ಬದುಕಿನ ಪಯಣ ಮುಗಿಸಿದ ಶಿವರಾಮಣ್ಣ,ಹಿರಿಯ ನಟ ಶಿವರಾಮ್ ಇನ್ನಿಲ್ಲ…

Cinema/ಸಿನಿಮಾ Home Kannada News/ಸುದ್ದಿಗಳು Serial/ಧಾರಾವಾಹಿ

ಕನ್ನಡ ಚಿತ್ರರಂಗದ ಹಿರಿ ನಟರಲ್ಲಿ ಶಿವರಾಮಣ್ಣ ಅವರು ಪ್ರಮುಖರಾಗಿದ್ದರು. ಸುಮಾರು 6 ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆ ಮಾಡಿಕೊಂಡು ಬಂದಿದ್ದರು. ಗುರು ಶಿಷ್ಯರು, ನಾಗರಹಾವು ಮತ್ತು ಭಕ್ತ ಪ್ರಹ್ಲಾದ ಚಿತ್ರಗಳಲ್ಲಿ ಶಿವ ರಾಮಣ್ಣನವರ ನಟನೆಯನ್ನು ಎಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ. ನಟನೆಯಷ್ಟೇ ಅಲ್ಲದೆ ಚಿತ್ರಗಳ ನಿರ್ಮಾಣದ ಕೆಲಸದಲ್ಲಿ ಕೂಡ ಇವರು ಪ್ರಮುಖ ಪಾತ್ರವಹಿಸಿದ್ದರು. ಅಪಾರ ಜ್ಞಾನವನ್ನು ಹೊಂದಿದ್ದ ಈ ನಟ ಹಲವಾರು ಯುವ ನಟರಿಗೆ ಮಾರ್ಗದರ್ಶನ ನೀಡಿತ್ತಿದ್ದರು. ರಾಜ್ ಕುಮಾರ್ ಅವರ ಕಾಲದಿಂದ ಹಿಡಿದು ಇತ್ತೀಚೆಗೆ ಬಂದ ಹೊಸ ನಟರ ಜೊತೆ ಕೂಡ ಶಿವರಾಮಣ್ಣ ಅವರು ಕೆಲಸ ಮಾಡಿದ್ದಾರೆ. ಇಂಥ ವ್ಯಕ್ತಿ ಇಂದು ನಮ್ಮನ್ನೆಲ್ಲಾ ಅಗಲಿರುವುದು ತುಂಬಲಾರದ ನಷ್ಟವಾಗಿದೆ.

S.Shivaram: ನಟ ಶಿವರಾಂ ಚೇತರಿಸಿಕೊಳ್ಳುವಂತೆ ದೇವರಲ್ಲಿ ಮೊರೆಯಿಟ್ಟ ಚಿತ್ರರಂಗ; ಆಸ್ಪತ್ರೆಗೆ ಹಿರಿಯ ಕಲಾವಿದರ ಭೇಟಿ | Sandalwood actor S Shivaram is in critical stage so main actors visits to ...

ಶಿವರಾಮಣ್ಣ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯಸ್ಸಾಗಿದ್ದರೂ ಕೂಡ ಶಿವರಾಮ್ ಅವರಿಗೆ ಯಾವುದೇ ರೀತಿಯ ಅನಾರೋಗ್ಯ ಇರಲಿಲ್ಲ. ಸುಮಾರು 4 ದಿನಗಳ ಹಿಂದೆ ಶಿವರಾಮ್ ಅವರು ಕಾರು ಓಡಿಸಿಕೊಂಡು ಹೋಗುತ್ತಿರುವಾಗ ಆ ಕ್ಸಿಡೆಂಟ್ ಆಗಿತ್ತು. ತದನಂತರ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೆದುಳಿನಲ್ಲಿ ತೀವ್ರ ರ ಕ್ತಸ್ರಾವ ಆಗುತ್ತಿದ್ದ ಕಾರಣ ವೈದ್ಯರು ಶೀಘ್ರ ಚಿಕಿತ್ಸೆ ನೀಡಿದ್ದರು. ತದನಂತರ ಡಿಸ್‌ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದರು. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಇವರು ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದರು. ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾಗಿದ್ದರು. ಒಂದು ದಿನ ದೇವರ ಪೂಜೆಗೆ ಹೊರಡುವ ಸಂದರ್ಭದಲ್ಲಿ ಶಿವ ರಾಮಣ್ಣನವರಿಗೆ ಕಾಲು ಜಾರಿ ತಲೆಗೆ ಜೋರಾಗಿ ಪೆ ಟ್ಟು ಬೀಳುತ್ತೆ.

Sandalwood Movie Actor Shivaram Biography, News, Photos, Videos | NETTV4U

ಹಿಂದೆ ಅಪಘಾತದಲ್ಲಿ ಪೆ ಟ್ಟು ಬಿದ್ದ ಜಾಗಕ್ಕೆ ಇನ್ನೊಂದು ಸಲ ಪೆ ಟ್ಟು ಬೀಳುತ್ತೆ. ಒಂದು ಕಡೆ ವಯಸ್ಸಾದ ದೇಹ ಇನ್ನೊಂದು ಕಡೆ ಈಗಾಗಲೇ ಗಾ ಯಗೊಂಡಿರುವ ಮೆದುಳು. ವಯಸ್ಸಾಗಿದ್ದ ಕಾರಣ ಸ ರ್ಜರಿ ಮಾಡಿದರೆ ಶಿವ ರಾಮಣ್ಣನವರ ದೇಹ ಸ್ಪಂದಿಸುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಕಳೆದ ಒಂದು ದಶಕಗಳಿಂದ ಶಿವರಾಮ್ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಇವರನ್ನು ಐಸಿಯು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಶಿವ ರಾಮಣ್ಣನವರ ಮಗ ಕೂಡ ತಮ್ಮ ತಂದೆಯ ಪರಿಸ್ಥಿತಿಯ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದರು. 24 ಗಂಟೆ ಕಳೆದರೂ ಸಹ ಶಿವರಾಂ ಅವರ ಆರೋಗ್ಯ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಸುಧಾರಣೆ ಕಂಡುಬರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿವರಾಮಣ್ಣನವರ ಕಿಡ್ನಿ ಮತ್ತು ಲಿವರ್ ಸರಿಯಾಗಿಯೇ ಕೆಲಸ ಮಾಡುತ್ತಿತ್ತು

ಬರು ಬರುತ್ತಾ ಶಿವರಾಮಣ್ಣನವರ ಹೃದಯದಲ್ಲಿ ನೀರು ತುಂಬಿಕೊಳ್ಳಲು ಪ್ರಾರಂಭಿಸುತ್ತದೆ. ಮೆದುಳಿನ ಜೊತೆಗೆ ಅಂಗಾಂಗಗಳು ಸಹ ನಿಷ್ಕ್ರಿಯಗೊಳ್ಳಲು ಪ್ರಾರಂಭವಾಗಿತ್ತು. ಇಷ್ಟು ದಿನ ಶಿವರಾಮ್ ಅವರು ಉಳಿಯುವುದಿಲ್ಲ ಎಂದು ವೈದ್ಯರು ಮೊದಲೇ ಕುಟುಂಬದವರಿಗೆ ಮುನ್ಸೂಚನೆ ನೀಡಿದ್ದರು. ಡಿಸೆಂಬರ್ 4 ರ ಮಧ್ಯಾಹ್ನದ ಸಮಯದಲ್ಲಿ ಶಿವರಾಮ್ ಅವರು ಇಹಲೋಕ ತ್ಯಜಿಸಿದ್ದಾರೆ. ಒಬ್ಬರ ನಂತರ ಒಬ್ಬರನ್ನು ಕನ್ನಡ ಚಿತ್ರರಂಗ ಕಳೆದುಕೊಳ್ಳುತ್ತಿದೆ. ಚಿತ್ರರಂಗದ ಮೇಲೆ ಯಾರ ದೃಷ್ಟಿ ತಾಗಿದೆಯೋ ಗೊತ್ತಿಲ್ಲ. ಹೊಸಬರಿಗೆ ಮಾರ್ಗದರ್ಶಕರಾಗಿದ್ದ ಹಾಗೂ ಅಪಾರ ಜ್ಞಾನ ಭಂಡಾರವನ್ನು ಹೊಂದಿದ್ದ ಶಿವ ರಾಮಣ್ಣನವರನ್ನು ಕಳೆದುಕೊಂಡಿರುವುದು ಕಲಾರಂಗದ ದುರಾದೃಷ್ಟ. ಶಿವರಾಮ್ ಸರ್ ಮತ್ತೆ ಹುಟ್ಟಿ ಬನ್ನಿ.. ಓಂ ಶಾಂತಿ.

Download Actor S Shivaram Interview By Sandeep Shetty - Part 4 Video Song from Kannada Celebrity Interview :Video Songs – Hungama

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...