ದಶಕಗಳಿಂದ ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ರಿಯಾಲಿಟಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು, ಕನ್ನಡದ ಟಾಪ್ ಸ್ಟಾರ್ ನಟರೇ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದು ವಿಶೇಷ. ಈ ಸಾಲಿನಲ್ಲಿ ಕಳೆದ ಎಂಟು ಸೀಸನ್ ಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಿರುವ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮವು ಅಪಾರ ಜನ ಮನ್ನಣೆ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಬಾರಿ ಪ್ರಸಾರವಾದ ಬಿಗ್ ಬಾಸ್ ಆವೃತ್ತಿಯೂ ಬಹಳ ವಿಶೇಷವಾಗಿ ಮೂಡಿ ಬಂದಿದ್ದು, ಭಾಗವಹಿಸಿದ ಸ್ಪರ್ಧಿಗಳೆಲ್ಲಾ ನೆಚ್ಚಿನ ಸೆಲೆಬ್ರಿಟಿಗಳೇ ಆಗಿದ್ದು ವಿಶೇಷ.

ಹೌದು ಈ ಸ್ಪರ್ಧಿಗಳಲ್ಲಿ ಅಪಾರ ಜನ ಮನ್ನಣೆ ಪಡೆದುಕೊಂಡು ಜನಪ್ರಿಯರಾದವರು ಶೈನ್ ಶೆಟ್ಟಿ, ವಾಸುಕಿ ವೈಭವ್, ಪ್ರಿಯಾಂಕಾ ದೀಪಿಕಾ ದಾಸ್ ಹಾಗೂ ಕುರಿ ಪ್ರತಾಪ್ ಎಂದರೆ ತಪ್ಪಾಗಲಾರದು. ಬಿಗ್ ಬಾಸ್ ಕಾರ್ಯಕ್ರಮವೂ ಪ್ರಾರಂಭದಿಂದಲೂ, ಕೊನೆಯ ತನಕ ಜನರನ್ನು ಹಿಡಿದಿಟ್ಟು ಕೊಲ್ಲುವುದರಲ್ಲಿ ಯಶಸ್ವಿಯಾಗಿತ್ತು. ಇನ್ನು ಶೈನ್ ಶೆಟ್ಟಿ ಅವರು ಈ ಸ್ಪರ್ಧೆಯಲ್ಲಿ ಶೈನ್ ಆಗಿ ಮಿಂಚಿದ್ದು ಬಿಗ್ ಬಾಸ್ ಕಿರೀಟವನ್ನು ಕೂಡಾ ಧರಿಸಿ ಬಿಟ್ಟರು. ಈ ಸ್ಪರ್ಧೆ ಮುಗಿದು ವರುಷವಾದರು ಕೂಡ ಸ್ಪರ್ಧಿಗಳು ಮಾತ್ರ ಸದಾ ಸುದ್ದಿಯಲ್ಲೇ ಇದ್ದಾರೆ. ಈ ಬಾರಿ ಬಿಗ್ ಬಾಸ್ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡಿರುವ ಶೈನ್ ಶೆಟ್ಟಿ ಅವರ ಹವಾ ಮಾತ್ರ ಸಿಕ್ಕಾಪಟ್ಟೆ ಜೋರಾಗಿಯೇ ಇದೆ ಎನ್ನಬಹುದು.

 

 

ಕಠಿಣ ಪರಿಶ್ರಮ ಪಟ್ಟವರಿಗೆ ಒಂದಲ್ಲ ಒಂದು ದಿನ ಕಲಾದೇವಿ ಕೈಹಿಡಿಯುತ್ತಾಳೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ನಟ ಶೈನ್ ಶೆಟ್ಟಿ ಅವರು. ಬಣ್ಣದ ಬದುಕಿಗೆ ಬಂದ ಆರಂಭದ ದಿನಗಳಿಂದಲೂ ಅನೇಕ ಏಳುಬೀಳು ಹಾಗೂ ಕಷ್ಟಗಳನ್ನು ದಾಟಿ ಬಿಗ್ ಬಾಸ್ ವೇದಿಕೆಗೆ ಬಂದಿದ್ದ ಈ ನಟ, ಇದೀಗ ಜನರ ಮನಸ್ಸಿನಲ್ಲಿ ಅಚ್ಚುಳಿದು ಬಿಟ್ಟಿದ್ದಾರೆ. ಶೆಟ್ಟಿ ಎಂದರೆ ಬಹುತೇಕ ಜನರಿಗೆ ಗೊತ್ತಿರಲಿಲ್ಲ, ಆದರೆ ಇದೀಗ ಕರುನಾಡ ಮನೆ ಮಾತಾಗಿರುವ ಅವರು ಸಾಲು ಸಾಲು ಚಿತ್ರಗಳ ಸಿನಿಮಾ ಆಫರ್ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಿರೀಟ ಧರಿಸಿ ವಿನ್ನರ್ ಆಗಿ ಹೊರ ಹೊಮ್ಮಿರುವ ಶೈನ್, ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಅಲ್ಲದೇ ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುತ್ತಾ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಇನ್ನು ಪ್ರತಿ ಸೀಸನ್ ನಲ್ಲಿಯೂ ಕೂಡ ಒಂದಲ್ಲ ಒಂದು ಜೋಡಿ ಮನೆಯ ಹಾಟ್ ಟಾಪಿಕ್ ಆಗಿ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಅಂತೆಯೇ ಕಳೆದ ಬಾರಿ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರ ಹೆಸರು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಸುದ್ದಿಯಲ್ಲಿದ್ದು, ಪ್ರತಿ ದಿನ ಕೂಡ ಶೈನ್ ಶೆಟ್ಟಿ ದೀಪಿಕಾ ದಾಸ್ ಹಿಂದೆ ಹೋಗಿ ಲವ್ ಮಾಡು, ಮದುವೆಯಾಗು ಎಂದು ಕೇಳಿಕೊಳ್ಳುತ್ತಿದ್ದರು. ಈ ಕ್ಷಣಗಳೆಲ್ಲ ಪ್ರೇಕ್ಷಕರಿಗೆ ಬಹಳ ಮನರಂಜನೆ ನೀಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ವಿವಾಹವಾದರೆ ಬಹಳ ಚೆನ್ನಾಗಿರುತ್ತದೆ ಎಂದು ಮಾತನಾಡುತ್ತಿದ್ದರು. ಆದರೆ ಅದೇಕೋ ಏನೋ ಹೊರಬಂದ ಮೇಲೆ ಇವರಿಬ್ಬರೂ ಪ್ರೇಮದ ವಿಚಾರವಾಗಲಿ ಅಥವಾ ವಿವಾಹದ ವಿಚಾರವಾಗಲಿ ಹೇಳಿಕೊಳ್ಳಲಿಲ್ಲ. ದೀಪಿಕಾ ದಾಸ್ ತಾಯಿಯ ಮಾತಿನಂತೆ ಹೊರಗೆ ಬಂದ ಮೇಲೆ ಅವರ ಕೆಲಸದಲ್ಲಿ ಅವರು ನಿರತರಾಗಿಬಿಟ್ಟಿದ್ದಾರೆ.

 

ಆದರೆ ಇಂದಿಗೂ ಕೂಡ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮದ ಮೀಟಿ ನೋಡುತ್ತಿದ್ದರೆ ಅಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಶೈನ್ ಹಾಗೂ ದೀಪಿಕಾ ಜೋಡಿ. ಹೌದು ಇವರಿಬ್ಬರ ಕೆಮಿಸ್ಟ್ರಿ ಕೂಡ ಬಹಳ ಚೆನ್ನಾಗಿಯೇ ಇತ್ತು. ಈಗಾಗಲೇ ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಿದೆ ಆದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೈನ್ ಹಾಗೂ ದೀಪಿಕಾ ಅವರ ಬಿಗ್ ಬಾಸ್ ಜರ್ನಿ ಯ ವೀಡಿಯೋಗಳು ಹರಿದಾಡುತ್ತಲೇ ಇದೆ. ಇದೀಗ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಶೈನ್ ಹಾಗೂ ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗಿದ್ದರು ಹಾಗೂ ಶೈನ್ ಶೆಟ್ಟಿ , ದೀಪಿಕಾ ದಾಸ್ ಹಿಂದೆ ಬಿದ್ದು ಪ್ರೀತಿ ಎಂದು ಹೇಗೆ ಅಲೆದಾಡುತ್ತಿದ್ದರು ಎಂಬುದನ್ನೆಲ್ಲ ವೀಡಿಯೋ ಮಾಡಿ ಅದಕ್ಕೆ ಜಾನಪದ ಶೈಲಿಯಲ್ಲಿರುವ ಬ್ಯಾಟಿ ಬ್ಯಾಟಿಯನಾಡಿದ ಹಾಡನ್ನು ಕೂಡ ಹಾಕಿದ್ದಾರೆ. ನಿಜಕ್ಕೂ ಈ ವಿಡಿಯೋ ನೋಡುಗರಿಗೆ ಕಚಗುಳಿ ಕೊಡುತ್ತಿದ್ದು ನಿಜಕ್ಕೂ ಇವರಿಬ್ಬರು ಮದುವೆಯಾಗಬೇಕು ಎಂದು ಪ್ರೇಕ್ಷಕರು ಕಮೆಂಟ್ ಮಾಡ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •