ಸ್ಯಾಂಡಲ್‌ವುಡ್‌ನ ಹಿರಿಯ ನಟ ಸತ್ಯಜಿತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಸತ್ಯಜಿತ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಬೌರಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ನಟ ಸತ್ಯಜಿತ್ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸತ್ಯಜಿತ್
ಕಳೆದ ಹಲವು ದಿನಗಳಿಂದಲೂ ನಟ ಸತ್ಯಜಿತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿಂದೆ ಗ್ಯಾಂಗ್ರಿನ್‌ನಿಂದಾಗಿ ಅವರ ಒಂದು ಕಾಲನ್ನು ಕತ್ತರಿಸಲಾಗಿತ್ತು. ಈಗ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೀವ್ರ ಅನಾರೋಗ್ಯ ನಟ ಸತ್ಯಜಿತ್ ಅವರನ್ನು ಬಾಧಿಸುತ್ತಿದೆ.

ಐಸಿಯುನಲ್ಲಿ ಹಿರಿಯ ನಟ ಸತ್ಯಜಿತ್​: ಆರೋಗ್ಯ ಸ್ಥಿತಿ ಗಂಭೀರ | Sandalwood actor Sathyajith admitted to Bowring hospital ICU in Bengaluru | TV9 Kannada

ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ
ನಟ ಸತ್ಯಜಿತ್ ಅವರ ಆರೋಗ್ಯ ಸ್ಥಿತಿ ಸದ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನಟ ಸತ್ಯಜಿತ್ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎನ್ನಲಾಗಿದೆ. 71 ವರ್ಷ ವಯಸ್ಸಿನ ಸತ್ಯಜಿತ್ ಅವರಿಗೆ ಹಾರ್ಟ್ ಸ್ಟ್ರೋಕ್ ಅಗಿದೆ ಅಂತಲೂ ಹೇಳಲಾಗುತ್ತಿದೆ.

ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜಿತ್
ಸತ್ಯಜಿತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಸತ್ಯಜಿತ್ 650ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಂದ್ಕಾಲದಲ್ಲಿ ಬಹುಬೇಡಿಕೆ ಪೋಷಕ ನಟನಾಗಿ ಸತ್ಯಜಿತ್ ಗುರುತಿಸಿಕೊಂಡಿದ್ದರು. ನೆಗೆಟಿವ್ ಪಾತ್ರ ಕೊಟ್ಟರೂ, ಅಷ್ಟೇ ಖಡಕ್ ಆಗಿ ಸತ್ಯಜಿತ್ ಅಭಿನಯಿಸುತ್ತಿದ್ದರು.

ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ!! | Prajapragathi

‘ಅರುಣ ರಾಗ’, ‘ಅಂತಿಮ ತೀರ್ಪು’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ರಣರಂಗ’, ‘ನಮ್ಮೂರ ರಾಜ’, ‘ನ್ಯಾಯಕ್ಕಾಗಿ ನಾನು’, ‘ಯುದ್ಧಕಾಂಡ’, ‘ಇಂದ್ರಜಿತ್’, ‘ನಮ್ಮೂರ ಹಮ್ಮೀರ’, ‘ಪೊಲೀಸ್ ಲಾಕಪ್’, ‘ಮನೆದೇವ್ರು’, ‘ಮಂಡ್ಯದ ಗಂಡು’, ‘ಪೊಲೀಸ್ ಸ್ಟೋರಿ’, ‘ಸರ್ಕಲ್ ಇನ್ಸ್‌ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಆಪ್ತಮಿತ್ರ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೇಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •