ಚಿತ್ರರಂಗದಲ್ಲಿ ಹಲವಾರು ಭಾಷೆಯಲ್ಲಿ ನಟಿಸಿ ಇಂದು ಕಿರುತೆರೆಗೆ ಕಾಲಿಟ್ಟ ಹಲವಾರು ನಟ ಹಾಗೂ ನಟಿಯರನ್ನು ನಾವು ಕಾಣಬಹುದು. ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಹಾಗೂ ಇನ್ನೂ ಅನೇಕ ರೀತಿಯ ಪಾತ್ರಗಳನ್ನು ಮಾಡುತ್ತಾ ಇಂದು ಕಿರುತೆರೆಯಲ್ಲಿ ಕೂಡ ಹೆಸರು ಮಾಡುತ್ತಿದ್ದಾರೆ. ಇನ್ನು ಅದೆಷ್ಟೋ ನಟ ಹಾಗೂ ನಟಿಯರು ಇಂದು ಅನೇಕ ಕಿರುತೆರೆಯ ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಇತ್ತೀಚಿಗಷ್ಟೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕನ್ನಡ ಹಿರಿಯ ನಟಿ ಸುಧಾರಾಣಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಿತ್ರರಂಗದ ಖ್ಯಾತ ನಟಿಯೊಬ್ಬರು ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಹೌದು ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿಯೊಬ್ಬರು ಇದೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ.

Serial

ಹೌದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಖ್ಯಾತ ನಟಿಯಾಗಿ ಇಂದಿಗೂ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿಯರಲ್ಲಿ ರಮ್ಯ ಕೃಷ್ಣ ಅವರು ಕೂಡ ಒಬ್ಬರು. ರಮ್ಯ ಕೃಷ್ಣ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನು ಕಿರುತೆರೆಗೆ ಬಂದರೆ ರಮ್ಯ ಕೃಷ್ಣ ಅವರು ತೆಲುಗು ಕಿರುತೆರೆಯಲ್ಲಿ ಈಗಾಗಲೇ ಕಾಲಿಟ್ಟಿದ್ದಾರೆ. ಹೌದು ನಾಗ ಭೈರವಿ ಎಂಬ ತೆಲುಗು ಭಾಷೆಯ ಕಿರುತೆರೆ ಧಾರಾವಾಹಿಯಲ್ಲಿ ಮೊದಲ ಬಾರಿ ನಟಿಸಿದ್ದಾರೆ. ಇನ್ನು ವಿಶೇಷವೇನೆಂದರೆ ಇದೀಗ ಕನ್ನಡ ಕಿರುತೆರೆಯಲ್ಲಿ ನಾಗ ಭೈರವಿ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗಲಿದ್ದು, ಅದರಲ್ಲಿ ರಮ್ಯ ಕೃಷ್ಣ ಅವರು ಕಾಣಿಸಿಕೊಳ್ಳಲಿದ್ದಾರೆ.

Serial

ಇದೀಗ ನಾಗ ಭೈರವಿ ಧಾರಾವಾಹಿ ಪ್ರಮೋ ಸದ್ದು ಮಾಡುತ್ತಿದ್ದು, ಮಾರ್ಚ್ ಒಂದರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಧಾರಾವಾಹಿ ಹೆಸರಿಗೆ ತಕ್ಕಂತೆ ನಾಗಗಳ ಬಗ್ಗೆ ಇದೆ. ಆದರೆ ನಾಗಿಣಿ ಧಾರಾವಾಹಿಯಂತೆ ಧಾರಾವಾಹಿಯು ಕಥೆಯನ್ನು ಹೊಂದಿಲ್ಲ. ಇನ್ನು ಇದೇ ಧಾರಾವಾಹಿಯಲ್ಲಿ ಗಟ್ಟಿಮೇಳ ಖ್ಯಾತಿಯ ಆರತಿ ಪಾತ್ರದಲ್ಲಿ ನಟಿಸಿರುವ ಅಶ್ವಿನಿ ಅವರು ಕೂಡ ಕಿರುತೆರೆಯ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕನ್ನಡದ ಮತ್ತೊಬ್ಬ ನಟಿ ಯಾಶ್ಮಿ ಗೌಡ ಕೂಡ ಅಭಿನಯಿಸಲಿದ್ದಾರೆ.

Serial

ಇನ್ನು ದಕ್ಷಿಣ ಭಾಗದ ಪ್ರಮುಖ ನಾಲ್ಕು ಭಾಷೆಗಳಲ್ಲಿ ಮಿಂಚಿರುವ ನಟಿ ರಮ್ಯಾ ಅವರು ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಆಗಮಿಸಿದ್ದಾರೆ. ಇನ್ನು ಇತ್ತೀಚೆಗೆ ಬಿಡುಗಡೆಯಾಗಿ ಸದ್ದು ಮಾಡಿದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ರಮ್ಯ ಕೃಷ್ಣ ಅವರು ಮಿಂಚಿದ್ದರು. ಇದೀಗ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು, ಕನ್ನಡಿಗರ ಮನಸ್ಸನ್ನು ಹೇಗೆ  ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದರೆ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •