ನಟಿ ಶ್ವೇತಾ ಚಂಗಪ್ಪ  ಪ್ರಸ್ತುತ ‘ಮಜಾ ಟಾಕೀಸ್’ ಎಂಬ ಟಾಕ್ ಶೋನಲ್ಲಿ ರಾಣಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶ್ವೇತಾ ಚಂಗಪ್ಪ ಒಂದು ವರ್ಷದ ನಂತರ ತವರೂರಾದ ಕೂರ್ಗ್‌ಗೆ ಭೇಟಿ ನೀಡಿದ್ದಾರೆ.  ತಮ್ಮೂರಿಗೆ ಹೋಗಲು ಸ್ವಲ್ಪ ಸಮಯ ತೆಗೆದುಕೊಂಡಿರುವ ಶ್ವೇತಾ ಈಗ ಕೂರ್ಗ್’ಗೆ ಭೇಟಿ ನೀಡಿದ್ದಲ್ಲದೆ, ಕೊಡವರ ಕುಲದೇವತೆ ಇಗ್ಗುತ್ತಪ್ಪ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ

ಗಮನಸೆಳೆದಿದ್ದಾರೆ. ಇತ್ತೀಚೆಗೆ ಶ್ವೇತಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಚಿತ್ರವನ್ನು ಹಂಚಿಕೊಂಡಿದ್ದು, ಹಿಂದಿನ ವರ್ಷ ಅದೇ ದೇವಸ್ಥಾನದಲ್ಲಿ ನಡೆದ ತಮ್ಮ ಮಗನ ನಾಮಕರಣ ಸಮಾರಂಭವನ್ನು ನೆನಪಿಸಿಕೊಳ್ಳುತ್ತಾ ಹೀಗೆ ಬರೆದಿದ್ದಾರೆ” ನಮ್ಮ ಮಗನ ನಾಮಕರಣ ಸರಳವಾಗಿ ಇದೆ ದೇವಸ್ಥಾನದಲ್ಲಿ , ಹಿರಿಯರ ಆಶೀರ್ವಾದದೊಂದಿಗೆ, ನಮ್ಮ ಇಗ್ಗುತ್ತಪ್ಪ ದೇವರ ಸಮ್ಮುಖದಲ್ಲಿ ನಡೆದಿತ್ತು. ಒಂದು ವರ್ಷಗಳ ನಂತರ ಪುಟಾಣಿ ಜಿಯಾನ್ನೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆದದ್ದು ಮನಸ್ಸಿಗೆ ಖುಷಿಯನ್ನು ತಂದಿತು” ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Swetha Changappa (@swethachangappa)

ಶ್ವೇತಾ, ಪತಿ ಮತ್ತು ಆಕೆಯ ಪುಟ್ಟ ಮಗನ ಜೊತೆ ಪೋಸ್ ಕೊಡುವಾಗ ಸಂತೋಷದಾಯಕವಾಗಿ ಕಾಣಿಸುತ್ತಾರೆ. ಈ ಹಿಂದೆ ಶ್ವೇತಾ ಚಂಗಪ್ಪ ಅವರು ಜಿಯಾನ್ ಜೊತೆ ಶ್ರೀ ಧರ್ಮಸ್ಥಳ ಮಂಜುನಾಥ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಲಾಕ್ ಡೌನ್ ನಂತರ ಅವರು ಕುಟುಂಬದ ಜೊತೆಗೆ ಇಲ್ಲಿಗೆ ಭೇಟಿ ನೀಡಿದ್ದರು.

ಶ್ವೇತಾ ಚಂಗಪ್ಪ ಅವರು ಇತ್ತೀಚೆಗೆ ಕನ್ನಡ ಮನರಂಜನಾ ಕ್ಷೇತ್ರಕ್ಕೆ ಬಂದು ಹದಿನೆಂಟು ವರ್ಷಗಳಾಯಿತು. ಮಗು ಹುಟ್ಟಿದ ನಂತರ ಬಣ್ಣದ ಲೋಕದಿಂದ ದೂರ ಉಳಿದಿದ್ದ ಶ್ವೇತಾ, ಇತ್ತೀಚೆಗೆ ರಾಣಿಯಾಗಿ ಟಾಕ್ ಶೋ ಮಜಾ ಟಾಕೀಸ್’ಗೆ ಮರಳಿದರು. ಶ್ವೇತಾ ಈಗ ಕೆಲಸ ಮತ್ತು ಕುಟುಂಬ ಎರಡೂ ಕಡೆ ಗಮನ ಕೊಡುತ್ತಿದ್ದು, ತಮ್ಮ ಒಂದು ವರ್ಷದ ಮಗ ಜಿಯಾನ್ ಅಯ್ಯಪ್ಪ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಮಗುವಿನ ಬಗ್ಗೆ ಪ್ರತಿಯೊಂದು ವಿಡಿಯೋವನ್ನು ಹಂಚಿಕೊಳ್ಳುವ ಶ್ವೇತಾ, ಮಗು ನಡೆಯಲು ಪ್ರಾರಂಭಿಸಿದಾಗಲೂ ಒಂದು ಪುಟ್ಟ ವಿಡಿಯೋವನ್ನು ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಶ್ವೇತಾ ತಮ್ಮ ಕುಟುಂಬದ ಪ್ರತಿಯೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರಿಗೆ ಅಪಾರ ಅಭಿಮಾನಿಗಳಿದ್ದು, ಶ್ವೇತಾ ಅವರ ಪ್ರತಿಯೊಂದು ಫೋಟೋವನ್ನು ಅಭಿಮಾನಿಗಳು ಇಷ್ಟಪಡುತ್ತಾರೆ.

ಎಸ್.ನಾರಾಯಣ್ ನಿರ್ದೇಶನದ ‘ಸುಮತಿ’ಧಾರಾವಾಹಿಯೊಂದಿಗೆ ಶ್ವೇತಾ ಅವರ ವೃತ್ತಿಜೀವನ ಪ್ರಾರಂಭವಾಯಿತು. ಆ ನಂತರ ‘ಸುಕನ್ಯಾ’ ಮತ್ತು ‘ಅರುಂಧತಿ’ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್ ಕನ್ನಡ ಸೀಸನ್ 2’ ನ ಜನಪ್ರಿಯ ಸ್ಪರ್ಧಿಗಳಲ್ಲಿ ಶ್ವೇತಾ ಕೂಡ ಒಬ್ಬರು. ಶ್ವೇತಾ ಕೇವಲ ನಟಿಯಾಗಿ ಮಾತ್ರವಲ್ಲ, ನಿರೂಪಕರಾಗಿ ಸಹ ಜನಪ್ರಿಯತೆ ಪಡೆದಿದ್ದಾರೆ. ‘ಅರುಂಧತಿ’ ಧಾರವಾಹಿಯಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಪಡೆದಿದ್ದಾರೆ. ಜೀ ಕನ್ನಡ ವಾಹಿನಿ ನಡೆಸಿಕೊಡುವ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎರಡು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿ ಸಹ ಪಡೆದಿದ್ದಾರೆ. ಹೆಚ್ಚಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಶ್ವೇತಾ ‘ತಂಗಿಗಾಗಿ’ ಮತ್ತು ‘ವರ್ಷ’ ಎಂಬ ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •