ಯುಗ ಯುುಗ ಕಳೆದರು ಕೂಡ ತಾಯಿ ಎಂಬ ಪದವನ್ನು ವರ್ಣಿಸಲು ಸಾಧ್ಯವಿಲ್ಲ. ನಾವು ಪ್ರೀತಿಸಿದರೆ ನಮ್ಮನ್ನು ಪ್ರೀತಿಸುವ ಹಲವು ಹೃದಯಗಳು ನಮಗೆ ಸಿಗಬಹುದು. ಆದರೆ ನಾವು ಪ್ರೀತಿಸದೇ ಹೋದರು ಕೂಡ ನಮ್ಮನ್ನು ಪ್ರೀತಿಸುವ ನಿಶ್ಕಲ್ಮಶ ಹೃದಯ ಒಂದಿದೆ ಎಂದರೆ ಅದು ತಾಯಿ ಮಾತ್ರ. ನಿಜವಾಗಿಯೂ ಈ ತಾಯಿಯ ಪ್ರೀತಿಯ ಬಗ್ಗೆ ಬರೆಯುತ್ತಾ ಹೋದರೆ ಪದಗಳೇ ಬಡವಾಗುತ್ತದೆ ಎಂದೇ ಹೇಳಬಹುದು.

 

 

ನಮ್ಮ ಬದುಕು ಎಂಬ ಪುಸ್ತಕದ ಪುಟಗಳನ್ನು ಒಮ್ಮೆ ತಿರುವಿ ಹಾಕಿ ನೋಡಿದರೆ ಅದರಲ್ಲಿ ಪ್ರತಿ ಪುಟದಲ್ಲೂ ಕೂಡ ಕಾಣುವ ಹೆಸರು ಈ ತಾಯಿ. ಹೌದು ತಾಯಿ ಎಂದರೆ ಒಂದು ಅದ್ಭುತವಾದ ಶಕ್ತಿ ಎಂದೇ ಹೇಳಬಹುದು. ಶಿಶುವಿನ ಮೊದಲ ತೊದಲ ನುಡಿಯು ಅಮ್ಮ, ಹಸಿದಾಗ ಉಣಿಸುವಳು ಅಮ್ಮ, ಕಣೀರಿನ ಹನಿ ಒರೆಸುವಳು ಕೂಡ ಅಮ್ಮ. ಇದೀಗ ಇಂತಹ ತಾಯಿಯ ಪ್ರೀತಿಯ ಬಗ್ಗೆ ಕನ್ನಡ ಚಿತ್ರರಂಗದ ನಟ ಶರಣ್ ಕೂಡ ಮಾತನಾಡಿದ್ದು, ಇದು ನನ್ಮ ಪೂರ್ವ ಜನ್ಮದ ಪುಣ್ಯ ಎಂದಿದ್ದಾರೆ.

 

 

“ನನಗೆ ಅಮ್ಮ ಅಲ್ಲ, ಅಮ್ಮಂದಿರಿದ್ದಾರೆ. ಇದು ದೇವರು ನನಗೆ ನೀಡಿದ ವರ. ನಾವು ಈ ಮಟ್ಟಕ್ಕೆ ಏರಲು ಅಮ್ಮಂದಿರ ಪರಿಶ್ರಮವೇ ಕಾರಣ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ನನಗೆ ಜನ್ಮ ನೀಡಿದ ತಾಯಿ ಯಾರು ಎಂದು ಗೊತ್ತಿಲ್ಲ. ಆದರೆ ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ಅದರಿಂದ ಪ್ರಯೋಜನವೂ ಇಲ್ಲ. ಏಕೆಂದರೆ ಇಬ್ಬರೂ ನಮ್ಮನ್ನು ಸಮಾನವಾಗಿ ಪ್ರೀತಿಸುತ್ತಾರೆ.ನಾನು ಮಾತ್ರವಲ್ಲ ಸಹೋದರಿಯರಾದ ಶ್ರುತಿ ಹಾಗೂ ಉಷಾಗೆ ಕೂಡಾ ಜನ್ಮ ನೀಡಿದವರು ಯಾರು ಎಂದು ಗೊತ್ತಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •