ಸಾಮಾಜಿಕ ಜಾಲತಾಣವೊಂದರಲ್ಲಿ ಕೆಲವು ದಿನಗಳ ಹಿಂದೆ ಈ ಒಂದು ಫೋಟೋ ಬಹಳ ವೈರಲ್ ಆಗಿತ್ತು. ಇಲ್ಲಿ ಕೆಳೆಗೆ ಕಾಣಿಸುತ್ತಿರುವ ಫೋಟೋ ಒಂದನ್ನು ನೋಡಿದರೆ, ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸುವಂತಿತ್ತು. ಈ ಒಂದು ಫೋಟೋ ಜನರ ಮನದಲ್ಲಿ ಅಚ್ಚಳಿಯದ ಹಾಗೆ ಮನದಂಚಿನಲ್ಲಿ ಅಡಗಿ ಕುಳಿತಿತ್ತು ಎಂದರೆ ತಪ್ಪಾಗಲಾರದು.

Shocked-image

ಹೌದು, ಈ ಒಂದು ಫೋಟೋ ಯಾರು ತೆಗೆದಿದ್ದು, ಯಾವ ಊರಿನದ್ದೂ ಎಂಬ ಮಾಹಿತಿ ಇದುವರೆಗೂ ತಿಳಿದುಬಂದಿಲ್ಲ. ಆದರೆ ಈ ಒಂದು ಫೋಟೋ ನೋಡುವವರಿಗೆ ಯಾವ ತರಹದ ಉತ್ತರ ಕೂಡ ಅವಶ್ಯಕತೆ ಇಲ್ಲ ಎಂದು ಹೇಳಬಹುದು. ದೇಶದ ಬಡತನವನ್ನು ಸರಿಯಾಗಿ ತೋರಿಸುವಂತಿದೆ ಈ ಫೋಟೋ. ಈ ಅಜ್ಜಿಯನ್ನು ನೋಡಿ, ಆ ಕೈಗಳನ್ನು ನೋಡಿ ಎಷ್ಟು ನೋವು ತುಂಬಿದೆ ಎಂಬುದನ್ನು.

ಜೊತೆಗೆ ಈ ಕೋತಿ ಅಜ್ಜಿಗೆ ಸಮಾಧಾನ ಪಡಿಸುವಂತಿದೆ. ಈ ಫೋಟೋ ಕೇವಲ ಅಜ್ಜಿಗೆ ಮಾತ್ರ ಸಮಾಧಾನ ಮಾಡುವಂತಿದೆ ಹಾಗೂ ಮಾನವನಿಗಿಂತ ಪ್ರಾಣಿಯ ಮನಸ್ಸೇ ದೊಡ್ಡದು ಎಂಬುದನ್ನು ಈ ಒಂದು ಮೂಕಪ್ರಾಣಿ ಸಾರುತ್ತಿದೆ. ಈ ಫೋಟೋ ನೋಡಿದರೆ ಯಾರಿಗಾದರೂ ಮನಸ್ಸಿಗೆ ನೋವಾಗದೇ ಇರಲು ಸಾಧ್ಯವಾ.?

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಹಲವರು ತಮ್ಮ ತಮ್ಮ ಖಾತೆಗಳಲ್ಲಿ ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಬರೆದು ಹಂಚಿಕೊಂಡಿದ್ದರು. ಈ ಫೋಟೋ ತುಂಬಾನೇ ವೈರಲ್ ಆಗಿತ್ತು ಎಂದೇ ಹೇಳಬಹುದು. ಮನುಷ್ಯ ಎಂಬ ಪ್ರಾಣಿಗೆ ಇರದ ಕಾಳಜಿ, ಕರುಣೆ ಈ ಮೂಕ ಪ್ರಾಣಿಗಳಿಗೆ ಇರುವುದನ್ನು ಕಂಡರೆ ನಿಜಕ್ಕೂ ಮನ ಒಮ್ಮೆ ಕರಗಿ ಹೋಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •