ನಮಸ್ತೇ ಸ್ನೇಹಿತರೇ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಿಗೆ ದ್ವನಿಯಾಗಿರುವ ಖ್ಯಾತ ಗಾಯಕಿ ಸುನಿತಾ ಅವರು ಎರಡನೆಯ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅದರ ಬಗ್ಗೆ ತಾವೇ ತಾವೇ ಖುದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಸುಮುಧುರ ಕಂಠದ ವಿಭಿನ್ನ ಗಾಯನದಿಂದ ಕನ್ನಡಿಗರ ಮನಗೆದ್ದಿರುವ ಗಾಯಕಿ ಸುನಿತಾ ಅವರು ಕೆಲ ವರ್ಷಗಳ ಹಿಂದಷ್ಟೇ ಸಂಸಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದ ತಮ್ಮ ಮೊದಲನೇ ಪತಿಗೆ ವಿಚ್ಚೇಧನ ಕೊಟ್ಟಿದ್ದರು. ಇನ್ನು ಈ ಎರಡನೆಯ ಮದುವೆಗೆ ತನ್ನ ಮಕ್ಕಳೇ ಕಾರಣ ಎಂದು ಹೇಳಿರುವ ಗಾಯಕಿ ಸುನೀತಾ ಉಪದ್ರಷ್ಟ ಅವರ ವಯಸ್ಸು ಈಗ 42.
ನಾನು ಎಲ್ಲರಂತೆ ನನ್ನ ಮಕ್ಕಳು ಜೀವನದಲ್ಲಿ ಸೆಟಲ್ ಆಗಲಿ ಎಂದು ಬಯಸುತ್ತೇನೆ. ಅದರಂತೆ ನನ್ನ ಪೋಷಕರು ಹಾಗೂ ನನ್ನ ಪ್ರೀತಿಯ ಮಕ್ಕಳು ನಾನು ಕೂಡ ಜೀವನದಲ್ಲಿ ಸೆಟಲ್ ಆಗಬೇಕು ಎಂದು ಬಯಸಿದ್ದು ಇಂತಹವರನ್ನ ಪಡೆದ ನಾನೆ ಧನ್ಯ ಎಂದು ೪೨ರ ಪ್ರಾಯದ ಸುನಿತಾ ಹೇಳಿದ್ದಾರೆ. ಇನ್ನು ಸ್ನೇಹಿತನಾಗಿ, ನನ್ನ ಸಂಗಾತಿಯಾಗಿ ನನ್ನ ಬಗ್ಗೆ ಕಾಳಜಿ ತೋರುವ ರಾಮ್ ಅವರ ಜೊತೆ ನನ್ನ ಮದುವೆಯಾಗಲಿದೆ ಎಂದು ಸಾಮಾಜಿಕ ಜಾಲತಾಣದ್ಲಲಿ ಪೋಸ್ಟ್ ಮಾಡಿದ್ದು ತಾವು ಮದುವೆಯಾಗುತ್ತಿರುವ ವ್ಯಕ್ತಿಯ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಇನ್ನು ಸುನಿತಾ ಮದುವೆಯಾಗುತ್ತಿರುವ ರಾಮ್ ವೀರಪಾನೇನಿ ಕಂಪನಿಯೊಂದರ ಸಿಇಒ ಆಗಿದ್ದಾರೆ.
ಇನ್ನು ಕುಟುಂಬದ ವರ್ಗದವರಿಗೂ ಅವರ ಸ್ನೇಹಿತರು ಸೇರಿದಂತೆ ಎಲ್ಲಾ ಅವರ ಹಿತೈಷಿಗಳಿಗೂ ಧನ್ಯವಾದ ತಿಳಿಸಿರುವ ಗಾಯಕಿ ಸುನಿತಾ ಮತ್ತೆ ಹೊಸದಾಗಿ ದಾಂಪತ್ಯ ಜೀವನ ಪ್ರಾರಂಭ ಮಾಡುತ್ತಿರುವುದ್ಕಕೆ ನಾವಿಬ್ಬರು ತುಂಬಾ ಖುಷಿ ಆಗಿದ್ದು ಆ ಸಮಯ ಬಂದೆ ಬಿಟ್ಟಿದೆ ಎಂದು ಹೇಳಿದ್ದಾರೆ. ಇನ್ನು ಸುನಿತಾ ಅವರ ಮೊದಲನೇ ಮದುವೆ ಬಗ್ಗೆ ಹೇಳಬೇಕೆಂದರೆ, ಅವರು ಮೊದಲನೇ ಮದುವೆಯಾಗಿದ್ದು ೧೯ನೇ ವಯಸ್ಸಿನಲ್ಲಿ. ಕಿರಣ್ ಕುಮಾರ್ ಎಂಬುವವರ ಜೊತೆ ಮದುವೆಯಾಗಿದ್ದ ಇವರಿಗೆ ಶ್ರೇಯಾ, ಆಕಾಶ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಆದರೆ ದಾಂಪತ್ಯಜೀವನದಲ್ಲಿ ಉಂಟಾದ ಕಲಹದಿಂದಾಗಿ ಸುನಿತಾ ಅವರು ವಿಚ್ಚೇಧನ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಗಾಯಕಿ ಸುನಿತಾ ಅವರು ಎರಡನೆಯ ಬಾರಿಗೆ ದಾಂಪತ್ಯ ಜೀವನ ಪ್ರಾರಂಭ ಮಾಡುತ್ತಿರುವುದಕ್ಕೆ ಇವರಿಗೆ ಅವರ ಸ್ನೇಹಿತರು, ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ.