ಹಿಂದಿ ಟಿವಿ ಧಾರಾವಾಹಿಗಳಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದ ದಿವ್ಯಾ ಭಟ್ನಾಗರ್ ನಿನ್ನೆ ತಡ ರಾತ್ರಿ ನಿಧನ ಹೊಂದಿದ್ದಾರೆ.

ದಿವ್ಯಾ ಭಟ್ನಾಗರ್ ಗೆ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ದಿನೇ-ದಿನೇ ಅವರ ಪರಿಸ್ಥಿತಿ ಕ್ಷೀಣಿಸುತ್ತಾ ಸಾಗಿ, ಡಿಸೆಂಬರ್ 6 ರ ತಡರಾತ್ರಿ ದಿವ್ಯಾ ಕೊನೆ ಉಸಿರೆಳೆದಿದ್ದಾರೆ. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಹೆಚ್ಚಾದ ಕಾರಣದಿಂದ ಅವರು ನಿಧನಹೊಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

serial-actress-divya

ದಿವ್ಯಾ ಭಟ್ನಾಗರ್ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಸೇರಿದಂತೆ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ದಿವ್ಯಾ ಅವರ ಅಕಾಲಿಕ ನಿಧನಕ್ಕೆ ಧಾರಾವಾಹಿ ನಟ-ನಟಿಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ನಟಿ ದಿವ್ಯಾರ ತಾಯಿ ಹೇಳಿರುವಂತೆ, ದಿವ್ಯಾಳ ಪತಿ ಆಕೆಯನ್ನು ತ್ಯಜಿಸಿದ್ದನಂತೆ. ಆಕೆಗೆ ಯಾವ ಸಹಾಯವನ್ನೂ ಮಾಡಲಿಲ್ಲ. ದಿವ್ಯಾ, ತಾನು ನಟಿಸುತ್ತಿರುವ ಧಾರಾವಾಹಿಯ ನಿರ್ಮಾಪಕರಿಂದ ಹಣಕಾಸು ನೆರವು ಪಡೆದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರಂತೆ.

ದಿವ್ಯಾ ಜೊತೆಗೆ ನಟಿಸುತ್ತಿದ್ದ ಹಲವು ನಟ-ನಟಿಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಚಿತ್ರ ಪ್ರಕಟಿಸಿದ್ದದು, ಅವರೊಂದಿಗೆ ಕಳೆದಿದ್ದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಯೇ ರಿಶ್ತಾ ಕ್ಯಾ ಕೆಹಲಾತಾ ಹೈ, ಉಡಾನ್, ಜೀತ್ ಗಯಿ ತೋ ಪಿಯಾ ಮೋರೆ, ವಿಶ್ ಇನ್ನೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •