ಮಕ್ಕಳ ಶೋನಲ್ಲಿ ಬೇಕಿತ್ತಾ ಈ ಅಸಭ್ಯ ಸೌಂಡ್,ಚುಮ್ಮ ಅಂತೆ,ರಾತ್ರಿ ಸಮಯದ ಸೌಂಡ್ ಅಂತೆ,ಮತ್ತೊಂದಂತೆ,ಅದಕ್ಕೆ ಅಲ್ಲಿದ್ದೋರು ಬಿದ್ದು ಬಿದ್ದು ನಗೋದಂತೆ…

Home

ನನ್ನಮ್ಮ ಸೂಪರ್ ಸ್ಟಾರ್.. ಕನ್ನಡ ಕಿರುತೆರೆಯಲ್ಲಿ ವಿಭಿನ್ನತೆಯ ಪ್ರಯತ್ನ ಮಾಡುವ ಕಲರ್ಸ್ ಕನ್ನಡ ವಾಹಿನಿ ತಂದ ಹೊಸ ಶೋ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.. ನಿಜಕ್ಕೂ ಮಕ್ಕಳಿಗಾಗಿ ಇಂತಹದೊಂದು ಶೋನ ಅವಶ್ಯಕತೆ ಇತ್ತು ಎಂದು ಈ ಹಿಂದೆ ನಾನೇ ಬರೆದದ್ದೂ ಉಂಟು.. ಆದರೆ ಇಂದಿನ ಸಂಚಿಕೆ ನಿಜಕ್ಕೂ ಮಕ್ಕಳ ಮುಂದೆ ಇರಲಿ, ನಾವುಗಳು ನೋಡಲೇ ಮುಜುಗರ ತಂದುಬಿಟ್ಟಿತು ಎಂಬುದನ್ನು ಮುಜುಗರದಿಂದಲೇ ಹೇಳಿಕೊಳ್ಳುವಂತಾಗಿದೆ..

ಹೌದು ಒಂದು ಕಡೆ ಜೀ ವಾಹಿನಿ ಹಾಗೂ ಕಲರ್ಸ್ ಕನ್ನಡ ವಾಹಿನಿಯ ನಡುವೆ ಟಿ ಆರ್ ಪಿ ಗಾಗಿ ಶೀಥಲ ಸಮರವು ನಡೆಯುತ್ತಿರೋದು ಎಲ್ಲರಿಗೂ ತಿಳಿದೇ ಇದೆ.. ಇದು ವಾಹಿನಿಗಳ ನಡುವೆ ಸಾಮಾನ್ಯವೂ ಹೌದು.. ಇದಕ್ಕಾಗಿ ಎರಡೂ ವಾಹಿನಿಗಳು ಒಂದಕ್ಕಿಂತ ಮತ್ತೊಂದು ಎನ್ನುವಂತೆ ಹೊಸ ಹೊಸ ಶೋಗಳನ್ನು ವಿಭಿನ್ನವಾದ ಶೋಗಳನ್ನು ನೀಡುತ್ತಿದ್ದು, ಇತ್ತ ಜನರಿಗೆ ಎರಡೂ ವಾಹಿನಿಯಿಂದ ಮನರಂಜನೆಯ ಮಹಾಪೂರವೇ ದೊರೆಯುತ್ತಿರುವುದು ಒಳ್ಳೆಯ ವಿಚಾರ.. ವಾರ ಪೂರ್ತಿ ಧಾರಾವಾಹಿಯ ಮರಂಜನೆಯಾದರೆ ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ರಸದೌತಣವೆನ್ನಬಹುದು..

ಇನ್ನು ಇತ್ತ ಅದಾಗಲೇ ದೊಡ್ಡ ಹಿಟ್ ಆದ ಸರಿಗಮಪ ಹಾಗೂ ಕಾಮಿಡಿ ಕಿಲಾಡಿಗಳು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಡ್ರಾಮ ಜೂನಿಯರ್ಸ್ ಇಷ್ಟು ಶೋಗಳನ್ನು ಸೀಸನ್ ಮೇಲೆ ಸೀಸನ್ ಮಾಡುತ್ತಾ ಟಿ ಆರ್ ಪಿ ಪಡೆಯುತ್ತಿರುವ ಜೀ ಕನ್ನಡ ಸಧ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ತಮ್ಮ ವಾಹಿನಿಗೆ ಕರೆತಂದು ಹೊಸ ಶೋ ನಡೆಸುವ ತಯಾರಿಯಲ್ಲಿರೋದು ಎಲ್ಲರಿಗೂ ತಿಳಿದಿದೆ..

ಇದರ ಜೊತೆಗೆ ಡ್ರಾಮಾ ಜೂನಿಯರ್ಸ್ ಹಾಗೂ ಸರಿಗಮಪ ಲಿಟಲ್ ಚಾಂಪ್ಸ್ ಶೋ ಕೂಡ ಸಧ್ಯದಲ್ಲಿಯೇ ಹೊಸ ಸೀಸನ್ ಶುರುವಾಗಲಿದ್ದು ಅದಾಗಲೇ ಆಡಿಷನ್ ಪ್ರಕ್ರಿಯೆ ಶುರುವಾಗಿದೆ.. ಇನ್ನು ಇತ್ತ ಕಲರ್ಸ್ ಕನ್ನಡದಲ್ಲಿ ರಾಜಾ ರಾಣಿ ಹಾಗೂ ಎದೆ ತುಂಬಿ ಹಾಡುವೆನು ಶೋ ಕೂಡ ಯಶಸ್ವಿಯಾಗಿದ್ದು ಪ್ರತಿ ಬಾರಿಯೂ ಹೊಸ ಹೊಸ ಶೋಗಳನ್ನು ಕಲರ್ಸ್ ಕನ್ನಡ ವಾಹಿನಿ ತರುವುದಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.. ಇನ್ನು ಇತ್ತ ಗಂಡ ಹೆಂಡತಿ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ರಾಜಾ ರಾಣಿ ಶೋ ಬಹಳಷ್ಟು ಇಷ್ಟವಾಗಿತ್ತು.‌ ಆ ಶೋ ಮುಗಿಸಿದ ಬಳಿಕ ಅದೇ ಜಡ್ಜಸ್ ಜೊತೆಗೆ ಮಕ್ಕಳಿಗಾಗಿ ನನ್ನಮ್ಮ ಸೂಪರ್ ಸ್ಟಾರ್ ಶೋ ಶುರುವಾಯಿತು..

ನಿಜಕ್ಕೂ ಇಷ್ಟು ದಿನದ ವರೆಗೂ ಮಕ್ಕಳಿಗೆ ಅಗತ್ಯವಾದ, ಮಕ್ಕಳಿಗೆ ಮನರಂಜನೆಯ ಶೋ ಆಗಿಯೇ ಇತ್ತು.. ಇತ್ತ ಶೋ ನಲ್ಲಿ ಭಾಗವಹಿಸಿರುವ ಮಕ್ಕಳು ಕೂಡ ಜನರ ಮನಗೆದ್ದು ಹೆಸರು ಮಾಡಿದ್ದರು.. ಇತ್ತ ಮತ್ತೊಂದು ಒಳ್ಳೆಯ ವಿಚಾರವೆಂದರೆ ಸ್ಪರ್ಧಿಗಳ ಬಡತನ ಹಾಗೂ ಕಷ್ಟಗಳನ್ನು ಕಲರ್ಸ್ ವಾಹಿನಿಯ ಶೋಗಳು ಅಷ್ಟಾಗಿ ಬಳಸಿಕೊಳ್ಳುತ್ತಿರಲಿಲ್ಲ.. ಇದೆಲ್ಲವೂ ಸ್ಪಷ್ಟವಾಗಿ ಕಾಣುವ ಸತ್ಯಗಳಾಗಿದ್ದವು..

ಆದರೆ ಇಂದು ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಅದರಲ್ಲೂ ಮಕ್ಕಳ ಶೋವೊಂದರಲ್ಲಿ ಸೃಷ್ಟಿಸಿದ ಕೆಲವೊಂದು ಸಂದರ್ಭಗಳು ಅಷ್ಟೇ ಸ್ಪಷ್ಟವಾಗಿ ಪ್ರೇಕ್ಷಕರಿಗೆ ಮುಜುಗರವನ್ನೂ ಸಹ ಉಂಟು ಮಾಡಿದ್ದು ಸತ್ಯ.. ಹೌದು ಇಂದು ನನ್ನಮ್ಮ ಸೂಪರ್ ಸ್ಟಾರ್ ಶೋಗೆ ರಾಜಾರಾಣಿ ಶೋನ ಜೋಡಿಗಳನ್ನು ಕರೆಸಲಾಗಿತ್ತು.. ನಿರೀಕ್ಷೆಯಂತೆ ಮನರಂಜನೆ ಮತ್ತಷ್ಟು ಹೆಚ್ಚಾಗಿದ್ದದ್ದು ಸತ್ಯ.. ಆದರೆ ಚಂದನ್ ಹಾಗೂ ನಿವೇದಿತಾರಿಗೆ ನೀಡಿದ ಒಂದು ಟಾಸ್ಕ್ ನೂರಕ್ಕೆ ನೂರರಷ್ಟು ಮುಜುಗರವನ್ನುಂಟು ಮಾಡಿದ್ದು ಅಷ್ಟೇ ಸತ್ಯ..

ಹೌದು ಚಂದನ್ ಕಣ್ಣಿಗೆ ಬಟ್ಟೆ ಕಟ್ಟಿ.. ಇತ್ತ ಸ್ಕ್ರೀನ್ ಮೇಲೆ ಬರುವ ಚಿತ್ರಗಳನ್ನು ನೋಡಿ ನಿವೇದಿತಾ ಸೌಂಡ್ ಮಾಡಬೇಕಿತ್ತು.. ಆ ಶಬ್ಧಗಳನ್ನು ಆಧರಿಸಿ ಆ ಚಿತ್ರ ಯಾವುದೆಂದು ಚಂದನ್ ಕಂಡುಹಿಡಿಯಬೇಕಿತ್ತು.. ಆದರೆ ನಿವೇದಿತಾ ಮೊದಲೇ ಸಣ್ಣ‌ ಮಕ್ಕಳ ರೀತಿ ಆಡೋದು ಎಲ್ಲರಿಗೂ ತಿಳಿದೇ ಇದೆ.. ಅವರಿಗೆ ಕತ್ತೆಯ ಚಿತ್ರ.. ಉಪ್ಪಿನಕಾಯಿಯ ಚಿತ್ರ.. ಹಾಗೂ ಫೀಡಿಂಗ್ ಬಾಟಲ್ ಚಿತ್ರವನ್ನು ಬೇಕಂತಲೇ ತೋರಿಸಿ ಅದಕ್ಕೆ ನಿವೇದಿತಾ ಕೊಟ್ಟ ಸೌಂಡ್ ಗಳೋ ಚಿತ್ರವಿಚಿತ್ರ ವಾಗಿದ್ದವು.. ಇಷ್ಟೂ ಘಟನೆ ಅಲ್ಲಿ ಮಕ್ಕಳ‌ ಮುಂದೆಯೇ ನಡೆದಿದ್ದು ಒಂದು ಮುಜುಗರವಾದರೆ.. ಇತ್ತ ಮಕ್ಕಳನ್ನು ಕೂರಿಸಿಕೊಂಡು ಶೋ ನೋಡುತ್ತಿದ್ದ ಜನರಿಗೆ ವಾಹಿನಿ ಬದಲಿಸಲೂ ಆಗದೇ ನೋಡಲೂ ಆಗದೇ ಮುಜುಗರ ಅನುಭವಿಸುವಂತಾಯಿತು.

ಹೌದು ಅದರಲ್ಲೂ ಉಪ್ಪಿನ ಕಾಯಿ ಚಿತ್ರ ತೋರಿದಾಗ ಮಾಡಿದ ಕೆಲ ಸೌಂಡ್ ಗಳು ಎಲ್ಲವೂ ಸಹ ಬೇರೆ ರೀತಿಯ ಅರ್ಥ ಕಲ್ಪಿಸುವಂತೆಯೇ ಇದ್ದದ್ದು ಅಲ್ಲಿದ್ದ ಎಲ್ಲರಿಗೂ ತಿಳಿದೇ ಇತ್ತು.. ಜೊತೆಗೆ ಇತ್ತ ಚಂದನ್ ಚುಮ್ಮಾನಾ ನಾನ್ ನಿನಗೆ ಕೊಡ್ತೀನಲ್ಲಾ ಅದಾ.. ಕತ್ತಲೇ ಬೇರೆ ಇದೆ.. ನೀನು ಏನೇನೋ ಸೌಂಡ್ ಮಾಡ್ತಿದ್ದೀಯಾ ಎಂದರು.. ಹೀಗೆ ಮಾತನಾಡಿದ್ದಕ್ಕೆ ಅಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕಿದ್ದು ಬಹುಶಃ ಈ ಶೋ ಮಕ್ಕಳ ಶೋ ಎಂಬುದನ್ನು ಅಲ್ಲಿದ್ದವರೆಲ್ಲಾ ಮರೆತಂತೆ ಕಂಡಿತು..

ಇತ್ತ ಸಾವಿರಾರು ಮನೆಗಳಲ್ಲಿ ಶೋ ನೋಡುತ್ತಿರುವ ಮಕ್ಕಳು ಅದೆಲ್ಲವೂ ಅರ್ಥವಾಗದೇ ಪ್ರಶ್ನಾರ್ಥಕವಾದ ಮುಖ ಮಾಡಿಕೊಂಡು ಅಪ್ಪ ಅಮ್ಮನ ಮುಖ ನೋಡಿದಾಗ ಉತ್ತರ ನೀಡಲಾಗದ ಸಂದರ್ಭವೂ ಸೃಷ್ಟಿಯಾಗಿರಬಹುದು‌.. ಇನ್ನು ಇದೊಂದೇ ಶೋನಲ್ಲಿ ಇಂತಹ ಸಂದರ್ಭ ಸೃಷ್ಟಿಯಾಯಿತು ಅನ್ನೋ‌ ಮಾತಲ್ಲ.. ಈ ಹಿಂದೆ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿಯೂ ಅನುಶ್ರೀ ಅವರು ಅರ್ಜುನ್ ಜನ್ಯಾ ಅವರ ನಡುವಿನ ಕೆಲ ದೃಶ್ಯಗಳು ಮಕ್ಕಳ ಶೋ ನಲ್ಲಿ ಇದೆಲ್ಲಾ ಬೇಕಿತ್ತಾ ಎನ್ನುವಂತೇ ಆಗಿತ್ತು.. ಟಿ ಆರ್ ಪಿ ಮುಖ್ಯ ನಿಜ.. ಆದರೆ ಅದಕ್ಕೊಸ್ಕರ ಶೋ ತನ್ನ ಘನತೆಯನ್ನು ಕಳೆದುಕೊಳ್ಳಬಾರದಷ್ಟೇ..

ಇನ್ನೂ ಹೇಳಬೇಕೆಂದರೆ ನನಗೆ ಇನ್ನೂ ಸಹ ನೆನಪಿದೆ.. ಎಸ್ ಪಿ ಬಿ ಅವರು ಎದೆ ತುಂಬಿ ಹಾಡುವೆನು ಶೋ ನಲ್ಲಿ ಮಕ್ಕಳಿಗಾಗಿ ಮಾಡಿದ್ದ ಶೋ ಅದು.. ಆ ಶೊನಲ್ಲಿ ಒಂದು ಪುಟ್ಟ ಹುಡುಗಿ ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಹಾಡನ್ನು ಹಾಡಿತ್ತು.. ಆಗ ಆ ಹಾಡು ಬಹಳಷ್ಟು ಫೇಮಸ್ ಆಗಿತ್ತು.. ಆದರೆ ಎಸ್ ಪಿ ಬಿ ಅವರು ಆ ಮಗು ಆ ಹಾಡನ್ನು ಹಾಡಿದ ಕೂಡಲೇ ನೇರವಾಗಿಯೇ ಆ ಮಗುವಿಗೂ ಸಹ ಬೈದಿದ್ದರು.. ಆ ಮಗುವಿನ ಅಪ್ಪ ಅಮ್ಮನಿಗೂ ಸಹ ಈ ಹಾಡನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಬೈದು.. ಆ ಹಾಡಿನ ಅರ್ಥ ಗೊತ್ತಿದೆಯಾ..

ಮಕ್ಕಳು ಹಾಡುವಾಗ ಆ ಹಾಡಿನ ಸಾಲುಗಳನ್ನು ಅನುಭವಿಸಿ ಹಾಡ್ತಾರೆ.. ಅಂತಹುದರಲ್ಲಿ ಇಂತಹ ಹಾಡನ್ನು ಯಾಕೆ ಆಯ್ಕೆ ಮಾಡಿದ್ದೀರಾ ಎಂದು ನೇರವಾಗಿ ನಿಷ್ಠೂರವಾಗಿ ಬೈದಿದ್ದರು.. ಯಾವುದೇ ಟಿ ಆರ್ ಪಿ ಅನ್ನು ಅಂದು ಅವರು ಗಮನದಲ್ಲಿಟ್ಟುಕೊಂಡಿರಲಿಲ್ಲ.. ಆ ಮಗುವಿನ ಭವಿಷ್ಯ ಮಾತ್ರವೇ ಅವರ ಕಣ್ಣ ಮುಂದೆ ಇತ್ತು.. ಈಗಲೂ ಸಹ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೆನೆದರೆ ಒಂದು ರೀತಿ ಹೆಮ್ಮೆಯಾಗುತ್ತದೆ..

ಹೀಗೆಲ್ಲಾ ಹೇಗಿದೆ ಅಂದರೆ ಇತ್ತೀಚೆಗಂತೂ ಬೇರೆ ರೀತಿ ಮೀನಿಂಗ್ ಇರುವ ಡೈಲಾಗ್ ಹೇಳಿದರೆ ಮಾತ್ರವೇ ಶೋ ಹಿಟ್ ಆಗೋದು ಎಂದುಕೊಂಡಿದ್ದಾರೆ.. ಮದುವೆಯಾಗಿರುವ ಜಡ್ಜ್ ಜೊತೆ ಲವ್ ಅನ್ನೋದು ಮನರಂಜನೆಗೆ ಎಂದು ಸುಮ್ಮನಾಗುತ್ತಾರೆ.. ಬಹುಶಃ ಇವರೆಲ್ಲರೂ ಈ ಹಿಂದೆ ಇಂತಹ ಯಾವುದೇ ಡೈಲಾಗ್ ಇಲ್ಲದೇ ಇಂತಹ ಯಾವುದೇ ಬೇರೆ ರೀತಿಯ ಅರ್ಥ ಕೊಡುವ ಮಾತುಗಳಿಲ್ಲದೇ ಪ್ರೀತಿ ಅದು ಇದು ಎನ್ನುವುದಿಲ್ಲದೇ ಸೂಪರ್ ಹಿಟ್ ಆದ “ಎಸ್ ಪಿ ಬಿ ಅವರ ಎದೆ ತುಂಬಿ ಹಾಡುವೆನು” ಶೋ ವನ್ನು ಮರೆತು ಬಿಟ್ಟಿದ್ದಾರೆ..

ಅತ್ತ ಹಿರೇಮಗಳೂರು ಕಣ್ಣನ್ ಅವರು ನಡೆಸಿಕೊಡುತ್ತಿದ್ದ ಹರಟೆ ಕಾರ್ಯಕ್ರಮ ಹಾಗೂ ಪ್ರಾಣೇಶ್ ಅವರ ಕಾಮಿಡಿ ಕಾರ್ಯಕ್ರಮಗಳನ್ನು ಈಗಿನ ಯಾವ ಕಾಮಿಡಿ ಶೋ ಕೂಡ ಅದರ ಒಂದು ಭಾಗವನ್ನೂ ತಲುಪಲಾರದು ಎಂಬುದು ಸತ್ಯ.. ಜನರು ಬದಲಾವಣೆ ಬಯಸುತ್ತಾರೆ ಎಂಬುದು ಅವರ ವಾದವಿರಬಹುದು.. ಆದರೆ ಆ ರೀತಿಯ ಬದಲಾವಣೆಯ ಮನಸ್ಥಿತಿ ಹುಟ್ಟುಹಾಕಿರುವುದು ಇಂತಹ ಶೋಗಳೆ ಎಂಬುದು ಸತ್ಯ.. ಜೊತೆಗೆ ಯಾವುದೇ ವಾಹಿನಿಯಾಗಲಿ.. ಯಾವುದೇ ಶೋ ಆಗಲಿ ಮಕ್ಕಳ ಕಾರ್ಯಕ್ರಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಂಡರೆ ಇತ್ತ ಪ್ರೇಕ್ಷಕರು ಕುಟುಂಬ ಸಮೇತ ಯಾವುದೇ ಮುಜುಗರವಿಲ್ಲದೇ ಶೋ ನೋಡಬಹುದಾಗಿದೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...