ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿರುವ ವಿಚಾರ ಬಿಗ್ ಬಾಸ್ ಖ್ಯಾತಿಯ ಸಂಜನಾ ಚಿದಾನಂದ್ ಅವರ ವಿವಾಹವಾಗುತ್ತಿರುವ ಹುಡುಗ ಯಾರು ಎಂಬುದು? ಹೌದು ಸಾಕಷ್ಟು ವರುಷಗಳಿಂದ ಈ ನಟಿಯ ವಿವಾಹದ ಕುರಿತು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಇದೀಗ ಈ ವಿಚಾರಕ್ಕೆ ತೆರೆ ಬಿದ್ದಿದ್ದು, ಸಂಜನಾ ವಿವಾಹವಾಗುತ್ತಿರುವ ಹುಡುಗನ ಯಾರು? ಏನೂ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಈ ಲೇಖನಿಯಲ್ಲಿ ಓದಿ ತಿಳಿಯಬಹುದು.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಬಿಗ್ ಬಾಸ್ ಮೂಲಕ ಕರುನಾಡ ಪಡ್ಡೆ ಹುಡುಗರ ಗಮನ ಸೆಳೆದ ಸಂಜನಾ ಚಿದಾನಂದ್ ಅವರು ತದನಂತರ ಪ್ರೇಮದ ವಿಚಾರದ ಸಾಕಷ್ಟು ಸುದ್ದಿಯಲ್ಲಿದ್ದರು. ಇದೆಲ್ಲದಕ್ಕಿಂತ ಹೆಚ್ಚಾಗಿ ಹಲವು ವರುಷಗಳ ಕಾಲ ಕೇವಲ ಟ್ರೋಲ್ ಆಗುತ್ತಲೇ ಇದ್ದ ಸಂಜನಾ, ಸಾಮಾಜಿಕ ಜಾಲತಾಣದಲ್ಲಿ ಅರೆಬರೆ ಬಟ್ಟೆಗಳನ್ನು ಹಾಕಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ತುತ್ತಾಗಿದ್ದರು. ಇನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಥಮ್ ಅವರ ಜೊತೆ ಸಂಜನಾ ಪ್ರತಿನಿತ್ಯವೂ ಕೂಡ ಜಗಳವಾಡುತ್ತಾ ಕಣ್ಣೀರಿಡುತ್ತಿದ್ದರೆ,

 

 

ಈ ಸಮಯದಲ್ಲಿ ಭುವನ್ ಅವರು ಸಂಜನಾ ಅವರಿಗೆ ಸಾಂತ್ವನ ಹೇಳುತ್ತಿದ್ದರು.ಇನ್ನು ಬಿಗ್ ಬಾಸ್ ಮನೆಯಲ್ಲಿ ಸಂಜನಾ ಹಾಗೂ ಭುವನ್ ಅವರ ನಡುವಳಿಕೆ ,ಆಪ್ತತೆ ಹಾಗೂ ಬಾಂಧವ್ಯವನ್ನು ನೋಡಿದ ಸ್ಪರ್ಧಿಗಳು ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಹಾಗೂ ಮನೆಯಿಂದ ಹೊರಹೋದ ಮೇಲೆ ವಿವಾಹವಾಗುತ್ತಾರೆ ಎಂದು ಚರ್ಚಿಸುತ್ತಿದ್ದರು. ಅಲ್ಲದೆ ಪ್ರೇಕ್ಷಕರ ವಲಯದಲ್ಲೂ ಕೂಡ ಈ ಪ್ರಶ್ನೆ ಕುತೂಹಲವಾಗಿಯೇ ಕಾಡುತ್ತಿತ್ತು.

 

ಹಲವು ವರ್ಷಗಳಿಂದ ಇದು ಕೇವಲ ಊಹಾಪೋಹಗಳ ಹಾಗೆಯೇ ಉಳಿದಿತ್ತು. ಆದರೆ ಇದೀಗ ಇದಕ್ಕೆ ತೆರೆ ಬಿದ್ದಿದ್ದು ಸಂಜನಾ ಬೇರೆ ಹುಡುಗನನ್ನು ವಿವಾಹವಾಗಿದ್ದಾರೆ. ಹೌದು ಈ ವಿಚಾರವನ್ನು ಸ್ವತಃ ಸಂಜನಾ ಚಿದಾನಂದ್ ಅವರೇ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ತಾವು ವಿವಾಹವಾಗುತ್ತಿರುವ ಹುಡುಗನ ಫೋಟೋವನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಸಂಜನಾ ಅವರು ವಿವಾಹವಾಗುತ್ತಿರುವ ಹುಡುಗನ ಹೆಸರು ಮೋಹನ್,

 

 

ಇವರಿಬ್ಬರ ಮನೆಯಲ್ಲಿಯೂ ಕೂಡ ಒಪ್ಪಿಗೆ ಕೊಟ್ಟ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ. ಇನ್ನು ಮೋಹನ್ ಅವರು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದು ಇವರದ್ದು ಪ್ರೇಮವಿವಾಹ. ಈ ಹಿಂದೆ ಸಂಜನಾ ಹಾಗೂ ಮೋಹನ್ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ನಂತರ ಸ್ನೇಹ ಪ್ರೀತಿಯಾಗಿ, ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೋಹನ್ ಅವರ ಜೊತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿರುವ ಸಂಜನಾ,

 

 

ನನ್ನ ಜೀವನಕ್ಕೆ ನೀನು ಬಂದಿದ್ದಕ್ಕೆ ಧನ್ಯವಾದಗಳು.ನಿನ್ನಂತಹ ರತ್ನವನ್ನು ನನ್ನ ಜೀವನದಲ್ಲಿ ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಸಂಜನಾ ಅವರ ಮನೆಯಲ್ಲಿ ಮದುವೆಯ ಸಿದ್ಧತೆ ಭರದಿಂದ ಸಾಗುತ್ತಿದ್ದು ಕರೋನಾ ನಿಯಂತ್ರಣಕ್ಕೆ ಬಂದ ಕೂಡಲೇ ಈ ಜೋಡಿಗಳು ವಿವಾಹವಾಗಲಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •