ಹೌದು ಜೀವನ ಅನ್ನುವದು ಯಾವತ್ತೂ ಒಂದೇ ರೀತಿ ಸಾಗುವುದಿಲ್ಲ . ಅದರಲ್ಲಿ ಕಷ್ಟ ಮತ್ತು ಸುಖ ಎರಡು ಇರುತ್ತದೆ ಆದರೆ ಸುಖವಾಗಿದ್ದಾಗ ನಮಗೆ ಜೀವನದ ಬೆಲೆ ಗೊತ್ತಾಗುವುದಿಲ್ಲ . ಅದೇ ಕಷ್ಟ ಬಂದಾಗ ಮಾತ್ರ ಅಯ್ಯೋ ಜೀವನ ಇಷ್ಟೇನೆ ಅಂತ ಅನ್ನಿಸಿತ್ತದೆ . ಈ ಮಾತು ಯಾಕೆ ಹೇಳುತ್ತಿದೀವೆ ಅಂದ್ರೆ ಒಂದು ಕಾಲದಲ್ಲಿ ದಕ್ಷಿಣ ಎಲ್ಲ ಪ್ರಮುಖ ನಾಯಕರ ಜೊತೆ ನಟಿಸಿದ್ದ ಖ್ಯಾತ ನಟಿ ಮಾನ್ಯ ನಾಯ್ಡು ಅವರು ಪಾರ್ಶ್ವವಾಯುಗೆ  ತುತ್ತಾಗಿದ್ದಾರೆ .  ಈಗ ಸದ್ಯ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ತಮ್ಮ ದೇಹಕ್ಕೆ ಆಗಿರುವ ನೋವನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ . ಅದು ಏನೆಂದು ನೀವೇ ನೋಡಿ. ಈ ತರ ದೈಹಿಕ ಬಾದೆ ನಮ್ಮ ಯಾವ ಶತ್ರುವಿಗೂ ಬಾರದೆ ಇರಲಿ  

ಸಾಹಸಸಿಂಹ ಡಾ.ವಿಷ್ಣುವರ್ಧನ್, ಚಾಲೇಂಜಿಂಗ್ ಸ್ಟಾರ್ ದರ್ಶನ್, ರೋರಿಂಗ್ ಸ್ಟಾರ್ ಶ್ರೀಮುರುಳಿ ಸೇರಿದಂತೆ ಹಲವು ಘಟಾನುಘಟಿ ನಾಯಕರೊಂದಿಗೆ ನಟಿಸಿ, ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿದ್ದ ನಟಿ ಮಾನ್ಯಾ ನಾಯ್ಡು ಇದೀಗ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ವತ: ಮಾನ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, ತಮ್ಮ ಅನಾರೋಗ್ಯ, ಸಂಕಷ್ಟದ ದಿನಗಳ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವಿವಾಹದ ಬಳಿಕ ಹಲವು ವರ್ಷಗಳಿಂದ ಚಿತ್ರ ರಂಗದಿಂದ ದೂರ ಉಳಿದಿರುವ ಮಾನ್ಯಾ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಆರೋಗ್ಯದ ಸ್ಥಿತಿಗತಿ ಬಗ್ಗೆ ಹೇಳಿಕೊಂಡಿದ್ದಾರೆ.ನಟಿ ಮಾನ್ಯಾ ಇನ್ ಸ್ಟಾಗ್ರಾಂ ನಲ್ಲಿ ತಮ್ಮ ಅನಾರೋಗ್ಯದ ಬಗ್ಗೆ, ಕೋವಿಡ್ ಭೀತಿ ನಡುವೆಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ, ವೈದ್ಯರ ಭರವಸೆ, ಚೇತರಿಸಿಕೊಳ್ಳುತ್ತಿರುವ ರೀತಿ ಎಲ್ಲವನ್ನೂ ಹಂಚಿಕೊಂಡಿದ್ದಾರೆ. 

 

View this post on Instagram

 

A post shared by Manya (@manya_naidu)

ಮಾನ್ಯಾ ಕಳೆದ ಮೂರು ವಾರಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಎಡಗಾಲು ಬಹುತೇಕ ಸ್ವಾಧೀನ ಕಳೆದುಕೊಳ್ಳುವ ಸ್ಥಿತಿಯಲ್ಲಿತ್ತು ಎಂದಿದ್ದಾರೆ. ನೋವಿನಿಂದಾಗಿ ತಮಗೆ ನಡೆಯಲು, ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬದುಕಿನ ಭರವಸೆಯನ್ನೇ ಕಳೆದುಕೊಂಡುಬಿಟ್ಟಿದ್ದೆ. ತುಂಬಾ ಕಷ್ಟದ ದಿನಗಳನ್ನು ಕಳೆದಿದ್ದೇನೆ ಎಂದು ಹೇಳಿದ್ದಾರೆ.

ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದೇನೆ. ಮೊದಲಿನಂತಾಗುವ ವಿಶ್ವಾಸ ಮೂಡಿದೆ. ಪಾರ್ಶ್ವವಾಯುವಿನ ಲಕ್ಷಣ ಕಾಣಿಸಿಕೊಂಡಾಗ ಮೊದಲಿನಂತೆ ಡಾನ್ಸ್ ಮಾಡಲು ಇನ್ನೆಂದಿಗೂ ಸಾಧ್ಯವೇ ಇಲ್ಲ ಎಂದು ಆತಂಕಕ್ಕೊಳಗಾಗಿದ್ದೆ. ಆದರೆ ವೈದ್ಯರು ನಿಧಾನವಾಗಿ ಚೇತರಿಸಿಕೊಂಡ ಬಳಿಕ ಡಾನ್ಸ್ ಮಾಡಬಹುದು ಎಂದು ಭರವಸೆ ನೀಡಿದ್ದಾರೆ. ನನಗೆ ಶಕ್ತಿ ತುಂಬಿದ ದೇವರಿಗೆ ಚಿರಋಣಿಯಾಗಿದ್ದೇನೆ. ನನಗಾಗಿ ಪ್ರಾರ್ಥಿಸಿದ ನನ್ನ ಕುಟುಂಬದವರಿಗೆ, ನನಗಾಗಿ ಬೇಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ಎಂದಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •