ಅಪ್ಪು

ಅಪ್ಪು ಸಾವನ್ನಪ್ಪುವ ಕೊನೆಯ ಕ್ಷಣ ಅಮ್ಮ ಅಮ್ಮ ಎನ್ನುವ ದೃಶ್ಯ ಸಿಕ್ಕಿವೆ,ಕಣ್ಣೀರಿಟ್ಟ ಅಭಿಮಾನಿಗಳು…

Cinema/ಸಿನಿಮಾ Health/ಆರೋಗ್ಯ Home Kannada News/ಸುದ್ದಿಗಳು

ಅಕ್ಟೋಬರ್ 29 ರಂದು ಬೆಳಗ್ಗೆ 11 ಗಂಟೆ 1 ನಿಮಿಷಕ್ಕೆ ಪುನೀತ್ ರಾಜ್‌ಕುಮಾರ್ ಅವರು ತಮ್ಮ ನಿವಾಸದಿಂದ ಡಾ.ರಮಣ ರಾವ್ ಅವರ ಕ್ಲಿನಿಕ್‌ಗೆ ಹೊರಟಿದ್ದರು. ಮನೆಯಿಂದ ಹೊರಬಂದ ಪುನೀತ್ ರಾಜ್‌ಕುಮಾರ್ ಕಾರಿನಲ್ಲಿ ಹೊರಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಅದೇ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ ಮತ್ತು ಸೂಪರ್ ಫಿಟ್ ನಟರಾಗಿದ್ದವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಪ್ರತಿನಿತ್ಯ ವರ್ಕೌಟ್ ಮಾಡುತ್ತಾ ಆರೋಗ್ಯವಾಗಿದ್ದ ‘ಯುವರತ್ನ’ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29 ರಂದು ಹಠಾತ್ ವಿಧಿವಶರಾದರು. ತೀವ್ರ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದರು.

ಎಲ್ಲೇ ಹೋದರೂ ಉತ್ಸಾಹ ಹಾಗೂ ಹುರುಪಿನಿಂದ ಕಾಣಿಸಿಕೊಳ್ಳುತ್ತಿದ್ದ ಎಲ್ಲರ ಪ್ರೀತಿಯ ಪುನೀತ್ ರಾಜ್‌ಕುಮಾರ್ ಅಕಾಲಿಕವಾಗಿ ಮರಣ ಹೊಂದಿದ್ದು ಹಲವರಿಗೆ ಆಘಾತ ಉಂಟು ಮಾಡಿದೆ. ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಅಷ್ಟಕ್ಕೂ, ಅಕ್ಟೋಬರ್ 29 ರಂದು ಬೆಳಗ್ಗೆ ಏನಾಯ್ತು? ಸಾವನ್ನಪ್ಪುವ ಕೆಲವೇ ಕೆಲವು ನಿಮಿಷಗಳ ಮುಂಚೆ ನಡೆದಿದ್ದೇನು

ಅಪ್ಪು ಅಭಿಮಾನ: ಸಾವನ್ನಪ್ಪಿದ ಮಗನಿಗೂ ಟಿಕೆಟ್; ಫೊಟೋ ಇಟ್ಟುಕೊಂಡು ಯುವರತ್ನ ಸಿನಿಮಾ ನೋಡಿದ ಪೋಷಕರು | Puneeth rajkumar appu fans parents with demised son photograph watch yuvarathnaa film at ...

ಸಿಸಿಟಿವಿ ದೃಶ್ಯಾವಳಿ ವೈರಲ್
ಅಕ್ಟೋಬರ್ 29 ರಂದು ಬೆಳಗ್ಗೆ 11 ಗಂಟೆ 1 ನಿಮಿಷಕ್ಕೆ ಪುನೀತ್ ರಾಜ್‌ಕುಮಾರ್ ಅವರು ತಮ್ಮ ನಿವಾಸದಿಂದ ಡಾ.ರಮಣ ರಾವ್ ಅವರ ಕ್ಲಿನಿಕ್‌ಗೆ ಹೊರಟಿದ್ದರು. ಮನೆಯಿಂದ ಹೊರಬಂದ ಪುನೀತ್ ರಾಜ್‌ಕುಮಾರ್ ಕಾರಿನಲ್ಲಿ ಹೊರಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಅದೇ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದು ಅಕ್ಟೋಬರ್ 29 ರಂದು ಬೆಳಗ್ಗೆ 11 ಗಂಟೆ 1 ನಿಮಿಷ – ಅಶ್ವಿನಿ ಪುನೀತ್ ರಾಜ್‌ಕುಮಾರ್ ಮನೆಯ ಬಾಗಿಲ ಬಳಿ ನಿಂತಿರುತ್ತಾರೆ. ನೀಲಿ ಟಿ-ಶರ್ಟ್ ತೊಟ್ಟಿದ್ದ ಪುನೀತ್ ರಾಜ್‌ಕುಮಾರ್ ಮನೆಯಿಂದ ಹೊರಬಂದು ಕಾರಿನ ಬಳಿ ನಿಲ್ಲುತ್ತಾರೆ. ಬಳಿಕ ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ಕಾರನ್ನ ಹತ್ತಿ ಹೊರಡುತ್ತಾರೆ.

ಅಪ್ಪು Appu | ನಗುತಲಿರು ನೀ ಪರಮಾತ್ಮ | We Miss Appu | Puneeth Raj Kumar #drusticreations - YouTube

ಫ್ಯಾಮಿಲಿ ವೈದ್ಯರಾದ ಡಾ.ರಮಣ ರಾವ್ ಬಳಿ ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ಈ ಸಮಯದಲ್ಲಿ ಹೊರಟಿರುತ್ತಾರೆ. ಯಾರ ಸಹಾಯವೂ ಇಲ್ಲದೆ ನಡೆದುಕೊಂಡು ಹೋಗಿ ಪುನೀತ್ ರಾಜ್‌ಕುಮಾರ್ ಕಾರು ಹತ್ತುವುದು, ಸೆಕ್ಯೂರಿಟಿ ಸಿಬ್ಬಂದಿ ಗೇಟ್ ತೆರೆಯುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

‘’ಶುಕ್ರವಾರ ಬೆಳಗ್ಗೆ 11:15 ರಿಂದ 11:20 ರ ಸುಮಾರಿಗೆ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ನಮ್ಮ ಕ್ಲಿನಿಕ್‌ಗೆ ಬಂದರು. ಆಗ ಅಪ್ಪು ಹೇಳಿದ್ದು, ‘’ನಾನು ಈಗ ತಾನೆ ಜಿಮ್‌ ಇಂದ ಬರ್ತಾಯಿದ್ದೇನೆ. ಇವತ್ತು ನಾನು ನನ್ನ ಪ್ರತಿನಿತ್ಯದ ಸೆಷನ್ ಮಾಡಿದ್ದೇನೆ. ಇವತ್ತು ಎಕ್ಸ್‌ಟ್ರಾ ಬಾಕ್ಸಿಂಗ್ ಕೂಡ ಮಾಡಿದ್ದೇನೆ. ಆಮೇಲೆ ಸ್ಟೀಮ್ ಸ್ವಲ್ಪ ಎಕ್ಸ್‌ಟ್ರಾ ತಗೊಂಡಿದ್ದೇನೆ. ನನಗೆ ಸ್ವಲ್ಪ ಸುಸ್ತಾಗುತ್ತಿದೆ’’ ಎಂದರು. ‘’ನೋವು ಏನಾದರೂ ಇದ್ಯಾ?’’ ಅಂತ ನಾನು ಕೇಳಿದೆ. ‘’ನೋವೇನೂ ಇಲ್ಲ ಅಂತ ಹೇಳಿದರು’’. ನಾನು ಅವರನ್ನ ಮಲಗಿಸಿ ಪರೀಕ್ಷೆ ಮಾಡಿದೆ. ಬಿಪಿ ನಾರ್ಮಲ್ ಇತ್ತು. ಹಾರ್ಟ್ ಸೌಂಡ್ಸ್ ನಾರ್ಮಲ್ ಇತ್ತು. ಆದರೆ, ಅವರು ಬೆವರುತ್ತಿದ್ದರು. ಆಗ ನಾನು ‘’ಬೆವರುತ್ತಿದ್ದೀರಲ್ಲಾ’’ ಎಂದು ಕೇಳಿದೆ. ಅದಕ್ಕೆ ಅವರು ‘’ಇಲ್ಲ, ಇದು ನನಗೆ ನಾರ್ಮಲ್. ಈಗಷ್ಟೇ ಜಿಮ್‌ ಇಂದ ಬಂದೆ’’ ಎಂದರು. ಆಗ, ‘’ಆದರೂ, ಒಂದು ಇಸಿಜಿ ಮಾಡೋಣ. ಇದನ್ನ ಹಾಗೇ ಬಿಡುವುದು ಬೇಡ’’ ಅಂತ ಒಂದು ನಿಮಿಷದೊಳಗೆ ಇಸಿಜಿ ಮಾಡಿದ್ವಿ. ಅದರಲ್ಲಿ ಹಾರ್ಟ್ ಸ್ಟ್ರೇನ್ ಆಗಿದ್ದು ಕಂಡು ಬಂತು’’

ಶ್ರದ್ಧಾಂಜಲಿ ಅಪ್ಪು ಸರ್ Shradhanjali Appu Sir - YouTube

‘’ಇಸಿಜಿನಲ್ಲಿ ಹಾರ್ಟ್ ಬೀಟ್ ರೆಗ್ಯುಲರ್ ಇತ್ತು. ಆದರೆ, ಇಸಿಜಿ ಪ್ಯಾಟರ್ನ್‌ನಲ್ಲಿ ತುಂಬಾ ಸ್ಟ್ರೇನ್ ಇತ್ತು. ಆಗ ನಾನು ಅಪ್ಪುಗೆ ಹೇಳೋದು ಬೇಡ ಅಂತ ಅಶ್ವಿನಿಗೆ ಹೇಳಿದೆ. ತುಂಬಾ ಸ್ಟ್ರೇನ್ ಕಂಡು ಬರ್ತಾಯಿದೆ, ನಾವು ಆಸ್ಪತ್ರೆಗೆ ಹೋಗಬೇಕು ಅಂತ ಅಶ್ವಿನಿಗೆ ತಿಳಿಸಿದೆ. ಆಗ ಫೋನ್ ಮಾಡೋದಕ್ಕೆ ಅಂತ ಅಶ್ವಿನಿ ಹೊರಗೆ ಹೋದರು. ‘’ನನಗೆ ತಲೆಸುತ್ತು ಬರುತ್ತಿದೆ’’ ಅಂತ ಅಪ್ಪು ಹೇಳಿದರು. ಹೀಗಾಗಿ ‘’ನಡೆಯಬೇಡಿ.. ನಾವು ಹಾಗೆ ಕರೆದುಕೊಂಡು ಹೋಗ್ತೀವಿ’’ ಅಂತ ಹೇಳಿದ್ವಿ. ಆಗ ಅವರು ಉಸಿರಾಡುತ್ತಿದ್ದರು, ಮಾತನಾಡುತ್ತಿದ್ದರು.. ಕೂತುಕೊಳ್ಳುವುದು ಬೇಡ, ಅವರು ಮಲ್ಕೊಳ್ಳಿ ಅಂತ ಕಾರಿನಲ್ಲಿ ಮಲಗಲು ಹೇಳಿದೆ. ಇಲ್ಲಿಂದ ಐದು ನಿಮಿಷದೊಳಗೆ ಟ್ರಾಫಿಕ್ ಇದ್ದರೂ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋದರು’’

ವೆಂಕಟೇಶ್​, ನಾನು ನಿಜವಾಗ್ಲೂ ಹೀರೋ ಆಗ್ತೀನಾ?' ಎಂದಿದ್ದ ಅಪ್ಪು! ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷ್ಯ ಇಲ್ಲಿದೆ –

‘’ಇದನ್ನ ನಾವು ಸಡನ್ ಡೆತ್ ಅಂತ ಕರೆಯುತ್ತೇವೆ. ಈ ಸಡನ್ ಡೆತ್ ಯಾಕೆ ಬರುತ್ತೆ? ಯಾಕೆ ಆಗುತ್ತೆ ಎಂಬ ಕ್ಲಾರಿಟಿ ನಮಗಿಲ್ಲ. ಸಡನ್ ಡೆತ್‌ನಿಂದಾಗಿ ಹಾರ್ಟ್‌ನಿಂದ ಬ್ರೇನ್‌ಗೆ ಬ್ಲಡ್ ಸಪ್ಲೈ ಆಗಲ್ಲ. ಐಸಿಯುನಲ್ಲಿದ್ದರೂ ಈ ತರಹ ಆದರೆ ರಿವೈವ್ ಮಾಡುವುದು ತುಂಬಾ ಕಷ್ಟ. ಅಪ್ಪುಗೆ ಆಗಿದ್ದು ಇದೇ. ಹಾರ್ಟ್ ಅಟ್ಯಾಕ್ ಆದರೆ ತುಂಬಾ ನೋವು ಬರುತ್ತದೆ. ಡಯಾಬಿಟಿಕ್ ಆಗಿದ್ದರೆ ನೋವಿರುವುದಿಲ್ಲ. ಅಪ್ಪು ಡಯಾಬಿಟಿಕ್ ಅಲ್ಲ. ಅವರು ಯಾವುದೇ ಮೆಡಿಸಿನ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಉತ್ತಮ ಅಭ್ಯಾಸಗಳನ್ನ ಹೊಂದಿದ್ದರೂ, ಯಂಗ್ ಆಗಿದ್ದರೂ ಅವರು ಉಳಿಯಲಿಲ್ಲ. ಹಾರ್ಟ್‌ ಸ್ಟ್ರೇನ್ ಆಗಿದ್ದರೂ ಯಂಗ್ ಆಗಿದ್ದರೆ ಏನೂ ಆಗಲ್ಲ ಅಂತ ಧೈರ್ಯವಾಗಿ ನಾನು ಆಸ್ಪತ್ರೆಗೆ ಕಳುಹಿಸಿಕೊಟ್ಟೆ. ಆದರೆ, ಸಡನ್ ಡೆತ್ ಅಥವಾ ಕಾರ್ಡಿಯಾಕ್ ಅರೆಸ್ಟ್‌ನಿಂದ ಅವರು ತೀರಿಕೊಂಡರು’’ ಎಂದು ಡಾ.ರಮಣ ರಾವ್ ಹೇಳಿದ್ದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...