ಮೇಕಪ್ ಮಾಡ್ಕೊಂಡು,ಲಿಪ್ ಸ್ಟಿಕ್ ಹಚ್ಕೊಂಡು ಮಲಗಿರುವ ಹೆಣವನ್ನು ನೋಡಿ ಬೆಚ್ಚಿಬಿದ್ದ ಸೀರಿಯಲ್ ಪ್ರೇಕ್ಷಕರು! ಅಯ್ಯಯ್ಯೋ ಯಾವ ಸೀರಿಯಲ್ ಗೊತ್ತೇ?

Cinema/ಸಿನಿಮಾ Home Kannada News/ಸುದ್ದಿಗಳು Serial/ಧಾರಾವಾಹಿ

ಸಂಜೆ ಹೊತ್ತಲ್ಲಿ ಮನೆ ಮಂದಿಗೆ ಮನೋರಂಜನೆ ನೀಡಲು ಈಗ ಜೀ ಕನ್ನಡ, ಕಲರ್ಸ್ ಕನ್ನಡ ಒಂದನ್ನೊಂದು ಮೀರಿಸುವಂತಹ ಧಾರವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಸೀರಿಯಲ್ ಗಳ ಮಧ್ಯೆ ನಂಬರ್ ವನ್ ಸೀರಿಯಲ್ ಪಟ್ಟ ಪಡೆಯಲು ಸ್ಪರ್ಧೆ ಇದೆ. ಇನ್ನು ಈ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಒಂದನ್ನೊಂದು ಮೀರಿಸುವಂತಹ ವೀಕ್ಷಕರನ್ನು ಸೆಳೆಯುವಂತಹ ಧಾರವಾಹಿಗಳು ಪ್ರಸಾರ ಆಗುತ್ತಿದೆ. ಅದರಲ್ಲಿ ನನ್ನರಸಿ ರಾಧೆ ಕೂಡ ಒಂದು. ಈ ಸೀರಿಯಲ್ ನ ಇಂಚರಾ ಹಾಗೂ ಅಗಸ್ತ್ಯ ಜೋಡಿಗೆ ಅನೇಕ ಅಭಿಮಾನ ಬಳಗ ಇದೆ.‌

nannarasi radhe serial: nannarasi radhe kannada serial inchara fame kaustubha mani family biography | Vijaya Karnataka Photogallery

ಅವರಿಬ್ಬರ ಕ್ಯೂಟ್ ಗಲಾಟೆ ನೋಡೋದೆ ಚಂದ. ಮನಸಲ್ಲಿ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡು ಅದನ್ನು ತೋರಿಸಲು ಗೊತ್ತಾಗದೆ ಒದ್ದಾಡುತ್ತಿರುವ ಅಗಸ್ತ್ಯ ನಿಗೆ ತಕ್ಕ ಜೋಡಿ ಇಂಚರಾ.’ನನ್ನರಸಿ ರಾಧೆ’ ಧಾರಾವಾಹಿಯ ನಟಿ ಇಂಚರ ಅವರ ನಿಜವಾದ ಹೆಸರು ಕೌಸ್ತುಭ ಮಣಿ.ವಿಭಿನ್ನ ಕಥಾಹಂದರದ ಈ ಸೀರಿಯಲ್ ನಲ್ಲಿ ಉದ್ಯಮಿ ಅಗಸ್ತ್ಯ ರಾಥೋಡ್ ಪತ್ನಿ ಇಂಚರಾ ರಾಥೋಡ್ ನಟನೆಯನ್ನು ಎಲ್ಲರು ಇಷ್ಟಪಡುತ್ತಿದ್ದಾರೆ. ಮುದ್ದು ಮುದ್ದಾಗಿ ಪೆದ್ದು ಪೆದ್ದಾಗಿ ನಟಿಸಿರುವ ಇಂಚರಾ ಉರೂಫ್ ಕೌಸ್ತುಭಾ ಮಣಿ ಇಂದು ಕಿರುತೆರೆಯಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

nannarasi radhe serial kaustubha: 'ನನ್ನರಸಿ ರಾಧೆ'ಯ ಹೀರೋಯಿನ್ ಕೌಸ್ತುಭ ಮಣಿಗೆ ವಿದೇಶದಿಂದ ಫೋನ್ ಕರೆ ಬರುತ್ತಂತೆ! - Vijaya Karnataka

ಮೂಲತಃ ಬೆಂಗಳೂರಿನ ಬಸವನಗುಡಿ ಹುಡ್ಗಿಯಾಗಿರುವ ಕೌಸುಭಾ, ಬಿಕಾಂ ಪದವೀಧರೆ. ಪದವಿ ಬಳಿಕ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಕಾರ್ಯಕ್ರಮವೊಂದರಲ್ಲಿ ನಟಿ ಮಾನ್ವಿತಾ ಹರೀಶ್ ಪರಿಚಯವಾಗುತ್ತದೆ. ಬಳಿಕ ಅವರಿಂದ ನಟನೆಯ ಅವಕಾಶ ಪಡೆದುಕೊಂಡರು. ನಟನೆಯ ಗಂಧ ಗಾಳಿಯೂ ಗೊತ್ತಿಲ್ಲದ ಕೌಸ್ತುಭ ಇದೀಗ ಎಲ್ಲರ ಮೆಚ್ಚಿನ ನಟಿ. ಇದೀಗ ಈ ನನ್ನರಸಿ ರಾಧೆ ಸೀರಿಯಲ್ ನ ಇಂಚರಾ ಪಾತ್ರಧಾರಿ ಸಾವನ್ನಪ್ಪಿರುವ ಕಥೆ ನಡೆಯುತ್ತಿದೆ.

ಆದರೆ ಇದೇ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ. ಲೈಟ್ ಆಗಿ ಲಿಪ್ ಸ್ಟಿಕ್ ಹಾಗೆಯೇ ಮೇಕಪ್ ಮಾಡಿಕೊಂಡ ಮುದ್ದು ಮುದ್ದಾಗಿರೋ ಇಂಚರಾಳ ಹೆಣ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಕ್ಯೂಟ್ ಆಗಿರುವ ಹೆಣ , ಅದೆಷ್ಟು ಮುದ್ದಾಗಿದೆ ಹೆಣ ಅನ್ನುವ ಬರಹಗಳೊಂದಿಗೆ ಟ್ರೋಲ್ ಪೇಜ್ ಗಳಲ್ಲಿ ಇಂಚರಾ ಅಲಿಯಾಸ್ ಕೌಸ್ತುಭ ಫೋಟೋಗಳು ಹರಿದಾಡುತ್ತಿದೆ.

ಕೆಲ ಮೂಲಗಳ ಪ್ರಕಾರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕ ಕೌಸ್ತುಭ ಮಣಿ ಈ ಧಾರವಾಹಿಯಿಂದ ಹೊರ ಹೋಗ್ತಿದ್ದಾರೆ, ಹಾಗಾಗಿ ಈ ರೀತಿಯಾಗಿ ಇಂಚರಾ ಪಾತ್ರವನ್ನು ಮುಗಿಸುತ್ತಿದ್ದಾರೆ ಎನ್ನಲಾಗಿದೆ.‌ಒಟ್ಟಿನಲ್ಲಿ ಮುದ್ದಾಗಿರೋ ಇಂಚರಾ‌ ಹೆಣ ಇದೀಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...