ನಟಿ ಸಂಜನಾ ಹಾಗೂ ರಾಗಿಣಿ.. ಸದ್ಯ ಈ ವರ್ಷ 2020 ಏನು ಬೇಕಾದರೂ ನಡೆಯಬಹುದೆನ್ನುವುದಕ್ಕೆ ಮತ್ತೊಂದು ಉದಾಹರಣೆಯಾದ ಘಟನೆಯಲ್ಲಿ ಕೇಳಿ ಬಂದ ಹೆಸರುಗಳು.. ಕೆಲ ತಿಂಗಳ ಹಿಂದೆ ಸ್ಯಾಂಡಲ್ವುಡ್ ನ ಪ್ರಚಲಿತ ವಿಚಾರದಲ್ಲಿ ಸಿಲುಕಿಕೊಂಡು ಮೂರು ತಿಂಗಳು ಕಾಲ ಪರಪ್ಪನ ಅಗ್ರಹಾರದಲ್ಲಿ ಕಳೆದ ಸಿನಿತಾರೆಯರು.. ಆದರೀಗ ರಾಗಿಣಿಗೆ ಒಲಿಯದ ಅದೃಷ್ಟ ನಟಿ ಸಂಜನಾಗೆ ಒಲಿದು ಬಂದಿದೆ..

ಹೌದು ನಟಿ ಸಂಜನಾಗೆ ಇಂದು ಜಾಮೀನು ಮಂಜುರಾಗಿದೆ.. ಅತ್ತ ನಟಿ ರಾಗಿಣಿಯನ್ನು ಹೊರ ಕರೆತರಲು ರಾಗಿಣಿ ಅವರ ತಂದೆ ತಾಯಿ‌ ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.. ಕೋರ್ಟು ಲಾಯರ್ ಖರ್ಚಿಗಾಗಿ ಇದ್ದ ಮನೆಯನ್ನೇ ಮಾರಲು ಮುಂದಾದರು.. ಆದರೆ ಮನೆ ಮಾರಾಟವಾಗದ ಕಾರಣ ರಾಗಿಣಿಯ ಐಶಾರಾಮಿ ಕಾರುಗಳನ್ನು ಮಾರಲು ಮುಂದಾಗಿದ್ದರು.. ಆದರೆ ಹೈ ಕೋರ್ಟ್ ನಲ್ಲಿಯೂ ರಾಗಿಣಿಗೆ ಜಾಮೀನು ಸಿಗದೆ ಸುಪ್ರಿಂ ಕೋರ್ಟಿನಲ್ಲಿ ಮನವಿ ಸಲ್ಲಿಸುತ್ತಿರುವುದಾಗಿ ಮಾಹಿತಿ ಬಂದಿತ್ತು.. ಅದರಂತೆ ರಾಗಿಣಿ ಕುಟುಂಬ ಸುಪ್ರಿಂ ಕೋರ್ಟಿನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿತ್ತಾದರೂ ಅರ್ಜಿ ವಿಚಾರಣೆ ವಜಾಗೊಂಡಿದ್ದು ಜನವರಿ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ‌‌..

Sanjana-Ragini.

ಆದರೆ ಈ ಮೊದಲು ನಟಿ ಸಂಜನಾಳಿಗೂ ಹೈಕೋರ್ಟಿನಲ್ಲಿ ಜಾಮೀನು ನಿರಾಕರಣೆಯಾಗಿತ್ತು.. ಆದರೆ ಹೈಕೋರ್ಟ್ ನಲ್ಲಿಯೇ ಮತ್ತೆ ಮೇಲ್ಮನವಿ ಸಲ್ಲಿಸಿದ ನಟಿ ಸಂಜನಾಗೆ ಇದೀಗ ಜಾಮೀನು ಸಿಕ್ಕಿದೆ.. ಇನ್ನು ಮೂರು ತಿಂಗಳ ಬಳಿಕ ಹೊರ ಬರುತ್ತಿರುವ ಸಂಜನಾ ಹೇಗಿದ್ದಾರೆ ಗೊತ್ತಾ? ಹೋಗುವಾಗ ಆರೋಗ್ಯವಂತಳಾಗಿ ಹೋಗಿದ್ದ ಸಂಜನಾ ಅವರಿಗೆ ಇದೀಗ ತೀರಾ ಆರೋಗ್ಯ ಹದಗೆಟ್ಟಿದ್ದು ಶಸ್ತ್ರಚಿ ಕಿತ್ಸೆಗೆ ಒಳಾಗಾಗುವಷ್ಟು ಆರೋಗ್ಯ ಸಮಸ್ಯೆಯಾಗಿದೆ.. ಹೌದು ಸಂಜನಾರಿಗೆ ಜಾಮೀನು ಸಿಗಲು ಮುಖ್ಯ ಕಾರಣವೇ ಇದಾಗಿದ್ದು ಸಂಜನಾರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ.. ಕೆಲ ದಿನಗಳಿಂದ ತಮಗೆ ಉಸಿರಾಟದ ಸಮಸ್ಯೆ ಇದೆ.. ಚಳಿಗಾಲದಲ್ಲಿ ಅದು ಇನ್ನೂ ಹೆಚ್ಚಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದರು..

ಸಂಜನಾ ಸಲ್ಲಿಸಿದ ಜಾಮೀನು ಅರ್ಜಿಗೆ ಹೈಕೋರ್ಟಿನ ಏಕಸದಸ್ಯ ನ್ಯಾಯಪೀಠ ಇಂದು ಷರತ್ತುಬದ್ಧ ಜಾಮೀನು ನೀಡಿದೆ.. ಆರೋಗ್ಯ ತೀರಾ ಹದಗೆಟ್ಟಿದೆ.. ನನಗೆ ಜಾಮೀನು ಬೇಕು ಎಂದು ಸಂಜನಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಡಿಸೆಂಬರ್ ಹತ್ತರೊಳಗೆ ರಿಪೋರ್ಟ್ ನೀಡುವಂತೆ ತಿಳಿಸಿತ್ತು.. ಇದೀಗ ವೈದ್ಯಕೀಯ ವರದಿ ಬಂದಿದ್ದು ಅದನ್ನು ಆಧರಿಸಿ ನಟಿ ಸಂಜನಾರಿಗೆ ಜಾಮೀನು ಮಂಜೂರಾಗಿದೆ.. ಸೆಪ್ಟೆಂಬರ್ 8 ರಿಂದ ಡಿಸೆಂಬರ್ 11 ರವರೆಗೆ ಸತತ ಮೂರು ತಿಂಗಳು ಪೊಲೀಸರ ವಶದಲ್ಲಿದ್ದ ಸಂಜನಾರಿಗೆ ಬಿಡುಗಡೆಯ ಭಾಗ್ಯ ದೊರಕಿದ್ದು ಅತ್ತ ರಾಗಿಣಿಯ ಪಾಡು ಎಂದಿನಂತೆ ಜನವರಿಯ ವರೆಗೆ ಇದೇ ಆಗಿರುತ್ತದೆ.‌.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •