ಕನ್ನಡದಲ್ಲಿ ಎಂದಿಗೂ ನಟಿಸುವುದಿಲ್ಲ ಎಂದಿದ್ದ ಶೃತಿ ಹಾಸನ್ಗೆ ಸಲಾರ್ ನಲ್ಲಿ ಅವಕಾಶ ಕೊಟ್ಟಿದ್ದ ಯಾಕೆ ಎಂದ ನೆಟ್ಟಿಗರು

ಶೃತಿ ಹಾಸನ್ ಕಳೆದ ಬಾರಿ ಕನ್ನಡದಲ್ಲಿ ನಟಿಸುವ ಯಾವುದೇ ಯೋಜನೆ ಇಲ್ಲ ಎಂದು ಕಳೆದ ಅಕ್ಟೋಬರ್ ನಲ್ಲಿ ಟ್ವೀಟ್ ಮಾಡಿದ್ದರು. ಈಗ ಅದೇ ಟ್ವೀಟ್ ಗೆ ರೀ ಟ್ವೀಟ್ ಮಾಡಿ ವೆಲ್ ಕಂ ಟು ಕನ್ನಡ ಇಂಡಸ್ಟ್ರಿ ಎಂದು ನೆಟ್ಟಿಗರು ಶೃತಿ ಹಾಸನ್ ರನ್ನು ಟ್ರೋಲ್ ಮಾಡುತ್ತಿದ್ದಾರೆ.

ಕನ್ನಡದ ಸಲಾರ್ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಶೃತಿ ಹಾಸನ್ ರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಇದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಕನ್ನಡ ಇಂಡಸ್ಟ್ರಿ ಬಗ್ಗೆ ತಿಳಿಯದ ನಟಿಯನ್ನು ಯಾಕೆ ಸೇರಿಸಿಕೊಂಡಿರಿ ? ಎಂದು ಕೇಳುತ್ತಿದ್ದಾರೆ.

shruti-haasan

ಹಿಂದೊಮ್ಮೆ  ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ನಿರೂಪಕ ಅಕುಲ್ ಬಾಲಾಜಿ ಈಕೆಗೆ ನಿಮ್ಮ ತಂದೆ ಕನ್ನಡದಲ್ಲಿ ನಟಿಸಿದ್ದಾರೆ ಎಂದು ಹೇಳಿದಾಗ ಈಕೆ ಜಂಭದಿಂದ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

ಹೊಂಬಾಳೆ ಫಿಲ್ಮ್ಸ್ ಶೃತಿ ಹಾಸನ್ ಗೆ ಸಲಾರ್ ಚಿತ್ರಕ್ಕೆ ವೆಲ್ಕಂ ಮಾಡಿದ ಟ್ವೀಟ್ ಗೆ ಹಲವು ಜನ ವಿವಿಧ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.-

ಕನ್ನಡ ಚಿತ್ರದಲ್ಲಿ ನಾನು ಎಂದಿಗೂ ನಟಿಸುವುದಿಲ್ಲ ಅಂತ ಹೇಳಿದ ನಟಿಯನ್ನು ಕರೆದುಕೊಂಡು ಬಂದು ಸಲಾರ್ ಕನ್ನಡದ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಿರಿ ನಿಮ್ಮಗೆ ಸಲಾರ್ ಚಿತ್ರಕ್ಕೆ ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ಬೇರೆ ಯಾರು ನಟಿಮಣಿಯರು ಸಿಗಲಿಲ್ಲವೇ ? ಎಂದು ಒಬ್ಬರು ರಿಪ್ಲೈ ಮಾಡಿದ್ದರೆ,

shruti-haasan

ಇನ್ನೊಬ್ಬರು, ಅಲ್ಲ ನಿಮಗೆ ಬೇರೆ ಯಾರು ಸಿಗಲಿಲ್ವಾ ಇವರಿಗೆ ಕನ್ನಡ ಅಂದ್ರೆ ಸ್ವಲ್ಪ ಕೂಡ ಇಷ್ಟ ಇಲ್ಲ ಆದರೆ ನಿಮಗೆ ಕನ್ನಡ ದ ಮೇಲೆ ಸ್ವಲ್ಪ ಕೂಡ ಗೌರವ ಇಲ್ಲ ಇದ್ದಿದ್ರೆ ನೀವು ಇವರನ್ನು ಆಯ್ಕೆ ಮಾಡ್ತಾ ಇರಲಿಲ್ಲ ಬೇರೆ ಭಾಷೆಗೂ ಹೋಗ್ತಾ ಇರಲಿಲ್ಲ ರಾಜಮೌಳಿ ಕನ್ನಡದವರಾಗಿದ್ರು ಕನ್ನಡದಲ್ಲಿ ಒಂದು ಸಿನಿಮಾ ಕೂಡ ಮಾಡ್ಲಿಲ್ಲ ಆದರೆ ನೀವು ೨ ಸಿನಿಮಾ ಗೆ ಹೋದ್ರಿ ‘ ಎಂದು ರಿಪ್ಲೈ ಮಾಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •