ಕನ್ನಡ ಪ್ರೇಕ್ಷಕರ ಜನಮನಗೆದ್ದ ಅಚ್ಚುಮೆಚ್ಚಿನ ಧಾರವಾಹಿಗಳಲ್ಲಿ ಅಗ್ರಸ್ಥಾನದಲ್ಲಿರುವ ಧಾರವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ. ಧಾರವಾಹಿಯಲ್ಲಿ ಅನಿರುಧ್ ಹಾಗೂ ಮೇಘ ಶೆಟ್ಟಿ ರವರು ನಟಿಸುತ್ತಿದ್ದು, ಆರ್ಯವರ್ಧನ್ ಹಾಗೂ ಅನು ಸಿರಿಮನೆ ಎಂದು ಪ್ರಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ನಟಿಸುತ್ತಿದ್ದು ಜನರನ್ನು ಹೆಚ್ಚಾಗಿ ಆಕರ್ಷಿಸಿದ್ದು ಆರ್ಯವರ್ಧನ್ ಹಾಗೂ ಅನು ಸಿರಿಮನೆ ಪಾತ್ರಗಳು. ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಅನು ಸಿರಿಮನೆ ಖ್ಯಾತಿಯ ಮೇಘ ಶೆಟ್ಟಿಯವರು ತಾವು ನಟಿಸಿದ ಮೊದಲ ಧಾರವಾಹಿಯಲ್ಲಿ ಅಲ್ಪ ಅವಧಿಯಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ತಮ್ಮ ಪಾತ್ರದ ಮುಗ್ಧ ಅಭಿನಯದಿಂದಲೇ ಮನೆ ಮನೆಮಾತಾಗಿದ್ದಾರೆ. ಸದಾ ಸುದ್ದಿಯಲ್ಲಿರುವ ಮೇಘ ಶೆಟ್ಟಿಯವರು ಇತ್ತೀಚಿಗೆ ತಮ್ಮದೇಯಾದ ಹೊಸ ಮನೆಯನ್ನು ಕಟ್ಟಿಸಿ, ಅದರ ಗ್ರಹ ಪ್ರವೇಶ ವನ್ನು ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮೇಘ ಶೆಟ್ಟಿ ಅವರ ಹೊಸಮನೆಯು ಅತ್ಯಂತ ಸುಂದರವಾಗಿದ್ದು,ಅದನ್ನು ಕಟ್ಟಿಸಲು ತಗುಲಿದ ವೆಚ್ಚ ಬರೋಬ್ಬರಿ ಮೂರು ಕೋಟಿಗೂ ಅಧಿಕ ಎಂದು ತಿಳಿದುಬಂದಿದೆ.

Shetty

ಅನು ಸಿರಿಮನೆ ಖ್ಯಾತಿಯ ಮೇಘ ಶೆಟ್ಟಿಯವರು ತಮ್ಮ ಪಾತ್ರಕ್ಕೆ ಬೇಕಾದ ಮುಗ್ಧ ಅಭಿನಯ, ತಂದೆ-ತಾಯಿಯ ನೆಚ್ಚಿನ ಮಗಳು, ಪಾತ್ರಕ್ಕೆ ಬೇಕಾದ ಹಾಗಿನ ನೈಜ ನಟನೆಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ನಿಜ ಜೀವನದಲ್ಲಿ ಎಲ್ಲರೊಂದಿಗೆ ತೆರೆಯುವ ಮೇಘ ಶೆಟ್ಟಿ ಯು ಇತ್ತೀಚಿಗೆ ಬೆಂಗಳೂರಿನಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ತಮ್ಮ ಚಿಕ್ಕವಯಸ್ಸಿನಲ್ಲಿಯೇ ಮೇಘ ಶೆಟ್ಟಿ ಅವರು ಸ್ವಂತ ಮನೆಯನ್ನು ಬೆಂಗಳೂರಿನ ಪ್ರತಿಷ್ಠಿತ ಲೇಔಟ್ ನಲ್ಲಿ ನಿರ್ಮಿಸಿದ್ದು, ಇದಕ್ಕೆ ಸುಮಾರು ಮೂರು ಕೋಟಿ ಯಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಹೊಸಮನೆಯ ಗ್ರಹಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಂದರವಾಗಿ ಕಟ್ಟಿಸಿರುವ ಹೊಸಮನೆಯ ಫೋಟೋವನ್ನು ನೋಡಿದ ಜನರು ಈಗ ಶೆಟ್ಟಿಯವರ ಜೀವನದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸುತ್ತಿದ್ದಾರೆ.

Cloud Shetty

ಕೊರೋನಾ ಪರಿಸ್ಥಿತಿಯ ಕಾರಣದಿಂದಾಗಿ ಮೇಘ ಶೆಟ್ಟಿಯವರು ತಮ್ಮ ಮನೆಯ ಗೃಹಪ್ರವೇಶಕ್ಕೆ ಕೇವಲ ಆತ್ಮೀಯರನ್ನು ಮಾತ್ರ ಆಹ್ವಾನಿಸಿದ್ದರು. ಮೇಘ ಶೆಟ್ಟಿಯವರ ಮನೆಯ ಗೃಹಪ್ರವೇಶಕ್ಕೆ ಜೊತೆ ಜೊತೆಯಲಿ ಧಾರವಾಹಿಯ ನಾಯಕ ನಟ ಆರ್ಯವರ್ಧನ್ ಖ್ಯಾತಿಯ ಅನಿರುದ್ ರವರು ಆಗಮಿಸಿ 8 ಲಕ್ಷ ಮೌಲ್ಯದ ಟಿವಿಯನ್ನು ಮೇಘ ಶೆಟ್ಟಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈಗ ಎಲ್ಲಿ ನೋಡಿದರೂ ಸಾಮಾಜಿಕ ಜಾಲತಾಣದಲ್ಲಿ ಮೇಘ ಶೆಟ್ಟಿಯವರು ಕಟ್ಟಿಸಿರುವ ಮನೆಯ ಫೋಟೋಗಳು ಹರಿದಾಡುತ್ತಿದೆ.

ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ .ಅಭಿಮಾನಿಗಳು ಮೇಘ ಶೆಟ್ಟಿ ಅವರ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಕಿರುತೆರೆಯನ್ನು ಪ್ರವೇಶಿಸಿದ ಅಲ್ಪ ಸಮಯದಲ್ಲಿಯೇ ಮೇಘ ಶೆಟ್ಟಿ ಅವರು ಯಶಸ್ಸನ್ನು ಪಡೆದುಕೊಂಡಿದ್ದು ಜೀವನದಲ್ಲಿ ಇನ್ನಷ್ಟು ಯಶಸ್ಸನ್ನು ತನ್ನತ್ತ ಬಾಚಿಕೊಳ್ಳಲಿ ಎಂಬುದೇ ಎಲ್ಲರ ಆಶಯ. ಸದ್ಯ, ಮೇಘ ಶೆಟ್ಟಿಯವರು ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಚಂದನವನದಲ್ಲಿ ಗೋಲ್ಡನ್ ಸ್ಟಾರ್ ಎಂದು ಪ್ರಸಿದ್ಧಿ ಪಡೆದಿರುವ ಗಣೇಶ್ ರವರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •