ತಾನು ತಮ್ಮ ವರು ಎಂಬುದನ್ನು ಕೂಡಾ ಮರೆತು ಕ್ರೌ ರ್ಯ ಮೆರೆಯುವ ಜನರಿಗೂ ಕಡಿಮೆಯೇನಿಲ್ಲ. ಎಲ್ಲಾ ಸ್ವಾರ್ಥಿಗಳ ಹಾಗೆ ತಾವು, ತಮ್ಮ ಜೀವನ ಹಸನಾಗಿದ್ದರೆ ಸಾಕು ಎನ್ನುವ ಭರದಲ್ಲಿ ಬೇರೆಯವರ ಜೀವನ ಹಾಳು ಮಾಡಲು ಕೂಡಾ ಹಿಂದೆ ಮುಂದೆ ಆಲೋಚನೆ ಮಾಡುವುದಿಲ್ಲ. ‌ನಾಗರಿಕ ಸಮಾಜದಲ್ಲಿ ಇಂತಹ ಅನಾಗರಿಕ ವರ್ತನೆಯನ್ನು ತೋರುವವರ ಸುದ್ದಿಗಳು ಪ್ರತಿದಿನ ಮಾದ್ಯಮಗಳಲ್ಲಿ ಸದ್ದು ಮಾಡುತ್ತಲೇ ಇರುತ್ತವೆ.

ಇಂತಹುದೇ ಒಂದು ಘಟನೆಯಲ್ಲಿ ತನ್ನ ಅಕ್ಕನ ಗಂಡ ಅಥವಾ ಬಾವನ ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದ ಯುವತಿಯೊಬ್ಬಳು, ಆ ಪ್ರೀತಿಯ ಹುಚ್ಚಿನಲ್ಲಿ ಯಾವ ಮಟ್ಟಕ್ಕೆ ಹೋಗಿದ್ದಾಳೆಂದರೆ ಸ್ವತಃ ತನ್ನ ಅಕ್ಕನ ವೈವಾಹಿಕ ಜೀವನಕ್ಕೆ ಕೊಳ್ಳಿಯನ್ನಿಟ್ಟಿದ್ದಾಳೆ. ಈ ಯುವತಿಯ ಇಂತಹ ಹುಚ್ಚಾಟದಿಂದ ಆಕೆಯ ಕುಟುಂಬದವರು ಕೂಡಾ ದುಃಖ ಪಡುವಂತಾಗಿದೆ.

sister-2

ಅಕ್ಕನ ಸಂಸಾರ ಜೀವನಕ್ಕೆ ಅಡ್ಡಿಯಾಗಿರುವ ಯುವತಿಯು ತನ್ನ ತಂದೆ ಅಲ್ಲಿಗೆ ಬಂದಿದ್ದನ್ನು ಗಮನಿಸಿ, ಪೋಲಿಸರಿಗೆ ದೂರನ್ನು ನೀಡಿದ್ದಾಳೆ. ಅಲ್ಲದೇ ಪೋಲಿಸ್ ಠಾಣೆಯಲ್ಲಿ ಕೂಡಾ ಆಕೆ ತಾನು‌ ಮದುವೆಯಾದರೆ ತನ್ನ ಬಾವನನ್ನು ಮಾತ್ರವೇ, ನನ್ನ ಸಿಂಧೂರವನ್ನು ಧರಿಸುವುದಾದರೆ ಅದು ಬಾವನ ಹೆಸರಿನ ಸಿಂಧೂರ ಮಾತ್ರವೇ ಎಂದು ಹಠ ಹಿಡಿದಿದ್ದು ಮಾತ್ರವೇ ಅಲ್ಲದೇ ತನ್ನ ತಂದೆಯನ್ನು ಠಾಣೆಯಿಂದ ಮನೆಗೆ ಹಿಂತಿರುಗುವಂತೆ ಒತ್ತಾಯವನ್ನು ಕೂಡಾ ಮಾಡಿದ್ದಾಳೆ.

ಯುವತಿ ಹಾಗೂ ಅವಳ ಬಾವನ ಪ್ರೇಮ ಕಥೆಯು ಮುರಾದಾಬಾದ್ ನಲ್ಲಿ ಸುದ್ದಿಯಾಗಿದೆ‌. ಮಝೋಲಾ ಠಾಣೆಯ ಪ್ರದೇಶದಲ್ಲಿ ಯುವತಿಯೊಬ್ಬಳ ವಿವಾಹ ನಾಲ್ಕು ವರ್ಷಗಳ ಮುನ್ನ ಅಮ್ರೋಹ್ ನ ಯುವಕನೊಡನೆ ನಡೆದಿತ್ತು. ಇವರಿಬ್ಬರೂ ಒಂದು ಮಗುವಿನ ಪೋಷಕರು ಕೂಡಾ ಆಗಿದ್ದಾರೆ. ಆದರೆ ಇದೆಲ್ಲದರ ನಡುವೆ ಒಂದು ದಿನ ಮಹಿಳೆಗೆ ತನ್ನ ಗಂಡ ತನ್ನ ತಂಗಿಯ ಜೊತೆ ಅ ನೈ ತಿ ಕ ಸಂಬಂಧ ಹೊಂದಿದ್ದಾನೆ ಎಂದು ತಿಳಿದಾಗ ಆಕೆಗೆ ತಾನು ‌ನಿಂತ ನೆಲವೇ ಕುಸಿದಂತಾಗಿದೆ. ಆಕೆ ಪತಿಯು ತಂಗಿಯೊಡನೆ ಹೊಂದಿರುವ ಸಂಬಂಧ ವಿ ರೋ ಧಿಸಿದ ಪರಿಣಾಮವಾಗಿ ಆಕೆ ಗಂಡನ ಮನೆಯನ್ನೇ ತೊರೆಯಬೇಕಾಯಿತು. ಗಂಡನ ಮನೆಯಿಂದ ಹೊರ ಬಂದ ಆಕೆ ತವರಿಗೆ ಬಂದು ತಂದೆಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

quality

ವಿಷಯದ ಸೂಕ್ಷ್ಮತೆಯನ್ನು ಅರಿತ ಸಂಬಂಧಿಕರು ಮೊದಲು ಕಿರಿ ಮಗಳಿಗೆ ಮದುವೆಯನ್ನು ಮಾಡುವಂತೆ ಸಲಹೆಯನ್ನು ನೀಡಿದ್ದು ಮಾತ್ರವೇ ಅಲ್ಲದೇ ಆಕೆಗಾಗಿ ಹುಡುಗನನ್ನು ಹುಡುಕುವ ಪ್ರಯತ್ನವನ್ನು ಆರಂಭಿಸಿದರು. ಇನ್ನು ಅಕ್ಕನ ಸಂಸಾರಕ್ಕೆ ಮುಳುವಾದ ಯುವತಿ ತಾನು ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿರುವ ಕಾರಣದಿಂದ ಬೇರೆ ಊರಿನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು ಅಲ್ಲೇ ಇದ್ದಳು. ಶಿಕ್ಷಣದ ಹೆಸರಿನಲ್ಲಿ ಬಾವನ ಜೊತೆ ತನ್ನ ಪ್ರೇಮ ಕಲಾಪವನ್ನು ಮುಂದುವರೆಸಿದ್ದಳು. ಯುವತಿಯ ಮದುವೆಗೆ ಮೂರು ಜನ ಯುವಕರ ಫೋಟೋ ತಂದು ತೋರಿಸಿದಾಗ ಆಕೆ ಮೂವರನ್ನು ತಿರಸ್ಕಾರ ಮಾಡಿದಾಗ ಎಲ್ಲರಿಗೂ ಆಕೆಯ ಮನಸ್ಸಿನಲ್ಲಿ ಇರುವ ಆಲೋಚನೆಗಳು ಅರ್ಥವಾಗಿದೆ. ಕೂಡಲೇ ಯುವತಿಯ ತಂದೆ ಆಕೆಯನ್ನು ಕೋಣೆ ಖಾಲಿ ಮಾಡಿ ಊರಿಗೆ ಮರಳುವಂತೆ ಹೇಳಿದ್ದಾರೆ.

tricks

ತಂದೆಯ ಮಾತನ್ನು ಕೇಳಿದ ಯುವತಿ ಕೋಪಗೊಂಡಿದ್ದಾಳೆ. ಕೂಡಲೇ ಪೋಲಿಸರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ಸಂಬಂಧಗಳ ನಡುವಿನ ಈ ವಿಚಾರವನ್ನು ಕೇಳಿ ಅವರಿಗೆ ತಲೆ ಸುತ್ತಿದಂತಾಗಿದೆ. ತಂದೆ ಹಾಗೂ ಮಗಳನ್ನು ಠಾಣೆಗೆ ಕರೆ ತಂದಿದ್ದಾರೆ. ಯುವತಿಯ ಅಕ್ಕ ಕೂಡಾ ಠಾಣೆಗೆ ಬಂದು ತಂಗಿಯ ಮುಂದೆ ಕೈ ಜೋಡಿಸಿ ತನ್ನ ಸಂಸಾರವನ್ನು ಹಾಳು ಮಾಡಬೇಡ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಆದರೆ ಯಾರ ಮಾತನ್ನೂ ಕೇಳದ ಯುವತಿ ಅಕ್ಕನ ಕಣ್ಣೀರಿಗೂ ಕೂಡಾ ಕರಗದೇ ತಾನು ಮದುವೆ ಆಗುವುದಾದರೆ ಬಾವನನ್ನು ಮಾತ್ರವೇ ನೀನೇ ಬೇರೆ ದಾರಿ ನೋಡಿಕೋ ಎಂದು ತನ್ನ ಅಕ್ಕನಿಗೆ ಹೇಳಿದ್ದಾಳೆ.
ಕೊನೆಗೆ ಮಹಿಳೆ ಮತ್ತು ಅವರ ತಂದೆ ಠಾಣೆಯಿಂದ ಬೇಸರದಿಂದ ಹಿಂತಿರುಗಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •