ನಟಿ-ಸಂಜನಾ-ಗಲ್ರಾನಿ

ಮೊದಲಬಾರಿಗೆ ಗರ್ಭಿಣಿ ಆಗುತ್ತಿರುವ ನಟಿ ಸಂಜನಾ ಗಲ್ರಾನಿ! ಗಂಡ ಯಾರು ಗೊತ್ತೇ? ನೋಡಿ!!

Home

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡಿದ್ದಾರೆ. ಗಂಡ ಹೆಂಡತಿ ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಸಂಜನಾ ಗಲ್ರಾನಿ, ಗಂಡ ಹೆಂಡತಿ ಸಂಜನಾ ಎಂದೇ ಖ್ಯಾತಿ ಗಳಿಸಿದ್ದಾರೆ. ಕನ್ನಡ ಅಷ್ಟೇ ಅಲ್ಲ ತೆಲುಗು ಸಿನಿಮಾದಲ್ಲಿಯೂ ಸಂಜನಾ ನಟಿಸಿದ್ದಾರೆ. ಮೂಲತಃ ಬೆಂಗಳೂರಿನವರಾದ ಸಂಜನಾ ಹಿಂದೂ ಸಂಪ್ರದಾಯದ ಕುಟುಂಬದಲ್ಲಿ ಹುಟ್ಟಿದವರು. ಪದವಿ ವ್ಯಾಸಾಂಗ ಮಾಡುತ್ತಿರುವಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ಸಂಜನಾ ಅವರು ಅನೇಕ ಜಾಹೀರಾತಿನಲ್ಲೂ ಅಭಿನಯಿಸಿದ್ದರು.

ಆ ನಂತರ ಹಿಂದಿಯ ಮರ್ಡರ್ ಚಿತ್ರದ ರಿಮೇಕ್ ಆಗ ಗಂಡ ಹೆಂಡ್ತಿ ಚಿತ್ರದಲ್ಲಿ ನಾಯಕಿಯಾಗಿ , ಮೈಲಾರಿ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ, ಸಾರಿ ಮತ್ತೆ ಬನ್ನಿ ಪ್ರೀತಿಸೋಣ ಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಹೀಗೆ, ತೆಲುಗಿನ ಸೊಗ್ಗುಡು, ತಮಿಳಿನ ಒರು ಕಾದಲ್ ಸೇವಿರ್, ಕನ್ನಡದ ಜಾಕ್ ಪಾಟ್, ಅಟೋಗ್ರಾಫ್ ಪ್ಲೀಸ್, ಅರ್ಜುನ್, ವಾರಸುದಾರ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸಿನಿಮಾ ಕ್ಷೇತ್ರದಲ್ಲಿ ನಟಿಸುವಾಗ ತನ್ನ ವೈಯುಕ್ತಿಕ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಆದರೆ ಯಾವಾಗ 2020 ಯ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಹೆಸರು ಕೇಳಿ ಬಂದು, ಆಕೆ ಜೈಲು ಸೇರಿದ್ರೋ ಆವಾಗ ಸಂಜನಾ ಗಲ್ರಾನಿ ಕುರಿತಾದ ವಿಷಯಗಳು ಹೊರ ಲೋಕಕ್ಕೆ ಗೊತ್ತಾಗಲು ಶುರುವಾಗಿತ್ತು.

Sandalwood Drug Scandal: Actress Sanjana Galrani's Residence Raided

ಸಂಜನಾ ಅವರು ಡಾ ಅಜೀಝ್ ಪಾಷಾ ಅನ್ನುವ ಇಸ್ಲಾಂ ಹುಡುಗನ ಜೊತೆ ಮದುವೆ ಆಗಿರುವ ಬಗ್ಗೆ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ಇದರ ಬಗ್ಗೆ ಸಂಜನಾ ಎಲ್ಲಿಯೂ ಹೇಳಿಕೊಂಡಿರಲಿಲ್ಲ, ತಾನಿನ್ನೂ ಅವಿವಾಹಿತೆ ಅಂತಲೇ ಹೇಳಿಕೊಂಡಿದ್ದರು. ಆದರೆ ಈ ಡ್ರಗ್ಸ್ ಪ್ರಕರಣದ ತನಿಖೆ ವೇಳೆ ಈ ಶಾಕಿಂಗ್ ವಿಷಯ ಬಯಲಾಗಿತ್ತು. ಅಷ್ಟೇ ಅಲ್ಲ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದ ದಾಖಲೆಗಳು ಕೂಡ ಸುದ್ದಿಯಾಗಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಆದರೆ ಇದನ್ನು ಕೂಡ ಸಂಜನಾ ಮೊದ ಮೊದಲು ತಳ್ಳಿ ಹಾಕಿದ್ದರು. ಆದರೆ ಕೊನೆಗೆ ತಾನು ಮದುವೆ ಆಗಿರುವ ಬಗ್ಗೆ ಹಾಗೆಯೇ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವ ಬಗ್ಗೆ ಹೇಳಿಕೊಂಡು ವಿವಾದಕ್ಕೆ ತೆರೆ ಎಳೆದಿದ್ದರು.

Drug scandal puts the spotlight on Sanjjanaa Galrani's marital status | Kannada Movie News - Times of India

ಇದೀಗ ಸಂಜನಾ ಗಲ್ರಾನಿ ಗುಡ್ ನ್ಯೂಸ್ ಕೊಟ್ಟಿದ್ದು, ಮೇ ತಿಂಗಳಲ್ಲಿ ತನ್ನ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಲಿದೆ ಅನ್ನುವುದನು ಹೇಳಿಕೊಂಡಿದ್ದಾರೆ. ಹೌದು, ಸಂಜನಾ ಗಲ್ರಾನಿ ತಾಯಿಯಾಗಿದ್ದು ಮೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ತನಗೆ ಗಂಡು ಮಗು ಆಗಲಿದೆ ಎಂದು ಹೇಳಿಕೊಂಡಿರುವ ಸಂಜನಾ ಈ ಮೂಲಕ ತಾನು ಮೂರು ತಿಂಗಳು ಅನುಭವಿಸಿದ ನೋವು ಕಷ್ಟಗಳನ್ನು ಮರೆತು ತಾಯಿತನದ ಖುಷಿಯನ್ನು ಎಂಜಾಯ್ ಮಾಡುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...