ಇಂದು ನಟ ಅನಿರುದ್ಧ್ ಅವರ ಹುಟ್ಟುಹಬ್ಬ. ಸಾಹ-ಸಸಿo-ಹ ವಿಷ್ಣುವರ್ಧನ್ ಅವರ ಅಳಿಯ ಆದರೂ, ತಮ್ಮ ಸ್ವಂತ ಪ್ರತಿಭೆಯಿಂದ ಜನ ಮನ್ನಣೆ ಗಳಿಸಿರುವ ಕಲಾವಿದ ಅನಿರುದ್ಧ್. 2001 ರಲ್ಲಿ ಚಿತ್ರ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಅನಿರುದ್ಧ್ ಅದೇ ವರ್ಷ ಚಿಟ್ಟೆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಆದರೆ ಅನಿರುದ್ಧ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ತುo-ಟಾಟ. ಅನಿರುದ್ಧ್ ಅವರು ಸಿನಿಮಾ ನಟನಷ್ಟೇ ಅಲ್ಲ, ನಾಟಕರಂಗದಲ್ಲಿ ಕೂಡ
ತೊಡಗಿಸಿಕೊಂಡಿದ್ದರು. ಇಲ್ಲಿಯವರೆಗು ಕನ್ನಡ, ಹಿಂದಿ ಮತ್ತು ತಮಿಳಿನಲ್ಲಿ 20ಕ್ಕು ಹೆಚ್ಚು ಸಿನಿಮಾಗಳಿಗೆ ನಾಯಕನಾಗಿ ಅನಿರುದ್ಧ್ ಬಣ್ಣ ಹಚ್ಚಿದ್ದಾರೆ.ಈ ವರ್ಷಕ್ಕೆ ಅನಿರುದ್ಧ್ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡಿ 20 ವರ್ಷ ತುಂಬುತ್ತದೆ. ಸಾಹ-ಸಸಿo-ಹ ವಿಷ್ಣುವರ್ಧನ್ ಅವರ ಮಗಳು ಕೀರ್ತಿವರ್ಧನ್ ಅವರೊಡನೆ ವಿವಾಹವಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಂದು ಅನಿರುಧ್ ಅವರ ಹುಟ್ಟು ಹಬ್ಬಕ್ಕೆ ಅವರನ್ನು ಭೇಟಿ ಮಾಡಲು, ಶುಭ ಕೋರಲು ಸಾವಿರಾರು ಅಭಿಮಾನಿಗಳು ಅನಿರುಧ್ ಅವರ ಮನೆ ಹತ್ತಿರ ಹೋಗಿದ್ದಾರೆ. ಇಂದು ಅನಿರುದ್ಧ್ ಅವರ ಹುಟ್ಟುಹಬ್ಬಕ್ಕೆ ಪತ್ನಿ ಕೀರ್ತಿ ಮತ್ತು ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಏನೆಲ್ಲಾ ಗಿಫ್ಟ್ ಬಂದಿದೆ ಗೊತ್ತಾ? ತಿಳಿಯಲು ಮುಂದೆ ಓದಿ..
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ನಟ ಅನಿರುದ್ಧ್ ಇಂದು ಕರ್ನಾಟಕದ ಮನೆಮಾತಾಗಿದ್ದಾರೆ. ಇಂದು ಅನಿರುದ್ಧ್ ಅವರ ಹುಟ್ಟುಹಬ್ಬಕ್ಕೆ ಅವರ ಪತ್ನಿ ಕೀರ್ತಿ ವರ್ಧನ್ ಅವರು ಭರ್ಜರಿ ಉಡುಗೊರೆ ನೀಡಿದ್ದಾರೆ, ಅನಿರುದ್ಧ್ ಅವರ ಹುಟ್ಟುಹಬ್ಬಕ್ಕೆ ಆಡಿ6 ಕಾರ್ ಅನ್ನು ಗಿಫ್ಟ್ ಮಾಡಿದ್ದಾರೆ ಕೀರ್ತಿ ವರ್ಧನ್. ಜೊತೆ ಜೊತೆಯಲಿ ಧಾರಾವಾಹಿಯ ಮೇಘಾ ಶೆಟ್ಟಿ ಅನಿರುದ್ಧ್ ಅವರಿಗೆ ಹೂಬೊಕ್ಕೆ ಕಳಿಸಿ ಶುಭಕೋರುವುದರ ಜೊತೆಗೆ ಒಂದು ಲಾಬ್ರೆಡರ್ ನಾ-ಯಿ ಮ-ರಿಯನ್ನು ಗಿಫ್ಟ್ ಮಾಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಪುಷ್ಪ ಪಾತ್ರಧಾರಿ ಅಪೂರ್ವ ಶ್ರೀ ಅವರು ಗಣೇಶನ ಮೂರ್ತಿಯನ್ನು ನೀಡಿ ಅನಿರುದ್ಧ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ಇದಲ್ಲದೆ ಜೊತೆಜೊತೆಯಲಿ ಧಾರಾವಾಹಿಯ ಸುಬ್ಬು ಅನಿರುಧ್ ಅವರಿಗೆ ವಿಷ್ಣುವರ್ಧನ್ ಫೋಟೋ ಫ್ರೆಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಗು ಜೊತೆ ಜೊತೆಯಲಿ ತಂಡದಿಂದ ಮತ್ತು ಅಭಿಮಾನಿಗಳಿಂದ ಅನಿರುದ್ಧ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸಿನಿಮಾ ಪ್ರಪಂಚದಲ್ಲಿ ಸಿಗದಷ್ಟು ಜನಪ್ರಿಯತೆ ಮತ್ತು ಜನರ ಪ್ರೀತಿ ಅನಿರುದ್ಧ್ ಅವರಿಗೆ ಆರ್ಯವರ್ಧನ್ ಪಾತ್ರದಿಂದ ಸಿಕ್ಕಿದೆ. ಈ ಜನಪ್ರಿಯತೆಯನ್ನ ಸದುಪಯೋಗ ಪಡಿಸಿಕೊಂಡಿರುವ ಅನಿರುದ್ಧ್ ಅವರು ಸಮಾಜಕ್ಕೆ ಒಳ್ಳೆಯದಾಗುವ ಹಲವಾರು ಕಾರ್ಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಮಾಡುತ್ತಿದ್ದಾರೆ. ಬೆಂಗಳೂರು ಹಾಗು ಕರ್ನಾಟಕದ ಇತರೆ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ಮತ್ತು ಇನ್ನಿತರ ಕೆಲಸಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ ನಟ ಅನಿರುದ್ಧ್.
ಪ್ರಸ್ತುತ ಅನಿರುದ್ಧ್ ಅವರು ಭಾರತಿ ವಿಷ್ಣುವರ್ಧನ್ ಅವರ ಕುರಿತು ಡಾ-ಕ್ಯುಮೆಂಟರಿ ಒಂದನ್ನು ತಯಾರಿಸುತ್ತಿದ್ದಾರೆ. ಇಂದು ಅನಿರುದ್ಧ್ ಅವರ ಹುಟ್ಟುಹಬ್ಬದಂದು ಅವರು ಅಂದುಕೊಂಡಿರುವ ಎಲ್ಲಾ ಕೆಲಸಗಳು ಈಡೇರಲಿ ಎಂದು ಹಾರೈಸೋಣ. ಅನಿರುಧ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.