ಸ್ನೇಹಿತ ಅಥವಾ ಸ್ನೇಹಿತೆ ಕಷ್ಟ ಎಂದಾಗ ಜೊತೆ ನಿಲ್ಲುವುದು, ನಾನಿದ್ದೇನೆ ಎಂದು ಧೈರ್ಯ ಹೇಳುವುದು ಸರ್ವೇ ಸಾಮಾನ್ಯ. ಆದರೆ ವಿಪರ್ಯಾಸವೆಂದರೆ ಇಂದು ಹಾಗೆ ಜೊತೆಗೆ ನಿಲ್ಲುತ್ತೇನೆ ಅಥವಾ ಜೊತೆಗಿರುತ್ತೇನೆ ಎಂದು ಹೇಳುವವರ ಸಂಖ್ಯೆಯೇ ಬಹಳ ಕಡಿಮೆ. ಇತ್ತೀಚೆಗೆ ನಿಧನ ಹೊಂದಿದ ನಿರ್ಮಾಪಕ ರಾಮು ಅವರ ನಿಧನದಿಂದಾಗಿ ಮಾಲಾಶ್ರೀ ಅವರ ಕುಟುಂಬ ಸಹಜವಾಗಿ ದುಃಖದಲ್ಲಿ ಮುಳುಗಿ ಹೋಗಿದೆ. ಆ ದುಃಖವನ್ನು ಭರಿಸುವುದು ನಿಜಕ್ಕೂ ಕಷ್ಟದ ವಿಷಯ.

 

 

ಯಾರ ಮನೆಯಲ್ಲಾದರೂ ಸಾವು ಸಂಭವಿಸಿದರೆ ಅದನ್ನು ತಡೆದುಕೊಳ್ಳುವುದು ಸುಲಭದ ಮಾತಲ್ಲ. ಕಾಲ ಕಳೆದಂತೆ ಎಲ್ಲವೂ ಸರಿ ಹೋಗುತ್ತದೆ ಆದರೆ ಅಲ್ಲಿಯವರೆಗೆ ಜೊತೆಗಿದ್ದೇವೆ ಎಂಬ ಸಾಂತ್ವಾನದ ಮಾತು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ‌್ಳಲು ಸಹಾಯ ಮಾಡುತ್ತದೆ. ಕನ್ನಡ ಚಿತ್ರರಂಗದಲ್ಲಿ ಸಮಾನ ವಯಸ್ಸಿನ ತಾರೆಯರು ಇಂದು ಮಾಲಾಶ್ರೀ ಅವರ ಜೊತೆಗೆ ನಿಲ್ಲುವ ಭರವಸೆ ನೀಡಿದ್ದಾರೆ.

 

 

ಈ ಸಂಬಂಧ ನಟಿ ಶೃತಿ ಅವರು ಮಾಲಾಶ್ರೀ ಅವರಿಗೆ ಭಾವುಕ ಪತ್ರವೊಂದನ್ನು ಬರೆದು ಸಾಂತ್ವಾನದ ಜೊತೆಗೆ ಆಸರೆಯಾಗುವ ಭರವಸೆಯನ್ನು ನೀಡಿದ್ದಾರೆ. ಶೃತಿ ಅವರು ಬರೆದ ಪತ್ರ ಹೀಗಿದೆ, ಪ್ರೀತಿಯ ಗೆಳತಿ ಮಾಲಾಶ್ರೀ, ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಈ ಕ್ರೂರ ಪರಿಸ್ಥಿತಿಗೆ ನನ್ನದೊಂದು ಧಿಕ್ಕಾರ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •