ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ಇವರು ಅದ್ಭುತ ವಿದ್ಯಾವಂತ ಪಂಡಿತರಾಗಿದ್ದರು. ಇವರು ಅನೇಕ ವಿಚಾರಗಳ ಬಗ್ಗೆ ಅದ್ಭುತವಾದ ನಿರ್ಣಾಯಕ ಉತ್ತರವನ್ನು ನೀಡಿದ್ದಾರೆ. ಚಾಣಕ್ಯರು ಕೆಲವು ವಿಚಾರಗಳಲ್ಲಿ ನಾಚಿಕೆ ಇಲ್ಲದ ವ್ಯಕ್ತಿಗಳನ್ನು ತುಂಬಾ ಬುದ್ಧಿವಂತರು ಎಂದು ಹೊಗಳಿದ್ದಾರೆ. ಆದ್ದರಿಂದ ನಾವಿಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ವಿದ್ಯಾಭ್ಯಾಸ ಮಾಡುವಾಗ ಓದಿನಲ್ಲಿ ವಿದ್ಯಾರ್ಥಿಯ ಗಮನ ಕೇವಲ ಓದಿನಲ್ಲಿ ಮಾತ್ರ ಇರಬೇಕು. ಅಂದರೆ ಆಸೆ ಮತ್ತು ಆಕಾಂಕ್ಷೆಗಳಿಗೆ ಬಲಿಯಾಗಬಾರದು. ಆಸೆ ಮತ್ತು ಆಕಾಂಕ್ಷೆಗಳಿಗೆ ಬಲಿಯಾದರೆ ಓದಿನಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಿಲ್ಲ. ಯಾರು ತನ್ನ ಮನೆಯ ಮಾಯೆಯನ್ನು ತೊರೆಯುತ್ತಾನೋ ಅವನು ಮಾತ್ರ ತನ್ನ ಗುರಿಯನ್ನು ತಲುಪಲು ಸಾಧ್ಯ ಎಂದು ಚಾಣಕ್ಯರು ಹೇಳುತ್ತಾರೆ. ತನ್ನ ಅಂದ ಮತ್ತು ಚಂದದಿಂದ ಸುಖವನ್ನು ನೀಡುವ ಹೆಣ್ಣು ಕೇವಲ ಒಂದು ರಾತ್ರಿ ಮಾತ್ರ ಸುಖ ನೀಡುತ್ತಾಳೆ. ಆದರೆ ಮನಸ್ಸಿನಿಂದ ಸುಂದರವಾಗಿರುವ ಹೆಣ್ಣು ಜೀವನಪೂರ್ತಿ ಸುಖವನ್ನು ನೀಡುತ್ತಾಳೆ. ಆದ್ದರಿಂದ ಮನಸ್ಸಿನಿಂದ ಸುಂದರವಾಗಿರುವ ಹೆಣ್ಣನ್ನು ಇಷ್ಟಪಡಬೇಕು. ಮದುವೆ ಆದರೆ ಇಂತಹ ಹುಡುಗಿಯನ್ನು ಮದುವೆ ಆಗಬೇಕು ಎಂದು ಹೇಳುತ್ತಾರೆ.

ಅಂಕುಡೊಂಕಾಗಿರುವ ಮರವನ್ನು ಬಿಟ್ಟು ನೇರವಾಗಿರುವ ಮರವನ್ನು ಮೊದಲು ಕಡಿಯುತ್ತಾರೆ. ಆದ್ದರಿಂದ ಅವಶ್ಯಕತೆ ಮೀರಿದ ಪ್ರಮಾಣಿಕತೆ ಒಳ್ಳೆಯದಲ್ಲ. ಹಾಗೆಯೇ ಅಧಿಕ ಪ್ರಾಮಾಣಿಕತೆ ಮತ್ತು ಸಾಭಿಮಾನ ಕೂಡ ಒಳ್ಳೆಯದಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಈಗಿನ ಸಮಾಜದಲ್ಲಿ ಹೊಂದಿಕೊಂಡು ಬದುಕಬೇಕು. ಅತಿಯಾದ ರಾಜಕೀಯ ಪರಿಸ್ಥಿತಿ ಇದ್ದಾಗ ಬಹಳ ಪ್ರಾಮಾಣಿಕತೆ ಮತ್ತು ಸ್ವಾಭಿಮಾನದಿಂದ ಇರುವುದು ತಪ್ಪು ಎಂದು ಚಾಣಕ್ಯರು ಹೇಳುತ್ತಾರೆ.  ದುಷ್ಟ ವ್ಯಕ್ತಿಗಳು ಹೇಳುವ ಸಿಹಿ ಮಾತುಗಳನ್ನು ನಂಬಬಾರದು. ಹುಲಿ ಹೇಗೆ ಹಿಂಸೆ ಮಾಡುವುದನ್ನು ಬಿಡುವುದಿಲ್ಲವೋ ಹಾಗೆಯೇ ದುಷ್ಟ ವ್ಯಕ್ತಿಗಳಿಗೆ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂದು ಹೇಳುತ್ತಾರೆ.

ಸ್ತ್ರೀಯನ್ನು ಕೆಟ್ಟ ದೃಷ್ಟಿಯಿಂದ ನೋಡುವ ವ್ಯಕ್ತಿ ಯಾವತ್ತೂ ಪವಿತ್ರ ಆಗಿರುವುದಿಲ್ಲ. ಈಗಿನ ದಿನಗಳಲ್ಲಿ ಹೆಣ್ಣು ಪ್ರತಿಯೊಂದು ಸ್ಥಾನವನ್ನು ಪಡೆಯುತ್ತಿದ್ದಾಳೆ. ಆದ್ದರಿಂದ ಅಲ್ಲಿ ಮೇಲಿನ ಅಧಿಕಾರಿಗಳು ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ತಪ್ಪು ಎಂದು ಹೇಳುತ್ತಾರೆ. ಆದ್ದರಿಂದ ಸ್ತ್ರೀಯನ್ನು ಗೌರವದಿಂದ ಕಾಣಬೇಕು ಹಾಗೂ ಹಲ್ಲಿನಲ್ಲಿ ವಿಷ ಇಲ್ಲಿ ಇಟ್ಟುಕೊಳ್ಳದ ಇದ್ದರೂ ತನ್ನಾತ್ಮ ರಕ್ಷಣೆಗಾಗಿ ಬುಸುಗುಡುತ್ತ ಇರಬೇಕು. ಇದರರ್ಥ ಯಾವುದೇ ಕಷ್ಟ ಬಂದರೂ ಧೈರ್ಯದಿಂದ ಇರಬೇಕು. ಯಾವಾಗಲೂ  ಗುಣವಂತ ರೊಂದಿಗೆ ಸ್ನೇಹವನ್ನು ಮಾಡಬೇಕು. ಏಕೆಂದರೆ ಹಾಲಿನಲ್ಲಿ ನೀರನ್ನು ಬೆರೆಸಿದರೆ ಅದು ಹಾಲೇ ಆಗುತ್ತದೆ. ಆದ್ದರಿಂದ ಗುಣವಂತರ ಜೊತೆ ಸ್ನೇಹವನ್ನು ಮಾಡಿದರೆ ಸ್ನೇಹವನ್ನು ಮಾಡಿದವರು ಸಹ ಗುಣವಂತರಾಗಬಹುದು ಎಂದು ಚಾಣಕ್ಯರು ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •