ಬಣ್ಣ ಬದಲಾಯಿಸುವ ಶಿವನ ಬಗ್ಗೆ ಕೇಳಿದ್ದೀರಾ? ಹೌದು ದಿನಕ್ಕೆ ಮೂರು ಬಾರಿ ಈ ಪುಣ್ಯಕ್ಷೇತ್ರದ ಶಿವಲಿಂಗ ಬಣ್ಣ ಬದಲಾಯಿಸುತ್ತಂತೆ. ಆ ಪುಣ್ಯ ಕ್ಷೇತ್ರ ಯಾವುದು, ಅದು ಎಲ್ಲಿದೆ ಎನ್ನುವುದನ್ನು ಇಂದು ತಿಳಿಯೋಣ.

ಎಲ್ಲಿದೆ ಈ ದೇವಾಲಯ? PC: youtube ಶಿವಲಿಂಗ ಬಣ್ಣ ಬದಲಾಯಿಸುವ ಕ್ಷೇತ್ರವೇ ಕಾಂತೇಶ್ವರ ದೇವಾಲಯ. ಇದು ಉಡುಪಿಯಿಂದ 40 ಕಿ.ಮೀ ದೂರದಲ್ಲಿದೆ ಇದು ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿ ಬೆಳವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ ಕಾಂತಾವರ.
ಹೆಸರು ಬಂದಿದ್ದು ಹೇಗೆ? PC: youtube ಈ ಕ್ಷೇತ್ರವು ಹಿಂದೆ ಅರಣ್ಯದಿಂದ ಕೂಡಿತ್ತು. ಕಾಂತಾರ ಎಂದರೆ ಅರಣ್ಯ ಅಲ್ಲಿನ ಪ್ರಕೃತಿಯಿಂದಾಗಿ ಕಾಂತಾವರ ಎಂಬ ಹೆಸರು ಬಂದಿದ್ದು ಎನ್ನಲಾಗುತ್ತದೆ. ಹಾಗೆಯೇ ಇಲ್ಲಿ ಶಿವನು ಪಾರ್ವತಿ ಸಮೇತನಾಗಿ ನೆಲೆಸಿರುವುದರಿಂದ ಇಲ್ಲಿಗೆ ಕಾಂತೇಶ್ವರ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.
ಮೂರು ಬಣ್ಣದಲ್ಲಿ ಕಾಣಿಸುವ ಶಿವ
7ನೇ ಶತಮಾನಕ್ಕೆ ಸೇರಿದ್ದು PC: youtube ಇದನ್ನು 7ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ. ಇಲ್ಲಿನ ಮೂಲದೈವ ಕಾಂತೇಶ್ವರ. ಇಲ್ಲಿ ಗಣೇಶ, ಅಣ್ಣಪ್ಪ ಹಾಗೂ ಅರ್ಧನಾರೀಶ್ವರ ಗುಡಿಯೂ ಇದೆ.
ಪುರಾಣ ಕಥೆ PC: youtube ಜಂಜವಾತ ಎನ್ನುವ ಅಸುರನ ಕುಟುಂಬ ಇಲ್ಲಿ ನೆಲೆಸಿದ್ದರಂತೆ. ಅವರ ಕುಟುಂಬ ಇಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಕಾಟ ನೀಡುತ್ತಿದ್ದರಂತೆ. ಅವುಗಳಲ್ಲಿ ಅಂಬರೀಶ ಮುನಿ ಆ ರಾಕ್ಷಸರ ಸಂಹಾರಕ್ಕಾಗಿ ಶಿವನನ್ನು ತಪಸ್ಸು ಮಾಡುತ್ತಾನಂತೆ . ಹಾಗಾಗಿ ಶಿವನು ಇಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತದೆ.
ಮೂರು ಬಣ್ಣದಲ್ಲಿ ಕಾಣಿಸುವ ಶಿವ PC: youtube ಇಲ್ಲಿನ ವಿಶೇಷವೆಂದರೆ ಶಿವನು ದಿನದಲ್ಲಿ ಮೂರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬೆಳಗ್ಗೆ ಬೆಳ್ಳಿ ಬಣ್ಣದಲ್ಲಿ, ಮಧ್ಯಾಹ್ನ ತಾಮ್ರದ ಬಣ್ಣ ಸಂಜೆ ಬಂಗಾರದ ಬಣ್ಣದಲ್ಲಿ ಶಿವನು ಕಂಗೊಳಿಸುತ್ತಾನೆ. ಇದಕ್ಕೆ ಯಾವುದೇ ಕವಚಗಳನ್ನು ಹಾಕಲಾಗಿಲ್ಲ. ಬರೀ ಶಿಲೆಯ ಲಿಂಗವಿದು. ಇದನ್ನು ವಜ್ರಶಿಲೆ ಎನ್ನಲಾಗುತ್ತದೆ.ಭಕ್ತರ ಬೇಡಿಕೆ ಈಡೇರುತ್ತದೆ PC: youtube ವ್ಯಾಪಾರ ದೋಷ ನಿವಾರಣೆ, ಸಂತಾನ ಪ್ರಾಪ್ತಿ, ಕುಟುಂಬ ಕಲಹ ನಿವಾರಣೆಗೆಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಇಲ್ಲಿಗೆ ಬಂದ ಭಕ್ತರು ಯಾವತ್ತೂ ಬರೀ ಕೈಯಲ್ಲಿ ಹೋಗೋದಿಲ್ಲ ಎನ್ನುತ್ತಾರೆ.
ಶಿವಲಿಂಗಕ್ಕೆ ಕಡಗ
ಶಿವಲಿಂಗಕ್ಕೆ ಕಡಗ PC: youtube ಅಂಬರೀಶ ಮುನಿಗೆ ಪಾರ್ವತಿ ದೇವಿಯು ಕಡಗವನ್ನು ನೀಡಿದ್ದಳಂತೆ. ಶಿವಲಿಂಗಕ್ಕೆ ಕಡಗ ತೊಡಿಸಿ ಪೂಜಿಸುವಂತೆ ಹೇಳಿದ್ದಳಂತೆ. ಆ ಕಡಗವನ್ನು ಇಂದಿಗೂ ಇಲ್ಲಿ ಕಾಣಬಹುದು. ಇಲ್ಲಿನ ನಂದಿಯೂ ಬಹಳ ದೊಡ್ಡದಾಗಿದೆ.

ತಲುಪುವುದು ಹೇಗೆ? PC: youtube ಬೆಂಗಳೂರಿನಿಂದ, ಮಂಗಳೂರಿನಿಂದ ಉಡುಪಿಗೆ ಸಾಕಷ್ಟು ಬಸ್‌ಗಳಿವೆ. ಉಡುಪಿಯಿಂದ ೪೦ ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ. ಇನ್ನು ರೈಲು ಮೂಲಕ ಹೋಗುವುದಾದರೆ ಸಮೀಪದ ರೈಲು ನಿಲ್ದಾಣವೆಂದರೆ ಉಡುಪಿ ರೈಲುನಿಲ್ದಾಣ. ವಿಮಾನದ ಮೂಲಕ ಹೊಗುವುದಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!