೆಲೆ  ಇರುತ್ತದೆ. ಸ್ಪರ್ಧಿಗಳ ನಿಜ ಜೀವನದಲ್ಲಿ ಈವರೆಗೂ ಎಲ್ಲರಿಂದಲೂ ಮುಚ್ಚಿಟ್ಟಿರುವ ಕೆಲ ರಹಸ್ಯ ವಿಚಾರಗಳ ಬಗ್ಗೆ ಹೇಳಿಕೊಳ್ಳಲು ಇತ್ತೀಚೆಗೆ ಒಂದು ವೇದಿಕೆ ನೀಡಿತು ಬಿಗ್ ಬಾಸ್. ಈ ಸಂದರ್ಭದಲ್ಲಿ ಚಂದ್ರಕಲಾ ಅವರು, ತಮ್ಮ ಜೀವನದಲ್ಲಿ ನಡೆದ ಒಂದು ಕರಾಳ ಘಟನೆಯ ಬಗ್ಗೆ ಮಾತನಾಡಿದರು. ಹೌದು ಅವರು ಬಾಲ್ಯದಲ್ಲಿ ಸ್ಕರ್ಟ್​ ಧರಿಸಿ ಮಲಗಿಡ ವೇಳೆ, ಅವರ ಸ್ವಂತ ತಂದೆಯೇ ತುಂಬಾ ಕೆಟ್ಟದಾಗಿ ನಡೆದುಕೊಂಡರು ಎನ್ನುವ ವಿಚಾರ ತಿಳಿಸಿ ನಡೆದ ಸತ್ಯವನ್ನು ನಟಿ ಚಂದ್ರಕಲಾ ಮೋಹನ್ ಅವ್ರು ಬಿಗ್ ಬಾಸ್ ನಲ್ಲಿ ಬಹಿರಂಗ ಪಡಿಸಿದರು..

Skirt

ಮಾತು ಆರಂಭಿಸಿದ ಚಂದ್ರಕಲಾ ಮೋಹನ್ ಅವರು “ಈ ವಿಷಯ ಹೇಳೋಕೆ ನನಗೆ ತುಂಬ ಕಷ್ಟ ಆಗುತ್ತದೆ. ಆದರೂ ಪರವಾಗಿಲ್ಲ. ಈ ವೇದಿಕೆಯಲ್ಲಿ ಇದನ್ನು ನಾನು ಮುಚ್ಚಿಟ್ಟುಕೊಂಡರೆ, ನನಗೆ ನಾನೇ ಮೋಸ ಮಾಡಿಕೊಂಡಂತೆ ಆಗುತ್ತದೆ. ಅದಕ್ಕಾಗಿ ಹೇಳ್ತಾ ಇದ್ದೀನಿ, ಈ ವಿಚಾರವನ್ನ ನಾನು ನನ್ನ ಹೆತ್ತ ತಾಯಿಯ ಹತ್ತಿರ ಸಹ ಮಾತನಾಡಿಲ್ಲ. ಈ ವಿಷ್ಯ ತನ್ನ ಮಕ್ಕಳಿಗೆ ಗೊತ್ತೇ ಇಲ್ಲ ಎಂದು ಬಹುಶಃ ಅಮ್ಮ ಎಂದುಕೊಂಡಿರಬಹುದು.
ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆ ಇದು’, ”ಆಗ ನನಗೆ ಹತ್ತು ವರ್ಷ. ನಮ್ಮ ಅಪ್ಪ ತುಂಬ ಕುಡಿಯುತ್ತಿದ್ದರು…

ಕುಡಿಯೋದು ಬಿಟ್ಟು ಆತ ಬೇರೆ ಏನೂ ಮಾಡುತ್ತಿರಲಿಲ್ಲ. ಮಕ್ಕಳ ಮುಂದೆಯೇ ಅವರು ಅಮ್ಮನ ಜೊತೆ ತುಂಬ ಅಸಹ್ಯವಾಗಿ ನಡೆದುಕೊಳ್ತಾ ಇದ್ದರು. ಅದು ನಮಗೂ ತುಂಬ ಚೆನ್ನಾಗಿ ನೆನಪಿದೆ. ನಾನು, ನನ್ನ ಅಕ್ಕ ಹಾಗೂ ಇಬ್ಬರು ತಮ್ಮಂದಿರು ಒಂದೇ ಕಡೆ ಮಲಗುತ್ತಿದ್ವಿ. ಅಕ್ಕ-ನಾನು ಸ್ಕರ್ಟ್​ ಹಾಕಿಕೊಂಡು ಮಲಗುತ್ತಿದ್ವಿ. ಒಂದು ದಿನ ರಾತ್ರಿ ನಮ್ಮ ಅಪ್ಪ ಬೇರೆ ರೀತಿ ವರ್ತಿಸಿದರಂತೆ. ಅದನ್ನು ಈಗ ಹೇಳೋದಕ್ಕೆ ನನಗೆ ತುಂಬ ಬೇಜಾರಾಗುತ್ತದೆ” ಎಂದರು.. ಎಲ್ಲಾ ಬಿಗ್ ಮನೆ ಸ್ಪರ್ಧಿಗಳ ಕಣ್ಣಲಿ ನೀರು ಬರಲು ಆರಂಭಿಸಿತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •