simple-career

ತಿಂಗಳಿಗೆ 70,000 ಸಂಪಾದನೆ ಮಾಡುವ ಸರಳ ವೃತ್ತಿ.

10th Pass Govt Jobs 12th Pass Govt Jobs Home Kannada News/ಸುದ್ದಿಗಳು Krushi Bhagya/ಕೃಷಿ ಭಾಗ್ಯ ಸರ್ಕಾರೀ ಉಚಿತ ಯೋಜನೆಗಳು

ಮನಸ್ಸಿದ್ದರೆ ಮಾರ್ಗವಿದೆ. ಉದ್ಯೋಗ ಇಲ್ಲ.ಆದಾಯ ಇಲ್ಲ. ಬಡತನ ಇದೆಲ್ಲಾ ಸುಮ್ಮನೆ. ವಿಧ್ಯಾಭ್ಯಾಸದ ಜೊತೆಗೂ ಸಂಪಾದನೆ ಮಾಡಿಕೊಳ್ಳಬಹುದು.

ಜನ ಕೆಲಸ ಇಲ್ಲ. ಸಂಪಾದನೆ ಇಲ್ಲ. ಸರಕಾರ ನಮ್ಮ ನೆರವಿಗೆ ಬರಬೇಕು. ನಮಗೆ ಅದು ಕೊಡಬೇಕು. ಇದು ಕೊಡಬೇಕು ಎಂದು ಹರಟೆ ಹೊಡೆಯುತ್ತಾ ಕಾಲ ಹರಣ ಮಾಡಬೇಕಾಗಿಲ್ಲ. ಅತೀ ಕಡಿಮೆ ಬಂಡವಾಳದಲ್ಲಿ  ತಿಂಗಳಿಗೆ 30,000 ಸಂಪಾದನೆ ಮಾಡಬಹುದು.

 • ಇದು ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಜಾನಕಲ್  ಸೇವನಗರ ಗ್ರಾಮದ  ಪ್ರಿಯಾಂಕ್ ಎಂಬ 22 ವರ್ಷದ  ಯುವಕ ಹೇಳುವ ಮಾತು.
 • ಇವರು  ಬಿ ಬಿ ಎಂ ವ್ಯಾಸಂಗ ಮಾಡುತ್ತಲೇ ಟಗರು ಸಾಕಣೆ ಮಾಡಿ ತಿಂಗಳಿಗೆ 30,000 ರೂ ಸಂಪಾದನೆ ಮಾಡುತ್ತಿದ್ದಾರೆ.

 

 • ಹೇಗೆ ಈ ಸಂಪಾದನೆ:

  • ಇವರಲ್ಲಿ ಸುಮಾರು 30 ಟಗರುಗಳು ಇವೆ. ಇದನ್ನು ಕೊಟ್ಟಿಗೆ ಮಾಡಿ ಹುಲ್ಲು ಹಾಗೂ ಸ್ಥಳೀಯವಾಗಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಹಾಕಿ ಹೊಟ್ಟೆ ತುಂಬಿಸುತ್ತಾರೆ.
  • ಬಿಡುವಿದ್ದ ಸಮಯದಲ್ಲಿ ಅವುಗಳನ್ನು ½- 1 ಗಂಟೆ ಕಾಲ ಬಯಲಲ್ಲಿ ಮೇಯಲು ಬಿಡುತ್ತಾರೆ. 
  • ವ್ಯಾಸಂಗ ಮಾಡುತ್ತಿರುವ ಕಾರಣ ಇದನ್ನು ಹೊರಗೆ ಮೇಯಲು ಬಿಡಲು ಬಿಡುವು ಇರುವುದಿಲ್ಲ.
  • ಇದಕ್ಕೆ ಇವರು ತೊಡಗಿಸಿದ ಮೂಲ ಬಂಡವಾಳ ಕೇವಲ 20,000 ಮಾತ್ರ.
  • ಇವರು ಹೇಳುವಂತೆ ಇದರಷ್ಟು ಸುಲಭವಾಗಿ ಸಂಪಾದನೆ ಆಗುವ ವೃತ್ತಿ ಬೇರೆ ಇಲ್ಲ.
  •  ಪ್ರಾರಂಭದಲ್ಲಿ 4-5  ಸಂಖ್ಯೆಯಲ್ಲಿ   ಸಾಕಿದರೆ ಮೂರು ತಿಂಗಳು ಬಿಟ್ಟರೆ 10  ಟಗರುಗಳನ್ನು ಹೊಂದಬಹುದು.
  •  ಪುನಹ    3 ತಿಂಗಳು ಸಾಕಿ ಮಾರಾಟ ಮಾಡಿದ ಲಾಭದಿಂದ 20 ಟಗರು ಕೊಳ್ಳಲು ಆಗುತ್ತದೆ.
  • ಹೀಗೆ ಮುಂದುವರಿಸಬಹುದು.  ಇದಕ್ಕೆ ರಿಸ್ಕ್ ಇಲ್ಲ.
  • ಹಾಕಿದ ಬಂಡವಾಳ ಕೇವಲ 3 ತಿಂಗಳಲ್ಲಿ  ದುಪ್ಪಟ್ಟಾಗುತ್ತದೆ.
  • ಯಾವುದೇ ವ್ಯವಹಾರದಲ್ಲೂ ಇಷ್ಟು ನಿಯಮಿತ ಅವಧಿಯಲ್ಲಿ ಇಷ್ಟು ಪ್ರತಿಫಲ ಬರಲು ಸಾಧ್ಯವಿಲ್ಲ.
  • ಇವರು ಕಳೆದ ಎರಡು ವರ್ಷಗಳಿಂದ ಇದನ್ನು ಮಾಡುತ್ತಿದ್ದು,
  • ಇವರ ಸುತ್ತಮುತ್ತ ಕೆಲವು ಆಸಕ್ತರು ಇವರಿಂದ ಉಚಿತ ತರಬೇತಿ ಪಡೆದು ಇದನ್ನು ಮಾಡಲು ಮುಂದಾಗಿದ್ದಾರೆ.
  • ತಳಿ ಯಾವುದು:

  • ಇವರು  ಹೊಸ ಹೊಸ ತಳಿಯ ಟಗರಿನ ಹಿಂದೆ ಹೋಗಲಿಲ್ಲ. 
  • ಹಿಂದೆ ನಾರೀ ಸುವರ್ಣ ತಳಿಯನ್ನು ಸಾಕಿದ್ದರು.
  • ಅದು ಹೆಚ್ಚು ಆಹಾರ ಬಯಸುತ್ತದೆ. ಖರ್ಚು ವೆಚ್ಚ ಕಡಿಮೆಯಾಗಲೆಂದು ನಾಟಿ ತಳಿಯ ಟಗರನ್ನೇ ಸಾಕಲು ಪ್ರಾರಂಭಿಸಿದ್ದಾರೆ.
  • ಇದು ಹೆಚ್ಚು ಆಹಾರ  ತಿನ್ನುವುದಿಲ್ಲ. ಭಾರೀ ತೂಕವೂ ಬರುವುದಿಲ್ಲ.
   • ಮಾರುಕಟ್ಟೆಯಲ್ಲಿ ನಾಟೀ ಕೋಳಿಯಂತೆ ನಾಟೀ ಟಗರಿಗೆ ಉತ್ತಮ ಬೇಡಿಕೆ ಮತ್ತು ಬೆಲೆ ಇರುವ ಕಾರಣ ನಷ್ಟ ಇಲ್ಲ.
   • ಇದು ಸ್ಥಳೀಯ ವಾತಾವರಣಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ.
   • ಯಾವುದೇ ರೋಗ ರುಜಿನಗಳು ಇರುವುದಿಲ್ಲ.

   ಖರ್ಚು ವೆಚ್ಚಗಳು:

  • ಒಂದು ಟಗರಿನ ಮರಿಗೆ 4500 ತನಕ ಬೆಲೆ ಇರುತ್ತದೆ.
  • ಇದನ್ನು ನಾಲ್ಕು ತಿಂಗಳು ಸಾಕಿ ಮಾರಾಟ ಮಾಡುವಾಗ 9000 ರೂ. ದೊರೆಯುತ್ತದೆ.
  • ಒಂದು ಟಗರಿಗೆ ಎಲ್ಲಾ ಖರ್ಚು ಕಳೆದು ತಿಂಗಳಿಗೆ 1000 ಉಳಿಯುತ್ತದೆಯಂತೆ.
   • ಪ್ರತೀ ಟಗರಿಗೆ ಮೂರು ತಿಂಗಳಿಗೆ ಆಹಾರ ಮೇವು ಸೇರಿ 1500 ರೂ ಖರ್ಚು ಬರುತ್ತದೆ.
   • ಮಾರಾಟದಿಂದ ಬರುವ 9000 ದಿಂದ 1500 ಕಳೆದರೆ ಬರುವ 3000 ನಿವ್ವಳ ಲಾಭ.
   • ಟಗರು ಸಾಕಲು ಬರೇ ಸರಳ ಕೊಟ್ಟಿಗೆ ಸಾಕು.
   • ಅಕ್ಕಪಕ್ಕದಲ್ಲಿ ಇರುವ ಯಾವುದೇ ಸೊಪ್ಪು ಸದೆಗಳನ್ನೂ ಇವು ತಿನ್ನುತ್ತವೆ.

   ಟಗರು ಸಾಕುವುದು ಸುಲಭ:

  • ಟಗರು ಸಾಕಲು ಹೆಚ್ಚು ನಿಗಾ ಬೇಕಾಗಿಲ್ಲ. ಹೆಣ್ಣು ಆದರೆ ಬ್ರೀಡಿಂಗ್ ಮಾಡಬೇಕು.
  • ನಾವು ಅದರ ಬುಡದಲ್ಲೇ ಇರಬೇಕು. ಇದಕ್ಕೆ ಹಾಗೆ ಇಲ್ಲ. ಅದರಷ್ಟಕ್ಕೇ ಇರುತ್ತದೆ.
   • ನಾವು ಕೊಟ್ಟ ಆಹಾರವನ್ನು ತಿನ್ನುತ್ತಾ ಬದುಕುತ್ತದೆ.ಬಿಡುವು ಇದ್ದಾಗ ಹೊಲದಲ್ಲಿ ಮೇಯಲು ಬಿಡಬಹುದು.

   ಮೇವು:

   • ಒಟ್ಟು 30 ಟಗರಿಗೆ ಬೆಳೆಗ್ಗೆ 2 ಹೊರೆ ಹುಲ್ಲು ತಂದು ಹಾಕುತ್ತಾರೆ.
   • ಹೆಚ್ಚಾಗಿ ರಾಗಿ ಹುಲ್ಲನ್ನೇ ಹಾಕುವುದು. ಮತ್ತೆ 2-3 ಗಂಟೆ ಬಿಟ್ಟು  ತೊಗರಿ ಹೊಟ್ಟನ್ನು  ಕೊಡುತ್ತಾರೆ.
   • ಸಂಜೆಗೆ ಕೈ ತಿಂಡಿಯಾಗಿ ಸುಮಾರು 100 ಗ್ರಾಂ ನಷ್ಟು ಮೆಕ್ಕೆ ಜೋಳದ ಹುಡಿ ಮತ್ತು ಶೇಂಗಾ ಹಿಂಡಿಯನ್ನು ಮಿಶ್ರಣ ಮಾಡಿ ಕೊಡಲಾಗುತ್ತದೆ.
   • ಇದೇ ಆಹಾರ ಸಾಕಾಗುತ್ತದೆ. ಮರಿ ತರುವಾಗ 8 ರಿಂದ 12 ಕಿಲೋ ತನಕ ತೂಕ ಇರುತ್ತದೆ.
   • ಮೂರು ತಿಂಗಳು ಸಾಕಿದ ನಂತರ ಅದರ ತೂಕ 20-25 ಕಿಲೋ ತನಕ ಬರುತ್ತದೆ.
   • ಕೆಲವು ಉತ್ತಮವಾಗಿ ಬೆಳೆಯುತ್ತವೆ. ಒಂದೆರಡೂ ಹೆಚ್ಚು ತೂಕ ಬರಲಾರವು.

   ಸ್ವಾವಲಂಭಿಯಾಗಿ ಬದುಕಬೇಕು.  ಅದಕ್ಕೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.  ಇದು ಎಲ್ಲರೂ ಮಾಡಬಹುದಾದ ಸರಳ ವೃತ್ತಿ. ಇದನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಬಡತನ ಎಂಬುದು ದೂರವಾಗುತ್ತದೆ. ಕೆಲವು ಆಸಕ್ತ ನಿರುದ್ಯೋಗಿ ಯುವಕರಿಗೆ ಇವರು ಉಚಿತವಾಗಿ  ಸಾಕುವ ತರಬೇತಿಯನ್ನೂ ನೀಡುತ್ತಾರೆ. 2-3 ಜನ ಯುವಕರು ಇದನ್ನು ನೋಡಿ ತಾವೂ ಇದನ್ನು ಮಾಡಲು ಮುಂದಾಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...