ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಟಾಕಿಂಗ್ ಶೋ ತಂದ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ದೊಡ್ಡ ಮಟ್ಟದಲ್ಲಿತೇ ಯಶಸ್ಸು ಪಡೆಯಿತು.. ಬಹುತೇಕ ಎಲ್ಲಾ ಸ್ಟಾರ್ ಕಲಾವಿದರನ್ನ ಮಜಾ ಟಾಕೀಸ್ ಮೂಲಕ ಸೃಜನ್ ಲೋಕೇಶ್ ಕಿರುತೆರೆಗೆ ಕರೆತಂದರು.. ಶೋ ನಲ್ಲಿ ಕುರಿ ಪ್ರತಾಪ್.. ಶ್ವೇತಾ ಚಂಗಪ್ಪ.. ಅಪರ್ಣ.. ಮಂಡ್ಯ ರಮೇಶ್.. ಸೇರಿದಂತೆ ಬಹಳಷ್ಟು ಕಲಾವಿದರು ಸೃಜನ್ ಜೊತೆಗೆ ಮನರಂಜನೆಗೆ ಪ್ರಮುಖ ಕಾರಣರಾಗಿದ್ದರು.. ಕಲರ್ಸ್ ಕನ್ನಡದಲ್ಲಿ ಮೊದಲ ಸೀಸನ್ ನಲ್ಲಿ ಬಹಳ ದೊಡ್ಡ ಮಟ್ಟಗಿನ ಯಶಸ್ಸು ಪಡೆದ ಶೋ ಎರಡನೇ ಸೀಸನ್ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾದಾಗ ರೇಟಿಂಗ್ ಕೊಂಚ ಕಡಿಮೆಯಾಗಿತ್ತು..

ನಂತರ ಸತತ 500 ಎಪಿಸೋಡ್ ಗಳು ಪ್ರಸಾರಗೊಂಡ ಮಜಾ ಟಾಕೀಸ್ ಅಂತ್ಯವಾಗಿತ್ತು.. ತದನಂತರದಲ್ಲಿ ಸೃಜನ್ ಜೀ ವಾಹಿನಿಯಲ್ಲಿ ಹೊಸದೊಂದು ಶೋ ಮಾಡಲಿದ್ದಾರೆ ಎಂಬ ಸುದ್ದಿಯೂ ಇತ್ತು.. ಪ್ರೋಮೋ ಕೂಡ ಚಿತ್ರೀಕರಣಗೊಂಡಿತ್ತು.. ಆದರೆ ತದನಂತರ ಕೊರೊನಾ ಲಾಕ್ ಡೌನ್ ಆದ ಬಳಿಕ ಸೃಜನ್ ಮತ್ತೆ ಕಲರ್ಸ್ ಕನ್ನಡಕ್ಕೆ ಮರಳಿದ್ದು ಎರಡು ತಿಂಗಳ ಹಿಂದೆ ಮಜಾ ಟಾಕೀಸ್ ಹೊಸ ಸೀಸನ್ ಶುರು ಮಾಡಿದರು..

Shweta-Changappa

ಆದರೆ ಹೊಸ ಸೀಸನ್ ನಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದರು.. ಕೆಲ ಹೊಸ ಕಲಾವಿದರೂ ಸಹ ಮಜಾ ಮನೆಗೆ ಸೇರ್ಪಡೆಗೊಂಡರು.. ಆದರೆ ಸೃಜನ್ ಜೊತೆಗೆ ಬಹಳ ಹಿಟ್ ಆಗಿದ್ದ ಮಜಾ ಮನೆಯ ರಾಣಿ ಶ್ವೇತಾ ಚಂಗಪ್ಪ ಹೊಸ ಸೀಸನ್ ನಿಂದ ದೂರ ಉಳಿದಿದ್ದರು.. ಇದಕ್ಕೆ ಕಾರಣವೂ ಇದೆ..

ಹೌದು ಶ್ವೇತಾ ಚಂಗಪ್ಪ ಹಾಗೂ ಸೃಜನ್ ಲೋಕೇಶ್ ಜೋಡಿ ತೆರೆಯ ಮೇಲೆ ಬಹಳ ಹಿಟ್ ಕೂಡ ಆಗಿತ್ತು.. ಆದರೆ ಹೊಸ ಸೀಸನ್ ನಿಂದ ಶ್ವೇತಾ ಚಂಗಪ್ಪ ದೂರ ಉಳಿಯಲು ಕಾರಣ ಮತ್ಯಾರೂ ಅಲ್ಲ ಜಿಯಾನ್ ಅಯ್ಯಪ್ಪ.. ಹೌದು ಶ್ವೇತಾ ಚಂಗಪ್ಪ ಗರ್ಭಿಣಿಯಾದ ಸಮಯದಲ್ಲಿಯೇ ಮಜಾ ಟಾಕೀಸಿನ ಕಳೆದ ಸೀಸನ್ ನಿಂದಲೇ ದೂರ ಉಳಿದರು.. ಸೃಜನ್ ಲೋಕೇಶ್ ಕುಟುಂಬದಲ್ಲಿ ಒಬ್ಬರಾಗಿದ್ದ ಶ್ವೇತಾ ಅವರಿಗೆ ಗಿರಿಜಾ ಲೋಕೇಶ್ ಅವರು ಹಾಗೂ ಸೃಜನ್ ಪತ್ನಿ ಗ್ರೀಷ್ಮಾ ಅವರು ಶ್ವೇತಾ ಅವರ ಮನೆಗೆ ತೆರಳಿ ಸೀಮಂತ ಶಾಸ್ತ್ರ ನೆರವೇರಿಸಿ ಶ್ವೇತಾ ಅವರ ಇಷ್ಟದ ಅಡುಗೆಯನ್ನು ಸಹ ಮಾಡಿ ಬಡಿಸಿ ಮಡಿಲು ತುಂಬಿ ಉಡುಗೊರೆ ನೀಡಿ ಬಂದಿದ್ದರು.. ನಂತರದಲ್ಲಿ ಶ್ವೇತಾ ಚಂಗಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದು ಸದ್ಯ ಮಗನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿದ್ದರು..

ಇದೀಗ ಮಗನಿಗೆ ಒಂದು ವರ್ಷ ತುಂಬಿದೆ.. ಆದರೂ ಕೊರೊನಾ ಕಾರಣದಿಂದ ಮಜಾ ಟಾಕೀಸಿನಿಂದ ದೂರ ಉಳಿದರು.. ಹೌದು ಮನೆಯಲ್ಲಿ ಮಗು ಇದ್ದ ಕಾರಣ ಇಂತಹ ಸಮಯದಲ್ಲಿ ಹೊರಗೆ ಹೋಗಿ ಮರಳಿ ಮನೆಗೆ ಬಂದಾಗ ಸುಮ್ಮನೆ ಆರೋಗ್ಯದ ತೊಂದರೆ ಆಗೋದು ಬೇಡ ಎಂಬ ಕಾರಣಕ್ಕೆ ಈ ಬಾರಿ ಮಜಾ ಟಾಕೀಸಿನಲ್ಲಿ ಶ್ವೇತಾ ಅವರು ಕಾಣಿಸಿಕೊಳ್ಳಲಿಲ್ಲ.. ಬದಲಿಗೆ ತಮ್ಮದೇ ಆದ ಸ್ವಂತ ಉದ್ಯಮವೊಂದನ್ನು ಶುರು ಮಾಡಿದ್ದು ಅದರಲ್ಲಿಯೇ ಬ್ಯುಸಿ ಆಗಿದ್ದರು.. ಇನ್ನು ಸಾಮಾಜಿಕ‌ ಜಾಲತಾಣದಲ್ಲಿ ಆಗಾಗ ಮಗನ ಫೋಟೋ ಹಂಚಿಕೊಳ್ಳುವ ಶ್ವೇತಾ ಕೊಡಗಿನ ವೀರನ ರೀತಿಯಲ್ಲಿ ಮಗನನ್ನು ರೆಡಿ ಮಾಡಿ ಸಂತೋಷ ಹಂಚಿಕೊಂಡಿದ್ದರು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!