ದೇವರು ಪ್ರತಿಯೊಬ್ಬ ಮನುಷ್ಯನ ರಚನೆಯನ್ನು ತನ್ನದಾಗಿಸಿಕೊಂಡಿದ್ದಾನೆ. ಈ ಜಗತ್ತಿನಲ್ಲಿ ಅನೇಕ ರೀತಿಯ ಜೀವಿಗಳಿವೆ ಮತ್ತು ಅವುಗಳೆಲ್ಲದರ ಗುಣಲಕ್ಷಣಗಳ ಮೂಲಕ ಅವುಗಳನ್ನ ಗುರುತಿಸಬಹುವು. ಸಾಮಾನ್ಯವಾಗಿ ಪುರುಷರಿಗೆ ಗಡ್ಡ ಬರುತ್ತವೆ ಆದರೆ ಮಹಿಳೆಯರಿಗೆ ಏಕೆ ಗಡ್ಡ ಬರಲ್ಲ ಎಂಬ ಕಲ್ಪನೆ ಅನೇಕ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯಾಗಿದೆ.
ಹೌದು ನಿಮ್ಮ ಮನಸ್ಸಿನಲ್ಲಿಯೂ ಇಂತಹದ್ದೊಂದು ಪ್ರಶ್ನೆ ಇದ್ದರೆ ಅದಕ್ಕೆ ನಾವಿಂದು ಉತ್ತರ ನೀಡಲಿದ್ದೆವೆ, ಮಹಿಳೆಯರಿಗೆ ಪುರುಷರಂತೆ ಏಕೆ ಗಡ್ಡವನ್ನು ಬೆಳೆಯುವುದಿಲ್ಲ ಎಂದು ಇಂದು ನಾವು ನಿಮಗೆ ಇದೀಗ ತಿಳಿಸುತ್ತೇವೆ. ಜನನದ ಸಮಯದಲ್ಲಿ, ಶಿಶುಗಳು ತಮ್ಮ ತಲೆಯ ಮೇಲೆ ಕೂದಲನ್ನು ಮಾತ್ರ ಹೊಂದಿರುತ್ತಾರೆ.
ಹನ್ನೊಂದರಿಂದ ಹದಿಮೂರನೆಯ ವಯಸ್ಸಿನಲ್ಲಿ, ಹುಡುಗರು ಮತ್ತು ಹುಡುಗಿಯರ ದೇಹದ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ. ಲೈಂಗಿಕ ಗ್ರಂಥಿಗಳು ವೇಗವಾಗಿ ಬೆಳೆಯುವ ವಯಸ್ಸು ಇದು. ಮಹಿಳೆಯರು ಮತ್ತು ಪುರುಷರ ದೇಹದಲ್ಲಿನ ಗ್ರಂಥಿಗಳು ಆಂಡ್ರೋಜೆನ್ ಎಂಬ ವಿಶೇಷ ಹಾರ್ಮೋನುಗಳನ್ನು ತಯಾರಿಸುತ್ತವೆ.
ಪುರುಷರಲ್ಲಿ, ಆಂಡ್ರೋಜೆನ್ಗಳ ಉಪಸ್ಥಿತಿಯಿಂದ ಗಡ್ಡ ಮತ್ತು ಮೀಸೆ ಬೆಳೆಯುತ್ತದೆ. ಮಹಿಳೆಯರಿಗೆ ಈಸ್ಟ್ರೊಜೆನ್ ಎಂಬ ಇನ್ನೊಂದು ರೀತಿಯ ಹಾರ್ಮೋನ್ ಉತ್ಪಾದಿಸುವ ಇತರ ಲೈಂಗಿಕ ಗ್ರಂಥಿಗಳಿವೆ. ಪುರುಷರಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ಧ್ವನಿಯ ಭಾರ ಮತ್ತು ಕೂದಲಿನ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಅದೇ ಥರ ಮಹಿಳೆಯರಲ್ಲಿ ಉತ್ಪಾದನೆಯಾಗುವ ಹಾರ್ಮೊನ್ನಿಂದ ಅವರಿಗೆ ಗಡ್ಡ ಮತ್ತು ಮೀಸೆ ಬರುವುದಿಲ್ಲ.