ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ತೆರೆಕಂಡ ಧ್ರುವ ಸರ್ಜಾ ಅವರು ನಟಿಸಿರುವ ಪೊಗರು ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲದೆ ಬೇರೆ ರಾಜ್ಯಗಳಲ್ಲಿಯೂ ಕೂಡ ಭಾರಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಪೊಗರು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಕೇವಲ ಒಂದು ವಾರದಲ್ಲಿ 50 ಕೋಟಿ ಕಲೆಕ್ಷನ್ ಮಾಡಿಕೊಂಡವರು ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಓಪನಿಂಗ್ ಮಾಡಿದ ಮೊದಲ ಸಿನಿಮಾ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೆಲ್ಲ ನೋಡಿದ ಧ್ರುವ ಸರ್ಜಾ ಅವರು ಸಾಕಷ್ಟು ಖುಷಿಯಾಗಿದ್ದಾರೆ. ಇನ್ನು ಈ ಸಿನಿಮಾ ಹಲವಾರು ವಿವಾದಗಳಿಗೆ ಕಾರಣವಾಗಿದ್ದು, ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ. ಇನ್ನು ಒಂದು ವಾರದಿಂದ ಸಿನಿಮಾದ ಪ್ರಮೋಷನ್ ಗಾಗಿ ಸಕ್ರಿಯರಾಗಿದ್ದ ಧ್ರುವ ಸರ್ಜಾ ಅವರು ಇದೀಗ ರಿಲಾಕ್ಸ್ ಮೂಡಿಗೆ ಹೋಗಿದ್ದಾರೆ.

sarja

ಹೌದು ಒಂದು ವಾರದಿಂದ ಪೊಗರು ಸಿನಿಮಾ ಪ್ರಮೋಷನ್ ಗಾಗಿ ನಿರಂತರವಾಗಿ ಬ್ಯುಸಿಯಾಗಿದ್ದ ಧ್ರುವ ಸರ್ಜಾ ಅವರು ತಮ್ಮ ಪತ್ನಿ ಪ್ರೇರಣಾ ಅವರೊಂದಿಗೆ ರಿಲ್ಯಾಕ್ಸ್ ಆಗಲು ಗೋವಾಗೆ ತೆರಳಿದ್ದಾರೆ. ಇನ್ನು ಪ್ರೇರಣಾ ಹಾಗೂ ಧ್ರುವ ಅವರು ಕಡಲತೀರದಲ್ಲಿ ರಿಲೆಕ್ಸ್ ಮಾಡುತ್ತಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

sarja

ಇನ್ನು ಈ ಫೋಟೋಗಳನ್ನು ಸ್ವತಃ ಪ್ರೇರಣಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳನ್ನು ಅವರ ಅಭಿಮಾನಿಗಳು ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ಅಭಿಮಾನಿಗಳು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.

ಹೌದು ಧ್ರುವಸರ್ಜಾ ಕಳೆದ ಎರಡು ವರ್ಷಗಳಿಂದ ಅವರು ಸಿನಿಮಾಗಾಗಿ ಹಲವಾರು ವಿಶೇಷ ರೀತಿಯಲ್ಲಿ ತಮ್ಮನ್ನು ತಾವು ತಯಾರು ಮಾಡಿಕೊಂಡಿದ್ದು, ಮದುವೆಯ ನಂತರ ಪತ್ನಿಯೊಂದಿಗೆ ಹೆಚ್ಚಾಗಿ ಸಮಯ ಕಳೆಯಲು ಆಗಿರಲಿಲ್ಲ. ಇದೀಗ ಪೊಗರು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖುಷಿಯಲ್ಲಿ ಪತ್ನಿಯೊಂದಿಗೆ ಗೋವಾಗೆ ತೆರಳಿದ್ದಾರೆ. ಗೋವಾ ಕಡಲತೀರದಲ್ಲಿ

ಪತಿಯೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೋದಲ್ಲಿ ಈ ಜೋಡಿ ಸಾಕಷ್ಟು ಮುದ್ದುಮುದ್ದಾಗಿ ಕಾಣುತ್ತಿದ್ದು, ಅವರ ಅಭಿಮಾನಿಗಳು ಈ ಫೋಟೋಗಳನ್ನು ಹಂಚಿಕೊಂಡು ಸಂಭ್ರಮವನ್ನು ಪಟ್ಟಿದ್ದಾರೆ. ಇನ್ನು ಈ ಫೋಟೋಗಳನ್ನು ನೀವು ಇಲ್ಲಿ ವೀಕ್ಷಿಸಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾದರೆ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •