ನಟಿ-ಶುಭಾ-ಪೂಂಜಾ

ಸರಳವಾಗಿ ಸದ್ದಿಲ್ಲದೆ ಮದುವೆಯಾದ ನಟಿ ಶುಭಾ ಪೂಂಜಾ..! ಶುಭಾಶಯ ಕೋರಿದ ಅಭಿಮಾನಿಗಳು..!!

Home

ಕನ್ನಡ ಸಾಂಡಲ್ ವುಡ್ ನ ಖ್ಯಾತ ನಟಿ ಶುಭಾ ಪೂಂಜಾ ಅವರು ಇದೀಗ ಮದುವೆಯಾಗಿದ್ದಾರೆ. ಶುಭಪುಂಜ ಅವರು ಈ ಮುಂಚೆ ಬಿಗ್ಬಾಸ್ ಮನೆಗೆ ತೆರಳಿದ ಮೇಲೆ ನಾವು ನಮ್ಮ ಮದುವೆಯನ್ನು ಮುಂದಕ್ಕೆ ಹಾಕಿದ್ದೆವು ಎಂಬುದಾಗಿ ಹೇಳಿ ಅವರ ಮದುವೆ ಕನಸಿನ ಬಗ್ಗೆ ಖುಷಿ ಕ್ಷಣ ಹೀಗಿರುತ್ತದೆ ಹಾಗಿರುತ್ತದೆ ಎಂದು ಅವರ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದರು. ಹೌದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುವ ನಟಿ ಶುಭಾ ಪೂಂಜಾ ಅವರು ಕಳೆದ ಕೆಲವು ದಿನಗಳ ಹಿಂದೆ, ತಾವು ಯಾವಾಗ ಮದುವೆ ಆಗುತ್ತಾರೆ ಎಂಬುದಾಗಿ ಸುಳಿವು ನೀಡಿದ್ದರು. ಆದರೆ ಅಭಿಮಾನಿಗಳಿಗೆ ಗೊತ್ತಾಗದ ಹಾಗೆ, ಮತ್ತು ಮಾಧ್ಯಮಕ್ಕೂ ಗೊತ್ತಾಗದ ಹಾಗೆ ಸದ್ದಿಲ್ಲದೆ ಈಗ ಮದುವೆ ಮಾಡಿಕೊಂಡಿದ್ದಾರೆ.

shubha poonja marriage photos: bigg boss kannada 8 fame actress shubha  poonja and sumanth mahabala marriage photos | Vijaya Karnataka Photogallery

ಜೊತೆಗೆ ಮದುವೆ ಫೋಟೋವನ್ನು ಅವರ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಉದ್ಯಮಿಯಾದ ಸುಮಂತ್ ನಟಿ ಶುಭಾ ಪೂಂಜಾ ಅವರನ್ನು ವರಿಸಿದ್ದು, ಈ ವಿಷಯ ತಿಳಿದ ಅಭಿಮಾನಿಗಳು ನಟಿ ಶುಭಪುಂಜ ಅವರಿಗೆ ಮದುವೆ ಶುಭಾಶಯ ತಿಳಿಸುತ್ತಿದ್ದಾರೆ. ಜೊತೆಗೆ ಇಬ್ಬರದು ಒಳ್ಳೆಯ ಜೋಡಿ ನಿಮಗೆ ಒಳ್ಳೆಯದಾಗಲಿ ಎಂದು ಪ್ರೀತಿ ಮೂಲಕ ಶುಭ ಕೋರಿದ್ದಾರೆ.
ನಟಿ ಶುಭಪುಂಜ ಅವರು ಫೋಟೋ ಶೇರ್ ಮಾಡಿಕೊಂಡು ಅಭಿಮಾನಿಗಳ ಬಳಿ ಏನು ಹೇಳಿದ್ದಾರೆ ಗೊತ್ತಾ, ನೀವೇ ಮುಂದೆ ಓದಿ..ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು, ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ  ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ  ಸರಳ ವಿವಾಹವಾದೆವು.
ನಿಮ್ಮೆಲ್ಲರ ಪ್ರೀತಿ, ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...