ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು ನೀನಾಸಂ ಸತೀಶ್. ಮಂಡ್ಯ ಜಿಲ್ಲೆಯಲ್ಲಿ ರೈತ ಕುಟುಂಬದಲ್ಲಿ ಜನಿಸಿ ಯಾವುದೇ ರೀತಿಯ ಬ್ಯಾಗ್ರೌಂಡ್ ಇಲ್ಲದೆ, ಸತತ ಪರಿಶ್ರಮದಿಂದ ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿದ ನಟ ನೀನಾಸಂ ಸತೀಶ್. ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲು ಶುರು ಮಾಡಿ ನಂತರ ಹೀರೋ ಆಗಿ ತಮ್ಮ ನಟನೆಯ ಸಾಮರ್ಥ್ಯವನ್ನು ನಿರೂಪಿಸಿದರು. ಕನ್ನಡ ಚಿತ್ರರಂಗದ ಭರವಸೆಯ ನಟನಾಗಿರುವ ನೀನಾಸಂ ಸತೀಶ್ ಅವರು ಈಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯಾವ ಸಿನಿಮಾ ಮೂಲಕ ಎಂದು ತಿಳಿಯಲು ಮುಂದೆ ಓದಿ..

Satish-Neenasam

2006 ರಲ್ಲಿ ಬೆಂಗಳೂರಿನಲ್ಲಿ ನಾಟಕಗಳಲ್ಲಿ ನಟಿಸಲು ಶುರು ಮಾಡಿದ ನಂತರ ನಿ-ಧಾನವಾಗಿ ಸತೀಶ್ ಅವರಿಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಕೆಲವು ಧಾರಾವಾಹಿಗಳಲ್ಲಿ ಸಿಲ್ಲಿ ಲಲ್ಲಿ ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದರು ನೀನಾಸಂ ಸತೀಶ್. ನಂತರ 2008 ರಲ್ಲಿ ತೆರೆಕಂಡ ಮಾದೇಶ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ನಂತರ ಮನಸಾರೆ, ಲೈಫು ಇಷ್ಟೇನೆ, ಪುಟ್ಟಕ್ಕನ ಹೈವೇ, ಡ್ರಾಮಾ ಹಾಗು ಇನ್ನಿತರ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು ಸತೀಶ್. 2013 ರಲ್ಲಿ ಪವನ್ ಕುಮಾರ್ ನಿರ್ದೇಶಸಿದ ಲೂಸಿಯಾ ಸಿನಿಮಾ ಮೂಲಕ ನಾಯಕನಾದರು. ಲೂಸಿಯಾ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.

Satish-Neenasam

ಈ ಸಿನಿಮಾ ನಂತರ ಸತೀಶ್ ಅವರು ಹಿಂತಿರುಗಿ ನೋಡಿದ್ದಿಲ್ಲ ನಂತರ ನಟಿಸಿದ ಲವ್ ಇನ್ ಮಂಡ್ಯ, ರಾ-ಕೆಟ್, ಅಯೋ-ಗ್ಯ, ಸೇರಿದಂತೆ ಹಲವಾರು ಯೆಶಸ್ವಿ ಸಿನಿಮಾಗಳಲ್ಲಿ ನಟಿಸಿದರು. ತಮ್ಮದೇ ಆದ ಸ್ವಂತ ಪ್ರೊಡಕ್ಷನ್ ಕಂಪನಿಯನ್ನು ಕೂಡ ಶುರು ಮಾಡಿದರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನೀನಾಸಂ ಸತೀಶ್ ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಮಿಳು ನಿರ್ದೇಶಕ ಅನಿಸ್ ಅಬ್ಬಾಸ್ ನಿರ್ದೇಶನ ಮಾಡುತ್ತಿರುವ ಪಗೈವಾನಕ್ಕು ಅರುಲ್ವಾಯ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ಶಶಿಕುಮಾರ್ ಮತ್ತು ನೀನಾಸಂ ಸತೀಶ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

Satish-Neenasam

ಇವರ ಜೊತೆಗೆ ಬಿಂದು ಮಾಧವಿ, ವಾಣಿ ಭೋಜನ್, ಹಿರಿಯ ನಟ ನಾಸರ್ ಹಾಗು ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ. ಇದೊಂದು ಥ್ರಿ-ಲರ್ ಸಿನಿಮಾ ಆಗಿದ್ದು, ಬಹುತೇಕ ಸಿನಿಮಾ ಜೈ-ಲಿನಲ್ಲಿ ಚಿತ್ರೀಕರಣವಾಗಲಿದೆಯಂತೆ. ಸತೀಶ್ ನೀನಾಸಂ ಖೈದಿಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಈಗಾಗಲೇ ಸತೀಶ್ ನೀನಾಸಂ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಚಿತ್ರೀಕರಣ ಸಂದರ್ಭದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪಗೈವಾನಕ್ಕು ಅರುಲ್ವಾಯ್ ಸಿನಿಮಾ ಚಿತ್ರತಂಡ ಸತೀಶ್ ನೀನಾಸಂ ಅವರನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡಿದೆ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿರುವ ಸತೀಶ್ ನೀನಾಸಂ ಅವರು ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿರುವುದು ಸಂತೋಷದ ವಿಚಾರ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •