ಕಾಮಿಡಿ ಕಿಲಾಡಿ,ಲವ್ವಲ್ಲಿ ಬಿದ್ದ ಸಂಜು ಬಸಯ್ಯ,ಈ ಕುಳ್ಳನ ಮನಗೆದ್ದ ಆ ಬೆಡಗಿ ಯಾರೂ ಗೊತ್ತೇ? ಸೂಪರ್ ಜೋಡಿ ನೋಡಿ ಒಮ್ಮೆ.!

Home

ಸ್ನೇಹಿತರೆ, ನಮ್ಮ ಪೂರ್ವಜರು ಹೇಳಿರುವ ಗಾದೆ ನಮ್ಮ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸವಯ್ಯ ಅವರಿಗೆ ತಕ್ಕಂತಿದೆ. ಹೌದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯು ಸಂಜು ಬಸವಯ್ಯ ನವರಿಗೆ ಅಚ್ಚುಕಟ್ಟಾಗಿ ಹೋಲುತ್ತದೆ ಎಂದರೆ ತಪ್ಪಾಗಲಾರದು. ಅವರು ನೋಡುವುದಕ್ಕೆ ತುಂಬಾ ಚಿಕ್ಕದಾಗಿದ್ದರೂ ಅವರು ಒಳಗಿರುವ ಪ್ರತಿಭೆ ಅಷ್ಟಿಷ್ಟಲ್ಲ. ಇಂತಹ ಅದ್ಭುತ ಕಲಾವಿದ ಇನ್ನು ಕೆಲವೇ ಕೆಲವು ದಿನಗಳಲ್ಲಿ ಹಸೆಮಣೆ ಏರಲಿದ್ದು, ಆತ ಮದುವೆಯಾಗುತ್ತಿರುವ ಹುಡುಗಿ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತಾ..??

ಹೌದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎಂಬ ಅದ್ಭುತ ಹಾಸ್ಯ ಕಾರ್ಯಕ್ರಮದ ಮೂಲಕ ಅದೆಷ್ಟೋ ಪ್ರತಿಭೆಗಳು ಹೊರಹೊಮ್ಮಿದ್ದಾರೆ. ಅದರಲ್ಲಿ ಕುಬ್ಜ ದೇಹ ಹಾಗೂ ವಿಭಿನ್ನ ಬಗೆಯ ನಗಿಸುವ ಕೌಶಲ್ಯದಿಂದ ಕರ್ನಾಟಕದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡ ಸಂಜು ಬಸವಯ್ಯನವರು ಕೂಡ ಒಬ್ಬರು. ಜಗ್ಗೇಶ್, ರಕ್ಷಿತಾ ಹಾಗೂ ಯೋಗರಾಜ್ ಭಟ್ ಅವರ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಕಾಮಿಡಿ ಕಿಲಾಡಿಗಳು ಶೋಗೆ ಸಂಜು ಬಸಯ್ಯ ಆಯ್ಕೆಯಾಗುವ ಮೊದಲು ನಾಟಕ ಮಂಡಳಿಯ ನಾಟಕಗಳಲ್ಲಿ ಹಲವಾರು ಪಾತ್ರಗಳಿಗೆ ಬಣ್ಣ ಹಚ್ಚಿದ ಸಂಜು ಬಸಯ್ಯ ತಮ್ಮ ನಾಟಕದ ಪೋಷಕಿನಿಂದಲೇ ಉತ್ತರ ಕರ್ನಾಟಕದಾದ್ಯಂತ ದೊಡ್ಡ ಹೆಸರುಗಳಿಸಿದ್ದಾರೆ.

ಅಧಿಕೃತವಾಗಿ ಮದುವೆ ಸುದ್ದಿ ಹಂಚಿಕೊಂಡ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ..ನೋಡಿ ಹುಡುಗಿ -  Sarkari Suddi

ತದನಂತರ ಕಾಮಿಡಿ ಕಿಲಾಡಿಗಳು ಶೋಗೆ ಲಗ್ಗೆ ಇಟ್ಟು ತಮ್ಮ ಹಾಸ್ಯ ಚಟಾಕಿಯನ್ನು ಸಿಡಿಸುವ ಮೂಲಕ ಮತ್ತಷ್ಟು ಮನೆಮಾತಾದರು. ನಂತರ ಇವರಿಗೆ ಅದೃಷ್ಟವೆಂಬಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಪರ್ ಹಿಟ್ ಸಿನಿಮಾದ ಯಜಮಾನದಲ್ಲಿ ಒಂದು ಪುಟ್ಟ ಪಾತ್ರ ಸಿಗುತ್ತದೆ. ಕೊಟ್ಟಂತಹ ಪಾತ್ರವನ್ನು ನಾಜೂಕಿನಿಂದ ಅಭಿನಯಿಸಿ ಸಂಜುಬಸಯ್ಯ ಮತ್ತೆ ಸಾಕಷ್ಟು ಸದ್ದು ಮಾಡಿದರು. ಇನ್ನು ತಮ್ಮ ಅದ್ಭುತ ಹಾಸ್ಯ ನಟನೆಯ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ಸಂಜುಬಸಯ್ಯ ಅವರು ಮದುವೆಯಾಗುತ್ತಿರುವುದಾಗಿ ಅಧಿಕೃತ ಮಾಹಿತಿಯನ್ನು ಹೊರಹಾಕಿದ್ದಾರೆ. ಹೌದು ಫ್ರೆಂಡ್ಸ್ ಸಂಜು ಅವರ ಗರ್ಲ್ಫ್ರೆಂಡ್ ಯಾವ ಹೀರೋಯಿನ್ಗೂ ಕಮ್ಮಿ ಇಲ್ಲದಂತಹ ಸೌಂದರ್ಯವತಿ ಆಗಿದ್ದಾರೆ ಎಂದರೆ ತಪ್ಪಾಗಲಾರದು.

ನೋಡುವುದಕ್ಕೆ ಎಷ್ಟು ಸುಂದರವಾಗಿದ್ದರೋ ಅವರ ಮನಸ್ಸು ಕೂಡ ಅಷ್ಟೇ ಸುಂದರ ಮತ್ತು ಸರಳ ಎಂದು ಸಂಜುಬಸಯ್ಯ ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಇನ್ನು ಬೆಳಗಾಂ ಜಿಲ್ಲೆಯಲ್ಲಿ ಚಿಕ್ಕಂದಿನಿಂದಲೂ ಒಟ್ಟಿಗೆ ಓದುತ್ತಾ ಆಡಿಕೊಂಡು ಬೆಳೆದಂತಹ ಪಲ್ಲವಿ ಅವರನ್ನು ಸಂಜುಬಸಯ್ಯ ಪ್ರೀತಿಸುತ್ತಿದ್ದು ಮುಂದಿನ ಎಂಟು ವರ್ಷದ ಒಳಗೆ ಮದುವೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ರಕ್ಷಿತಾ ಮತ್ತು ಯೋಗರಾಜ್ ಭಟ್ ಅವರು ಅಧಿಕೃತವಾಗಿ ಹಂಚಿಕೊಂಡು ಸಂಜು ಬಸಯ್ಯ ಅವರಿಗೆ ಶುಭ ಕೋರಿದರು

ಕುಳ್ಳರಿಗೆ ಹೆಣ್ಣು ಸಿಗಲ್ಲ ಎನ್ನುವ ಮಾತು ಸುಳ್ಳಾಯಿತು, ಲವ್ ನಲ್ಲಿ ಬಿದ್ದ ಸಂಜು ಬಸಯ್ಯ!!  ಈ ಕಾಮಿಡಿ ಕಿಲಾಡಿ ಯಾ ಮನಗೆದ್ದ ಹುಡುಗಿ ಯಾರು ಗೊತ್ತಾ?? ಎತ್ತರ ಅಂತೂ ...

ಹೌದು ಇತ್ತೀಚಿಗಷ್ಟೇ ಚಿತ್ರರಂಗದಲ್ಲಿ ಹೆಸರು ಗಳಿಸಲು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಸಂಜು ಪ್ರಯತ್ನ ಮಾಡುತ್ತಿದ್ದಾರೆ, ಹೀಗಾಗಿ ತಾವು ಅಂದುಕೊಂಡಿರುವಂತಹ ಗುರಿ ತಲುಪಿದ ಮೇಲೆ ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿದರು‌. ಈ ಮುದ್ದಾದ ಜೋಡಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...