ಇತ್ತೀಚೆಗೆ ಡ್ರ’ಗ್ಸ್ ವಿಷಯದಲ್ಲಿ ಭಾರೀ ಸುದ್ದಿಯಾಗಿದ್ದ ನಟಿ ಸಂಜನಾ ಗಲ್ರಾಣಿ ಮತ್ತೆ ಇಂದು ಸುದ್ದಿಯಾಗಿದ್ದಾರೆ. ಹಲವು ದಿನ ಕಂಬಿಎಣಿಸಿ ಬಂದಿದ್ದ ಸಂಜನಾ ಮೇಲೆ ಇದೀಗ ಎಫ್.ಐ.ಆರ್. ದಾಖಲಾಗಿದೆ. ಈಗ ಅವರ ಮೇಲೆ ಹೊಸ ಕೇಸ್​ ಬೀಳಲು ಕಾರಣ ವಿಸ್ಕಿ ಎರಚಿ ಹ’ಲ್ಲೆ ಮಾಡಿದ್ದು. ವಿಸ್ಕಿ ಎರಚಿ ಹ’ಲ್ಲೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಎಫ್​.ಐ.ಆರ್ ದಾಖಲಾಗಿದೆ. ಬೆಂಗಳೂರಿನ ಕಬ್ಬನ್​ಪಾರ್ಕ್​ ಪೊಲೀಸರು ಎಫ್​.ಐ.ಆರ್ ದಾಖಲಿಸಿದ್ದಾರೆ.

ಮಾಡೆಲ್ ವಂದನಾ ಜೈನ್ ಎಂಬಾಕೆ ನೀಡಿದ್ದ ದೂರಿನನ್ವಯದ ದಾಖಲಾಗಿದೆ. ಈ ಮೂಲಕ ಸಂಜನಾ-ವಂದನಾ ನಡುವಿನ ಹಳೇ ಗಲಾಟೆಗೆ ಮರುಜೀವ ಬಂದಂತಾಗಿದೆ. 2019ರಲ್ಲಿ ಲ್ಯಾವೆಲ್ಲೆ ರಸ್ತೆಯ ಕ್ಲಬ್​ವೊಂದರಲ್ಲಿ ಇದು ನಡೆದಿತ್ತು. ಇಲ್ಲಿ ವಂದನಾ-ಸಂಜನಾ ನಡುವೆ ಗ’ಲಾಟೆ ನಡೆದಿತ್ತು. ವಂದನಾ ಸ್ನೇಹಿತನ ಜೊತೆ ವಂದನಾ ವಿರುದ್ಧವೇ ಅವಹೇಳನಕಾರಿಯಾಗಿ ಸಂಜನಾ ಮಾತನಾಡಿದ್ದರು ಎನ್ನಲಾಗಿದ್ದು, ನಂತರ ನಡೆದ ಜಗಳದಲ್ಲಿ ಸಂಜನಾ ತನಗೆ ವಿಸ್ಕಿ ಎರಚಿ ಹ’ಲ್ಲೆ ಮಾಡಿ, ಕಣ್ಣಿಗೂ ಗಾ’ಯ ಮಾಡಿದ್ದರು ಎಂಬುದಾಗಿ ವಂದನಾ ದೂರು ನೀಡಿದ್ದರು.

ಇವೆಲ್ಲದರ ನಡುವೆ ಸಂಜನಾ ಗಲ್ರಾನಿ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾದವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಹಾಕಿರುವ ನಟಿ ಸಂಜನಾ, ‘ಈ ಸಮಯದಲ್ಲಿ ಬಹಳ ಮೊದಲ ಅಗತ್ಯವಾಗಿರುವ ಬೆಡ್ ಹಾಗೂ ಆಮ್ಲಜನಕದ ವ್ಯವಸ್ಥೆ ಮಾಡುವ ದಾರಿ ನನಗೆ ಗೊತ್ತಿಲ್ಲ. ಹಾಗಾಗಿ ಈ ಲಾಕ್‌ಡೌನ್ ಅವಧಿಯಲ್ಲಿ ಹಸಿವು ಹೋಗಲಾಡಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ’ ಎಂದಿದ್ದಾರೆ. ಉಚಿತವಾಗಿ ದಿನಸಿ ವಿತರಿಸುವ ಕಾರ್ಯ ಮಾಡುತ್ತಿರುವುದಾಗಿ ಹೇಳಿದ ಸಂಜನಾ ತಾವು ವಿತರಣೆ ಮಾಡಲು ತಯಾರು ಮಾಡಿಟ್ಟುಕೊಂಡಿರುವ ದೊಡ್ಡ ದಿನಸಿ ಪ್ಯಾಕೆಟ್‌ಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •