ಮಕ್ಕಳೆ ಶಾಲೆಗೆ ನಾಳೆ ಬೇಗ ಬನ್ನಿ ನಿಮಗೆ ಸ್ವರ್ಗ ತೋರಿಸುತ್ತೇನೆ ಎಂದು ಹೇಳಿದ ಟೀಚರ್ ಏನು ಮಾಡಿದರು ಗೊತ್ತಾ?
ಒಂದು ಶಾಲೆಯಲ್ಲಿ ಟೀಚರ್ ಒಬ್ಬರು ಮಕ್ಕಳಿಗೆ ಪಾಠ ಕಲಿಸುವಾಗ ಸ್ವರ್ಗ ನರಕದ ಬಗ್ಗೆ ಹೇಳುತ್ತಿದ್ದರು.ಆಗ ಒಬ್ಬ ಹುಡುಗ ಎದ್ದು ಹೀಗೆ ಕೇಳಿದ.
ಟೀಚರ್ ಸ್ವರ್ಗ ಅಂದರೆ ಏನು ನರಕ ಎಂದರೆ ಏನು ಹೇಳಿ ಅಲ್ಲಿ ಹೇಗೆ ಇರುತ್ತದೆ ಎಂದು ಕೇಳಿದ .
ಇದಕ್ಕೆ ಉತ್ತರಿಸಿದ ಟೀಚರ್ ಮಕ್ಕಳೆ ಈಗ ಮನೆಗೆ ಹೋಗಲು ಸಮಯವಾಗಿದೆ.ನಾಳೆ ಬೆಳಿಗ್ಗೆ ಬೇಗ ಬನ್ನಿ ನಿಮಗೆ ಸ್ವರ್ಗ ನರಕದ ಬಗ್ಗೆv ಹೇಳುತ್ತೇನೆ ಎಂದರು
ಮರುದಿನ ಮಕ್ಕಳು ಆಸಕ್ತಿಯಿಂದ ಬೇಗ ಶಾಲೆಗೆ ಬಂದರು.ಆಗ ಟೀಚರ್ ಮಕ್ಕಳೇ ನರಕದಲ್ಲಿ ಇರುವವರ ಮುಂದೆ ಮೃಷ್ಟಾನ್ನ ಭೋಜನವಿದೆ.ಹಸಿವಿನಿಂದ ತಿನ್ನಲು ಹೊರಟಾಗ ತಿನ್ನಲು ಆಗುವುದಿಲ್ಲ.ಏಕೆಂದರೆ ಅವರ ಕೈಯಲ್ಲಿ ಮುಳ್ಳುಗಳ ಸರಪಳಿ ಇತ್ತು.ಹಾಗಾಗಿ ಅವರ ಬಾಯಿಗೆ ಚುಚ್ಚುತ್ತಿತ್ತು.ಅವರು ಹಸಿವಿನಿಂದ ಇರುತ್ತಿದ್ದರು.
ಸ್ವರ್ಗದಲ್ಲೂ ಕೂಡ ಎಲ್ಲಾ ಬಗೆಯ ಭೋಜನಗಳು ಇವೆ.ಅವರ ಕೈಯಲ್ಲೂ ಸರಪಳಿ ಇದೆ.ಆದರೇ ಅಲ್ಲಿ ಅವರ ಹೊಟ್ಟೆ ತುಂಬಾ ಊಟಮಾಡುತ್ತಿದ್ದರು.ಏಕೆಂದರೆ ಅವರು ತಾವೆ ತಿನ್ನದೇ ಪ್ರತಿಯೊಬ್ಬರಿಗೂ ಹಂಚಿ ತಿನ್ನುತ್ತಿದ್ದರು.
ಪರೋಪಕಾರಿಯಾದ ವ್ಯಕ್ತಿಗೆ ಅಲ್ಲಿ ಊಟವನ್ನು ಸುಲಭವಾಗಿ ಮಾಡಬಹುದಾಗಿದೆ.ತನ್ನ ಸ್ವಾರ್ಥಕ್ಕಾಗಿ ತಿನ್ನುವಾತ ಹಸಿವಿನಿಂದ ಇರಬೇಕಾಗುತ್ತದೆ.ಹೀಗೆ ಟೀಚರ್ ಮಕ್ಕಳಿಗೆ ಹೇಳಿದರು.
ಶೇರ್ ಮಾಡಲು ಮರೆಯದಿರಿ…