ಬಿಗ್ ಬಾಸ್ ಕನ್ನಡ ಸೀಸನ್ 4 ರಲ್ಲಿ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟು ಫೇಮಸ್ ಆಗುವುದರ ಜೊತೆಗೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದವರು ನಟಿ ಸಂಜನಾ ಚಿದಾನಂದ್. ಬಿಗ್ ಬಾಸ್ ಮಾತ್ರವಲ್ಲದೆ ಕೆಲವು ಕನ್ನಡ ರಿಯಾಲಿಟಿ ಶೋ ಗಳಲ್ಲಿ ಕೂಡ ಸಂಜನಾ ಭಾಗವಹಿಸಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಜನಪ್ರಿಯವಾಗಿದ್ದ ಕುಲವಧು ಧಾರಾವಾಹಿಯಲ್ಲಿ ಕೂಡ ಕೆಲವು ದಿನ ನಟಿಸಿದ್ದರು. ಇವರ ಮದುವೆ ಬಗ್ಗೆ ಸಾಕಷ್ಟು ಗಾ-ಸಿಪ್ ಗಳು ಕೇಳಿ ಬರುತ್ತಿತ್ತು. ಇದೀಗ ಇವರು ಮದುವೆ ಆಗುವ ಹುಡುಗ ಯಾರು ಎಂಬುದು ಗೊತ್ತಾಗಿದೆ. ಅವರು ಯಾರು ಎಂದು ತಿಳಿಯಲು ಮುಂದೆ ಓದಿ..

ಸಂಜನಾ ಚಿದಾನಂದ್ ಉಡುoಬ, ಮೊoಬತ್ತಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೂ ಕಿರಿಕ್ ಕೀರ್ತಿ ನಾಯಕನಾಗಿ ಅಭಿನಯಿಸಿರುವ ಮೊದಲ ಸಿನಿಮಾದಲ್ಲಿ ಸಂಜನಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದ ದಿನಗಳಲ್ಲಿ ಯಾವಾಗಲೂ ಕ್ಯಾಮೆರಾ ನೋಡುತ್ತಾ, ಕ್ಯಾಮೆರಾ ಜೊತೆ ಮಾತನಾಡುತ್ತಲೇ ಫೇಮಸ್ ಆಗಿದ್ದರು ಜೊತೆಗೆ ಟ್ರೋ-ಲ್ ಆಗಿದ್ದರು ಸಂಜನಾ. ಮನೆಯಲ್ಲಿ ಇದ್ದಷ್ಟು ದಿನ ಮುಗ್ದವಾದ ಆಟಿಟ್ಯೂಡ್ ತೋರಿಸುತ್ತಾ ಮನೆಯವರ ಜೊತೆ ಇದ್ದರು. ಇತ್ತೀಚೆಗೆ ಕಿರುತೆರೆಗೆ ರೀಎಂಟ್ರಿ ಕೊಟ್ಟಿರುವ ಸಂಜನಾ, ಪ್ರಸ್ತುತ ಬಹಳ ಫೇಮಸ್ ಆಗಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಇವರ ಪಾತ್ರದಿಂದ ಬ್ರಹ್ಮಗಂಟು ಧಾರಾವಾಹಿಯಲ್ಲಿ ಸಖತ್ ಟ್ವಿಸ್ಟ್ ಸಿಕ್ಕಿತ್ತು. ನಟ ಭುವನ್ ಪೊನ್ನಣ್ಣ ಮತ್ತು ಸಂಜನಾ ಕುರಿತು ಕೆಲವು ಗಾ-ಸಿಪ್ ಗಳು ಸಹ ಕೇಳಿಬಂದಿದ್ದವು. ಭುವನ್ ಸಂಜನಾ ಮದುವೆ ಆಗುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಹಾಗಾಗಿ ಕೆಲವು ವರ್ಷಗಳಿಂದ ಸಂಜನಾ ಮದುವೆ ಬಗ್ಗೆ ಹಲವಾರು ಗಾಸಿಪ್ ಗಳು ಕೇಳಿ ಬರುತ್ತಲೇ ಇವೆ. ಇದೀಗ ಇವರ ಮದುವೆ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿದೆ. ನಟಿ ಸಂಜನಾ ಚಿದಾನಂದ್ ತಾವು ಮದುವೆ ಆಗುತ್ತಿರುವ ಹುಡುಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಜನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಮೋಹನ್. ಇವರು ಸಹ ಸಿನಿರಂಗದ ಕೆಲಸ ಮಾಡುತ್ತಿದ್ದಾರೆ. ಸಂಜನಾ ಮತ್ತು ಮೋಹನ್ ಅವರದ್ದು ಲವ್ ಮ್ಯಾರೇಜ್ ಆಗಲಿದೆ. ಎರಡು ಕುಟುಂಬದ ಒಪ್ಪಿಗೆ ಪಡೆದು ನಂತರ ಮೋಹನ್ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ಸಂಜನಾ. ಭಾವಿ ಪತಿಗೆ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •