ಗಂಡ-ಹೆಂಡತಿ

‘ಗಂಡ-ಹೆಂಡತಿ’ ಚಿತ್ರದ ಕೆಟ್ಟ ಅನುಭವ ಹಂಚಿಕೊಂಡ ಸಂಜನಾ: ನಿರ್ದೇಶಕರ ಮೇಲೆ ಗಂಭೀರ ಆರೋಪ

Cinema/ಸಿನಿಮಾ Home Kannada News/ಸುದ್ದಿಗಳು

ಬಾಲಿವುಡ್ ನಲ್ಲಿ #MeToo ಅಭಿಯಾನಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ, ಸ್ಯಾಂಡಲ್ ವುಡ್ ನಲ್ಲೂ ಒಬ್ಬೊಬ್ಬರೇ ಮೀಟೂ ಅಭಿಯಾನದಲ್ಲಿ ತಮ್ಮ ಮೇಲೆ ಆದ ಕಿರುಕುಳ, ದೌರ್ಜನ್ಯಗಳನ್ನ ಬಯಲು ಮಾಡ್ತಿದ್ದಾರೆ.

ಇತ್ತೀಚಿಗಷ್ಟೆ ನಟಿ ಸಂಗೀತಾ ಭಟ್ ಕನ್ನಡ ಚಿತ್ರರಂಗದಲ್ಲಿ ತಾನು ಎದುರಿಸಿದ ನೋವು, ಹಿಂಸೆಯನ್ನ ಬಿಚ್ಚಿಟ್ಟಿದ್ದರು. ಕಳೆದ ಹತ್ತು ವರ್ಷದಿಂದ ಇಂಡಸ್ಟ್ರಿಯಲ್ಲಿ ಕೆಲವು ನಿರ್ದೇಶಕ ಹಾಗೂ ನಟರು ಹೇಗೆ ತನ್ನನ್ನು ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು ಎಂದು ವಿವರವಾಗಿ ಬರೆದುಕೊಂಡಿದ್ದರು.

ಇದೀಗ, ‘ಗಂಡ-ಹೆಂಡತಿ’ ಖ್ಯಾತಿಯ ಸಂಜನಾ ಮಾತನಾಡಿದ್ದು, ತನಗೆ ಅಪ್ರಾಪ್ತ ವಯಸ್ಸಿನಲ್ಲಿಯೇ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೌದು, ಸಂಜನಾ ಅಭಿನಯಿಸಿದ್ದ ಚೊಚ್ಚಲ ಸಿನಿಮಾ ‘ಗಂಡ-ಹೆಂಡತಿ’ ವೇಳೆ ನಡೆದ ಕೆಲವು ಕಹಿ ಘಟನೆಗಳನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ…..’ಗಂಡ-ಹೆಂಡತಿ’ ಮಾಡಿದಾಗ ನನಗೆ 16 ವರ್ಷ 2006ರಲ್ಲಿ ಬಿಡುಗಡೆಯಾಗಿದ್ದ ‘ಗಂಡ-ಹೆಂಡತಿ’ ಸಿನಿಮಾ ಮೂಲಕ ಸಂಜನಾ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಈ ಸಿನಿಮಾ ಮಾಡಿದಾಗ ಸಂಜನಾಗೆ ಕೇವಲ 16 ವರ್ಷ ವಯಸ್ಸಂತೆ.
Ganda Hendathi – ಗಂಡ ಹೆಂಡತಿ| Kannada Full Movies | Vishal Hegde, Sanjjaana, Thilak - YouTube
ಈ ಸಿನಿಮಾ ಚಿತ್ರೀಕರಣದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರು ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ರು ಎಂದು ಈಗ ಸಂಜನಾ ಆರೋಪ ಮಾಡಿದ್ದಾರೆ.ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ರು ‘ಹಿಂದಿಯ ‘ಮರ್ಡರ್’ ಸಿನಿಮಾದ ರೀಮೇಕ್ ಎಂದು ಗೊತ್ತಿತ್ತು. ಆದ್ರೆ, ಸೌತ್ ಇಂಡಸ್ಟ್ರಿಗೆ ತಕ್ಕಂತೆ ಸಿನಿಮಾ ಬದಲಾಯಿಸುತ್ತೇವೆ. ನಮ್ಮ ಸಂಸ್ಕ್ರತಿಗೆ ತಕ್ಕಂತೆ ಸಿನಿಮಾ ಮಾಡ್ತೀವಿ ಅಂತ ಹೇಳಿದ್ದಕ್ಕೆ ನಾನು ಒಪ್ಪಿಕೊಂಡೆ. ಈ ಚಿತ್ರದಲ್ಲಿ ಒಂದು ಕಿಸ್ ಸೀನ್ ಇಡ್ತೀವಿ ಅಷ್ಟೇ ಅಂದ್ರು. ಆದ್ರೆ, ಒತ್ತಾಯ ಪೂರ್ವಕ ಹೆಚ್ಚು ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ರು’ ಎಂದು ಸಂಜನಾ ಹೇಳಿಕೊಂಡಿದ್ದಾರೆ.ಭಯ ಪಡಿಸಿ ಶೂಟಿಂಗ್ ಮಾಡಿಸಿದ್ರು ‘ನಾನು ಆಗತಾನೆ ಚಿತ್ರರಂಗಕ್ಕೆ ಹೊಸದಾಗಿ ಬಂದಿದ್ದೆ. ಒಂದು ಕಿಸ್ ಸೀನ್ ಅಂದಿದ್ದಕ್ಕೆ ಒಪ್ಪಿಕೊಂಡಿದ್ದೆ. ಆದ್ರೆ, ಮತ್ತೆ ಮತ್ತೆ ಮಾಡು ಅಂದ್ರು. ನಾನು ಆಗಲ್ಲ ಅಂದಿದ್ದಕ್ಕೆ, ನೀನು ಮಾಡ್ಬೇಕು, ಇಲ್ಲ ಅಂದ್ರೆ ನಿರ್ಮಾಪಕರ ಸಂಘಕ್ಕೆ ಹೇಳ್ತೀವಿ ಅಂತ ಬೆದರಿಕೆ ಹಾಕ್ತಿದ್ದರು’ ಎಂದು ಸಂಜನಾ ಬಹಿರಂಗಪಡಿಸಿದ್ದಾರೆ.
ಸಂಜನಾಗೂ ಮುಂಚೆ ಈ ಸ್ಟಾರ್ ನಟಿ 'ಗಂಡ ಹೆಂಡತಿ' ಮಾಡಬೇಕಿತ್ತಂತೆ.! | kannada famous actress was rejects ganda hendathi in 2006 - Kannada Filmibeat
ಬ್ಯಾಂಕಾಕ್ ನಲ್ಲಿ ಆಗಿದ್ದೇನು.? ’21 ದಿನಗಳ ಕಾಲ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಇತ್ತು. ನಾನು ನನ್ನ ಅಮ್ಮನನ್ನು ಕರೆದುಕೊಂಡು ಹೋಗಿದ್ದೆ. ಅದಕ್ಕೆ ಅವರು ವಿರೋಧ ಮಾಡಿದ್ರು. ಶೂಟಿಂಗ್ ಸ್ಥಳಕ್ಕೆ ಕೂಡ ಕರೆದುಕೊಂಡು ಬರ್ತಿರಲಿಲ್ಲ. ಹೋಟೆಲ್ ಬಳಿಯೇ ಬಿಟ್ಟು ಬರ್ತಿದ್ರು. ಒಬ್ಬರೇ ಬರೋಕೆ ಆಗಲ್ವಾ ಎಂದು ಹೇಳ್ತಿದ್ರು. ಇದರಿಂದ ಅಮ್ಮ ಕೂಡ ಭಯ ಪಟ್ಟಿದ್ದರು. ಬಟ್, ನಾವು ಹೊಸಬರು ನಮಗೇನು ಗೊತ್ತಾಗಲಿಲ್ಲ. ನಾಲ್ಕೈದು ದಿನದ ನಂತರ ಅಮ್ಮನನ್ನ ವಾಪಸ್ ಕಳುಹಿಸಿದರು, ಖರ್ಚು ಜಾಸ್ತಿ ಆಗ್ತಿದೆ ಅಂತ’
ಗಂಡ ಹೆಂಡತಿ' ಸಂಧಾನ: ಆರೋಪ ಮಾಡಿದ್ದು ಸಂಜನಾ, 'ಸಾರಿ' ಕೇಳಿದ್ದು ಅವರೇ.! | Sanjjanaa Galrani Apologizes To Ravi Srivatsa - Kannada Filmibeat
ತುಂಬಾ ಕೆಟ್ಟದಾಗಿ ಸಿನಿಮಾ ಮಾಡಲಾಗಿದೆ ‘ಚಿತ್ರದಲ್ಲಿ ಹಲವು ದೃಶ್ಯಗಳನ್ನ ಒತ್ತಾಯದಿಂದ ಮಾಡಿಸಿದ್ದಾರೆ. ಅದರಲ್ಲೂ ಕ್ಯಾಮೆರಾ ಆಂಗಲ್ ಅಂತೂ ತುಂಬಾ ಕಳಪೆಯಾಗಿದೆ. ಎಲ್ಲೆಲ್ಲೋ ಕ್ಯಾಮೆರಾ ಇಟ್ಟಿದ್ದಾರೆ. ಸೆಕ್ಸಿಯಾಗಿ ಸಿನಿಮಾ ಮಾಡೋದೆ ಬೇರೆ, ಅಶ್ಲೀಲವಾಗಿ ಸಿನಿಮಾ ಮಾಡೋದು ಬೇರೆ. ಅಪಾಯಕಾರಿ ಸನ್ನಿವೇಶದಲ್ಲೂ ಶೂಟಿಂಗ್ ಮಾಡಿಸಿದ್ದರು. ನನ್ನ ಮೇಲೆ ರೇಗಾಡ್ತಿದ್ದರು. ಸಾಯೋದಿಲ್ಲ ಏನೂ ಆಗಲ್ಲಾ ಮಾಡು ಅಂತಿದ್ರು’
‘ನನಗೆ ಹೇಳಿದ್ದರಲ್ಲಿ 5 ಪರ್ಸೆಂಟ್ ಕೂಡ ಮಾಡಲಿಲ್ಲ. 100 ಪರ್ಸೆಂಟ್ ಬೇರೆಯದ್ದೇ ಮಾಡಿದ್ರು. ಬಟ್, ನಾನು ಏನೂ ಮಾಡುವಂತಹ ಸ್ಥಿತಿಯಲ್ಲಿರಲಿಲ್ಲ. ಎಲ್ಲವನ್ನ ಸಹಿಸಿಕೊಂಡು ಅಭಿನಯಿಸಿದೆ. ನಂತರ ಸಿನಿಮಾ ರಿಲೀಸ್ ಆದ್ಮೇಲೆ ಒಂದೂವರೆ ವರ್ಷ ಯಾವುದು ಪ್ರಾಜೆಕ್ಟ್ ಇರಲಿಲ್ಲ. ಆಮೇಲೆ ತೆಲುಗಿನಲ್ಲಿ ಅವಕಾಶ ಸಿಕ್ತು. ನಂತರ ನಾನು ನನ್ನ ಪ್ರತಿಭೆಯಿಂದ ಬೆಳೆದು ಬಂದೆ” ಎಂದು ಸಂಜನಾ ತಮ್ಮ ಕಹಿ ನೆನಪುಗಳನ್ನ ಬಹಿರಂಗಪಡಿಸಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...