ಈ ವಯಸ್ಸು ಅನ್ನೋದೆ ಹೀಗೆ.. ಹದಿನಾಲ್ಕು ಹದಿನೈದು ವರ್ಷ ದಾಟುತ್ತಿದ್ದಂತೆ ಮಕ್ಕಳ ಮನಸ್ಸು ಚಂಚಲವಾಗಿಬಿಡುತ್ತದೆ.. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳು ಮಕ್ಕಳ ಕೈಗಳಿಗೆ ಸರಾಗವಾಗಿ ಸಿಕ್ಕು ನೋಡಬಾರದ್ದನ್ನಿ ನೋಡಿ ಕಲಿಯಬಾರದ್ದನ್ನು ಕಲಿತು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವುದಷ್ಟೇ ಅಲ್ಲದೇ ತಮ್ಮ ಹೆತ್ತವರಿಗೂ ನೋವು ನೀಡುವಂತಾಗಿಬಿಡುತ್ತಾರೆ..

ಆದರೆ ಇಲ್ಲೊಂದು ವಿಚಿತ್ರ ಪ್ರೇಮಕತೆ ನಡೆದಿದ್ದು ಹದಿನಾರು ವರ್ಷಕ್ಕೆ ಬಾಲಕನೊಬ್ಬ ಆಂಟಿ ಜೊತೆ ಮದುವೆಯಾಗಿ ತಂದೆಯೂ ಸಹ ಆಗಿದ್ದಾನೆ.. ಹೌದು ಅಲಹಾಬಾದ್ ನಲ್ಲಿ ಇಂತಹದೊಂದು ಘಟನೆ ನಡೆದಿದ್ದು ಜನರು ಇವರಿಬ್ಬರ ಲವ್ ಸ್ಟೋರಿ ಕಂಡು ನಿಬ್ಬೆರಗಾದರೆ ಆ ಹುಡುಗನ ಅಪ್ಪ ಅಮ್ಮ ಕೊರಗುವಂತಾಗಿದೆ.. ಆದರೆ ಆ ಹುಡುಗ ಮಾತ್ರ ಯಾವುದನ್ನೂ ಲೆಕ್ಕಿಸದೇ ಹದಿನಾರಕ್ಕೆ ಆಂಟಿಗೆ ಮಗು ಕೊಟ್ಟು ಜೋಜೋ ಲಾಲಿ ಎಂದು ಹಾಡಿಕೊಂಡಿದ್ದಾನೆ.. ಆದರೆ ಈ ಕತೆ ಇಷ್ಟಕ್ಕೇ ನಿಲ್ಲಲಿಲ್ಲ.. ಬದಲಿಗೆ ಮುಂದೆ ನಡೆದದ್ದೇ ಬೇರೆಯಾಗಿದೆ..

ಹೌದು ಅಲಹಾಬಾದ್ ನ ಹದಿನಾರು ವರ್ಷದ ಬಾಲಕನೊಬ್ಬ ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ಆಂಟಿಯನ್ನು ಪ್ರೀತಿ ಮಾಡಿದ್ದಾನೆ.‌ ಇತ್ತ ಮಗನ ವಯಸ್ಸಿನ ಹುಡುಗನ ಪ್ರೀತಿಗೆ ಮನಸೋತು ಆಂಟಿಯೂ ಸಹ ಆ ಹುಡುಗನನ್ನು ಒಪ್ಪಿಕೊಂಡಿದ್ದಾಳೆ.. ಇವರಿಬ್ಬರ ಪ್ರೀತಿ ಗಾಡವಾಗಿದ್ದು ನಂತರ ಮನೆಯಿಂದ ದೂರವಾಗಿ ಇಬ್ಬರೂ ಸಹ ಮದುವೆಯಾಗಿದ್ದಾರೆ.. ಆ ಬಳಿಕ ಆ ಹುಡುಗ ಇನ್ನೂ ಸಹ ಹದಿನೆಂಟು ತುಂಬಿಲ್ಲ ಎಂದರೂ ಸಹ ಆಂಟಿ ಜೊತೆ ಮಗು ಮಾಡಿಕೊಂಡಿದ್ದಾನೆ.. ಸುಖವಾಗಿ ಸಂಸಾರವನ್ನೂ ಸಹ ಮಾಡಿಕೊಂಡಿದ್ದನು. ಆದರೆ ಆದರೆ ಇತ್ತ ಆ ಹುಡುಗನ ಅಪ್ಪ ಅಮ್ಮ ಮಗ ಕಾಣುತ್ತಿಲ್ಲ ಎಂದು ಕೊರಗುತ್ತಿದ್ದರು.. ನಂತರ ಹೇಗೋ ಮಗ ಸಿಕ್ಕಿದ್ದಾನೆ.. ಆದರೆ ಮಗ ಆಂಟಿಯನ್ನು ಮದಿವೆಯಾಗಿರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ..

ಹೌದು ಇನ್ನೂ ಸಹ ಹದಿನಾರು ವರ್ಷ ಆತನ ಜೀವನವನ್ನು ಇನ್ನೂ ರೂಪಿಸಿಲ್ಲ.. ಅದಾಗಲೇ ಈ ರೀತಿ ಆಂಟಿಯೊಬ್ಬಳನ್ನು ಮದುವೆಯಾಗುವ ಸಲುವಾಗಿ ಅಪ್ಪ ಅಮ್ಮನಿಂದಲೇ ದೂರಾಗಿ ಆಕೆಯ ಜೊತೆ ಸಂಸಾರ ನಡೆಸಿಕೊಂಡಿರುವುದನ್ನು ನೋಡಿ ಕಣ್ಣೀರಿಟ್ಟಿದ್ದಾರೆ.. ಇಷ್ಟಕ್ಕೆ ಬಿಟ್ಟರೆ ಸರಿ ಬರುವುದಿಲ್ಲವೆಂದು ಅಪ್ಪ ಅಮ್ಮ ಇಬ್ಬರೂ ಸಹ ಕೋರ್ಟ್ ಮೆಟ್ಟಿಲೇರಿದ್ದಾರೆ.. ಹೌದು ಆ ಹುಡುಗನ ಅಪ್ಪ ಅಮ್ಮ ಇಬ್ಬರೂ ಮಗನಿಗೆ ಇನ್ನೂ ಹದಿನಾರು ವರ್ಷ.. ಆ ಮದುವೆಯನ್ನು ಅನೂರ್ಜಿತ ಮಾಡಿ..

ಮಗನನ್ನು ನಮ್ಮ ಜೊತೆ ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ..ಆದರೆ ಇತ್ತ ಹುಡುಗ ಮಾತ್ರ ಆಂಟಿಯನ್ನು ಬಿಟ್ಟು ಬರಲು ತಯಾರಿಲ್ಲ.. ಅದೇನೇ ಆದರು ನಾನು ಆಕೆಯ ಜೊತೆಯೇ ಇರ್ತೇನೆ.. ನಮ್ಮಿಬ್ಬರ ಪ್ರೀತಿಯ ಸಂಕೇತವಾಗಿ ಅದಾಗಲೇ ಮಗು ಕೂಡ ಆಗಿದೆ ಎಂದಿದ್ದಾನೆ.. ಜೊತೆಗೆ ದಯವಿಟ್ಟು ನಮ್ಮಿಬ್ಬರನ್ನು ಒಟ್ಟಿಗೆ ಬಾಳಲು ಅವಕಾಶ ಮಾಡಿಕೊಡಿ ಎಂದು ಕೈ ಮುಗಿದಿದ್ದಾನೆ..

ಆದರೆ ಆತನ ಮನವಿಗೆ ಒಪ್ಪದ ನ್ಯಾಯಾಧೀಶರಾದ ಜೆಜೆ ಮುನೀರ್ ಅವರು ಇದು ಅಪರಾಧವಾಗುತ್ತದೆ.. ಮದುವೆಗೆ ಅಂಕಿತ ಹಾಕಿದರೆ ಪ್ರಾಯಕ್ಕೆ ಬಂದ ಮಹಿಳೆಯ ಜೊತೆ ಬಾಲಕನ ಸಹ ಜೀವನವನ್ನು ಒಪ್ಪಿದಂತಾಗುತ್ತದೆ.. ಇದು ತಪ್ಪಾಗಿರುವ ಕಾರಣ ಇದನ್ನು ಮಾನ್ಯ ಮಾಡಲಾಗುವುದಿಲ್ಲ.. ಬಾಲಕನನ್ನು ಆಂಟಿಯ ಸುಪರ್ದಿಗೆ ನೀಡಲಾಗುವುದಿಲ್ಲ ಎಂದಿದ್ದಾರೆ.. ಅಷ್ಟೇ ಅಲ್ಲದೇ ಬಾಲಕನನ್ನು ಹೆತ್ತವರ ಸುಪರ್ದಿಗೆ ನೀಡಲು ಕೋರ್ಟ್ ಸೂಚಿಸಿತು.. ಆದರೆ ಇದಕ್ಕೆ ಆ ಬಾಲಕ ಒಪ್ಪದೆ ನಾನು ನಮ್ಮ ಅಪ್ಪ ಅಮ್ಮನ ಜೊತೆ ಹೋಗುವುದಿಲ್ಲ ಎಂದಿದ್ದಾನೆ.. ಆಕಾರಣಕ್ಕೆ ಬಾಲಕನನ್ನು ಬಾಲಮಂದಿರದಲ್ಲಿ ಇರಲು ಸೂಚನೆ ನೀಡಿದ್ದಾರೆ..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!